ಬೆಂಗಳೂರು: 2019ರ ವಿಜಯ್ ಹಜಾರೆ ಸೀಮಿತ ಓವರ್ಗಳ ಕ್ರಿಕೆಟ್ ಟೂರ್ನಿಯಲ್ಲಿ ಸಂಘಟಿತ ಹೋರಾಟ ನಡೆಸಿ ಗುಂಪು ಹಂತದಲ್ಲಿ ಅಗ್ರಸ್ಥಾನಿಯಾಗಿದ್ದ ಮನೀಷ್ ಪಡೆಗೆ ಕ್ವಾರ್ಟರ್ಫೈನಲ್ನಲ್ಲಿ ಪ್ಲೇಟ್ ಗುಂಪಿ ಟಾಪರ್ ಪಾಂಡಿಚೇರಿ ತಂಡವನ್ನು ಎದುರಿಸಿದೆ.
8 ಪಂದ್ಯಗಳಲ್ಲಿ 7 ಜಯ ಹಾಗೂ 1 ಸೋಲಿನೊಂದಿಗೆ 28 ಆಂಕ ಪಡೆದಿದ್ದ ಕರ್ನಾಟಕ ತಂಡ ಎ ಮತ್ತು ಬಿ ಗುಂಪಿನಲ್ಲಿ ಅಗ್ರಸ್ಥಾನಿಯಾಗಿತ್ತು. ಇನ್ನು ಈ ಗುಂಪಿನಲ್ಲಿ ಕರ್ನಾಟಕ ನಂತರದ ಸ್ಥಾನಪಡೆದಿದ್ದ ಪಂಜಾಬ್, ದೆಹಲಿ, ಛತ್ತೀಸ್ಗಡ, ಮುಂಬೈ ತಂಡಗಳೂ ಕೂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.
ಸಿ ಗುಂಪಿನ ಅಗ್ರ ಎರಡು ತಂಡಗಳಾದ ತಮಿಳುನಾಡು, ಗುಜರಾತ್ ಹಾಗೂ ಪ್ಲೇಟ್(ಡಿ) ಗುಂಪಿನಲ್ಲಿ ಅಗ್ರಸ್ಥಾನಿಯಾಗಿದ್ದ ಪಾಂಡಿಚೇರಿ ಕ್ವಾರ್ಟರ್ಫೈನಲ್ಗೆ ಅರ್ಹತೆಗಿಟ್ಟಿಸಿಕೊಂಡಿದೆ.
ಕ್ವಾರ್ಟರ್ ಫೈನಲ್ ಹಣಾಹಣಿ ಇಂತಿದೆ
ಅಕ್ಟೋಬರ್ 20 ಕರ್ನಾಟಕ ತಂಡ ಪಾಂಡಿಚೇರಿಯನ್ನು, ದೆಹಲಿ ತಂಡ ಗುಜರಾತ್ ತಂಡವನ್ನು ಎದುರಿಸಲಿವೆ. 22 ರಂದು ಪಂಜಾಬ್ ತಮಿಳುನಾಡು ವಿರುದ್ಧ, ಚತ್ತಿಸ್ಘಡ್ ಮುಂಬೈ ವಿರುದ್ಧ ಸೆಣಸಾಡಲಿವೆ.