ಮುಂಬೈ: ಬಲಿಷ್ಠ ಮುಂಬೈ ತಂಡವನ್ನು 5 ವಿಕೆಟ್ಗಳಿಂದ ಬಗ್ಗುಬಡಿದಿರುವ ಕರ್ನಾಟಕ ತಂಡ ರಣಜಿ ಟ್ರೋಫಿಯಲ್ಲಿ 200ನೇ ಗೆಲುವು ಸಾಧಿಸಿದೆ.
2019-20ರ ಆವೃತ್ತಿಯಲ್ಲಿ ನಾಲ್ಕನೇ ಪಂದ್ಯವಾಡಿದ ಕರ್ನಾಟಕ ತಂಡ, ಮುಂಬೈ ವಿರುದ್ಧ ಎರಡು ಇನ್ನಿಂಗ್ಸ್‌ನಲ್ಲೂ ಪಾರಮ್ಯ ಸಾಧಿಸಿತು. ಮೊದಲ ಇನ್ನಿಂಗ್ಸ್ನಲ್ಲಿ 194 ರನ್‌ಗಳಿಗೆ ಮುಂಬೈ ತಂಡವನ್ನು ಕಟ್ಟಿ ಹಾಕಿದ್ದ ಕರ್ನಾಟಕದ ಬೌಲರ್ಗಳು, ಎರಡನೇ ಇನ್ನಿಂಗ್ಸ್‌ನಲ್ಲೂ ಕೇವಲ 149 ರನ್‌ಗಳಿಗೆ ಸೀಮಿತಗೊಳಿಸಿ 126 ರನ್ಗಳ ಗುರಿ ಪಡೆದಿತ್ತು. ಈ ಮೊತ್ತವನ್ನು 5 ವಿಕೆಟ್ ಕಳೆದುಕೊಂಡು ತಲುಪಿತ್ತು.
200ನೇ ಜಯ ಕಂಡ ಎರಡನೇ ರಣಜಿ ತಂಡ!
ಕರ್ನಾಟಕ ತಂಡ ವಿಜಯಿಯಾಗುತ್ತಿದ್ದಂತೆ ರಣಜಿ ಕ್ರಿಕೆಟ್ ಇತಿಹಾಸದಲ್ಲಿ 200ನೇ ಜಯ ಸಾಧಿಸಿ ಹೊಸ ಮೈಲುಗಲ್ಲು ಸಾಧಿಸಿತು. ಇಷ್ಟೇ ಅಲ್ಲ, ರಣಜಿ ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ಜಯ ಸಾಧಿಸಿದ ಎರಡನೇ ತಂಡ ಎಂಬ ಹೆಗ್ಗಳಿಕೆಗೂ ತಂಡ ಪಾತ್ರವಾಯಿತು.
ರಣಜಿಯಲ್ಲಿ ಮುಂಬೈ ತಂಡ 245 ಪಂದ್ಯಗಳನ್ನು ಗೆದ್ದು ಮೊದಲ ಸ್ಥಾನದಲ್ಲಿದೆ. ಕರ್ನಾಟಕ 200, ದೆಹಲಿ ತಂಡ 188, ತಮಿಳುನಾಡು 159, ಬಂಗಾಳ 156 ಹಾಗೂ ಹೈದರಾಬಾದ್ ತಂಡಗಳು ನಂತರದ ಸ್ಥಾನದಲ್ಲಿವೆ.