ETV Bharat / sports

ಟೀಂ ಇಂಡಿಯಾ ಕೋಚ್​​ ಆಯ್ಕೆಗೆ ಮುಹೂರ್ತ ಫಿಕ್ಸ್​​​... ಮುಂಬೈನಲ್ಲಿ ಈ ದಿನವೇ ನಡೆಯಲಿದೆ ಸಂದರ್ಶನ - ಕೋಚ್​ ರವಿಶಾಸ್ತ್ರಿ

ಟೀಂ ಇಂಡಿಯಾ ಕೋಚ್​ ಆಯ್ಕೆಗೆ ಮುಹೂರ್ತ ಫಿಕ್ಸ್​ ಆಗಿದ್ದು, ಆಗಸ್ಟ್​​ 16ರಂದು ಕಪಿಲ್​ ದೇವ್​ ನೇತೃತ್ವದ ಕ್ರಿಕೆಟ್​ ಸಲಹಾ ಮಂಡಳಿ ಸಂದರ್ಶನ ನಡೆಸಲಿದೆ.

ಟೀಂ ಇಂಡಿಯಾ/team india
author img

By

Published : Aug 10, 2019, 8:46 PM IST

ನವದೆಹಲಿ: ಟೀಂ ಇಂಡಿಯಾ ಕ್ರಿಕೆಟ್​ ತಂಡಕ್ಕೆ ಹೊಸ ಕೋಚ್​​ ಹುಡುಕಾಟದಲ್ಲಿ ನಿರಂತವಾಗಿರುವ ಭಾರತೀಯ ಕ್ರಿಕೆಟ್​ ಮಂಡಳಿ ಆಗಸ್ಟ್​​ 16ರಂದು ಅಭ್ಯರ್ಥಿಗಳ ಸಂದರ್ಶನ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಈಗಾಗಲೇ ಲಭ್ಯವಾಗಿರುವ ಮಾಹಿತಿ ಪ್ರಕಾರ 2 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಕಪಿಲ್​ ದೇವ್​ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ಸಂದರ್ಶನ ನಡೆಸಲಿದೆ. ಸಿಎಸಿ ಕಮಿಟಿ ಅಧ್ಯಕ್ಷರೊಬ್ಬರು ತಿಳಿಸಿರುವ ಪ್ರಕಾರ ಆಗಸ್ಟ್​ 16ರಂದು ಮುಂಬೈನಲ್ಲಿ ಟೀಂ ಇಂಡಿಯಾ ಮುಖ್ಯ ಕೋಚ್​ ಹುದ್ದೆಗೆ ಸಂದರ್ಶನ ನಡೆಯಲಿದೆ ಎಂದು ಇ -ಮೇಲ್​ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ಕೆಲ ದಿನಗಳ ಕಾಲ ಇದು ಮುಂದುವರಿಯುವ ಸಾಧ್ಯತೆ ಇದೆ. ತದನಂತರ ಫೈನಲ್​​ ಸಂದರ್ಶನಕ್ಕಾಗಿ 5-6 ಅಭ್ಯರ್ಥಿಗಳನ್ನ ಆಯ್ಕೆ ಮಾಡಿ, ಅದರಲ್ಲಿ ಒಬ್ಬರನ್ನ ನೇಮಕ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕ್ರಿಕೆಟ್​ ಸಲಹಾ ಸಮಿತಿಯಲ್ಲಿ ಕಪಿಲ್​ ದೇವ್​, ಶಾಂತಾ ರಂಗಸ್ವಾಮಿ ಹಾಗೂ ಅಂಶುಮನ್ ಗಾಯಕ್ವಾಡ್ ಇದ್ದಾರೆ. ಈಗಾಗಲೇ ತಂಡದ ಕೋಚ್​ ಆಗಿ ಕಾರ್ಯನಿರ್ವಹಿಸುತ್ತಿರುವ ರವಿಶಾಸ್ತ್ರಿ ನೇರವಾಗಿ ಸಂದರ್ಶಕ್ಕೆ ಹಾಜರಾಗಲಿದ್ದಾರೆ. ಇನ್ನೊಂದು ಅವಧಿಗೂ ಇವರೇ ತಂಡದ ಕೋಚ್​ ಆಗಿ ಮುಂದುವರಿಯುವ ಸಾಧ್ಯತೆ ದಟ್ಟವಾಗಿರುವುದರಿಂದ ಶ್ರೀಲಂಕಾದ ದಿಗ್ಗಜ ಬ್ಯಾಟ್ಸ್​​ಮನ್​ ಮಹೇಲ್​ ಜಯವರ್ಧನೆ ಅರ್ಜಿ ಸಲ್ಲಿಕೆ ಮಾಡಿಲ್ಲ.

ಕೋಚ್​ ಹುದ್ದೆ ರೇಸ್​​ನಲ್ಲಿ ಆಸ್ಟ್ರೇಲಿಯಾದ ಟಾಮ್​ ಮೊಡಿ, ನ್ಯೂಜಿಲ್ಯಾಂಡ್​ನ ಮಾಜಿ ಕೋಚ್​ ಮೈಕ್​ ಹಸ್ಸನ್​​,ಟೀಂ ಇಂಡಿಯಾದ ಮಾಜಿ ಪ್ಲೇಯರ್​​ ರಾಬಿನ್ ಸಿಂಗ್​​, ಲಾಲ್​ಚಂದ್ ರಜಪೂತ್ ಸೇರಿ ಪ್ರಮುಖರು ಅರ್ಜಿ ಸಲ್ಲಿಸಿದ್ದಾರೆ. ಇದರ ಜತೆಗೆ ಫಿಲ್ಡಿಂಗ್​ ಕೋಚ್​ ಹುದ್ದೆಗೆ ಜಾಂಟಿ ರೋಡ್ಸ್ ಅರ್ಜಿ ಸಲ್ಲಿಸಿದ್ದಾರೆ.

ವಿಶ್ವಕಪ್​ ವೇಳೆ ಕೋಚ್​ ರವಿಶಾಸ್ತ್ರಿಯ ಅಧಿಕಾರವಧಿ 45 ದಿನಗಳ ಕಾಲ ವಿಸ್ತರಣೆ ಮಾಡಲಾಗಿತ್ತು. ಹೀಗಾಗಿ ವೆಸ್ಟ್​ ಇಂಡೀಸ್​​ ಪ್ರವಾಸಕ್ಕೂ ಅವರೇ ತಂಡದ ಕೋಚ್​ ಆಗಿ ಮುಂದುವರಿದಿದ್ದು, ಭಾರತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಗೊಳ್ಳಲಿರುವ ಕ್ರಿಕೆಟ್​ ಸರಣಿ ವೇಳೆ ನೂತನ ಕೋಚ್​ ಟೀಂ ಇಂಡಿಯಾ ಸೇರಲಿದ್ದಾರೆ.

Intro:Body:

ಟೀಂ ಇಂಡಿಯಾ ಕೋಚ್​​ ಆಯ್ಕೆಗೆ ಮುಹೂರ್ತ ಫಿಕ್ಸ್​​​... ಈ ದಿನವೇ ತಂಡಕ್ಕೆ ಗುರುವಿನ ಆಯ್ಕೆ! 

ನವದೆಹಲಿ: ಟೀಂ ಇಂಡಿಯಾ ಕ್ರಿಕೆಟ್​ ತಂಡಕ್ಕೆ ಹೊಸ ಕೋಚ್​​ ಹುಡುಕಾಟದಲ್ಲಿ ನಿರಂತವಾಗಿರುವ ಭಾರತೀಯ ಕ್ರಿಕೆಟ್​ ಮಂಡಳಿ ಆಗಸ್ಟ್​​ 16ರಂದು ಅಭ್ಯರ್ಥಿಗಳ ಸಂದರ್ಶನ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. 

ಈಗಾಗಲೇ ಲಭ್ಯವಾಗಿರುವ ಮಾಹಿತಿ ಪ್ರಕಾರ 2 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಕಪಿಲ್​ ದೇವ್​ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ಸಂದರ್ಶನ ನಡೆಸಲಿದೆ. ಸಿಎಸಿ ಕಮೀಟಿ ಅಧ್ಯಕ್ಷರೊಬ್ಬರು ತಿಳಿಸಿರುವ ಪ್ರಕಾರ ಆಗಸ್ಟ್​ 16ರಂದು ಮುಂಬೈನಲ್ಲಿ ಟೀಂ ಇಂಡಿಯಾ ಮುಖ್ಯ ಕೋಚ್​ ಹುದ್ದೆಗೆ ಸಂದರ್ಶನ ನಡೆಯಲಿದೆ ಎಂದು ಈ-ಮೇಲ್​ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ಕೆಲ ದಿನಗಳ ಕಾಲ ಇದು ಮುಂದುವರಿಯುವ ಸಾಧ್ಯತೆ ಇದೆ.ತದನಂತರ ಫೈನಲ್​​ ಸಂದರ್ಶನಕ್ಕಾಗಿ 5-6 ಅಭ್ಯರ್ಥಿಗಳನ್ನ ಆಯ್ಕೆ ಮಾಡಿ, ಅದರಲ್ಲಿ ಒಬ್ಬರನ್ನ ನೇಮಕ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. 

ಕ್ರಿಕೆಟ್​ ಸಲಹಾ ಸಮಿತಿಯಲ್ಲಿ ಕಪಿಲ್​ ದೇವ್​, ಶಾಂತಾ ರಂಗಸ್ವಾಮಿ ಹಾಗೂ ಅಂಶುಮನ್ ಗಾಯಕ್ವಾಡ್ ಇದ್ದಾರೆ. ಈಗಾಗಲೇ ತಂಡದ ಕೋಚ್​ ಆಗಿ ಕಾರ್ಯನಿರ್ವಹಿಸುತ್ತಿರುವ ರವಿಶಾಸ್ತ್ರಿ ನೇರವಾಗಿ ಸಂದರ್ಶಕ್ಕೆ ಹಾಜರಾಗಲಿದ್ದಾರೆ. ಇನ್ನೊಂದು ಅವಧಿಗೂ ಇವರೇ ತಂಡದ ಕೋಚ್​ ಆಗಿ ಮುಂದುವರಿಯುವ ಸಾಧ್ಯತೆ ದಟ್ಟವಾಗಿರುವುದರಿಂದ ಶ್ರೀಲಂಕಾದ ದಿಗ್ಗಜ ಬ್ಯಾಟ್ಸ್​​ಮನ್​ ಮಹೇಲ್​ ಜಯವರ್ಧನೆ ಅರ್ಜಿ ಸಲ್ಲಿಕೆ ಮಾಡಿಲ್ಲ.

ಕೋಚ್​ ಹುದ್ದೆ ರೇಸ್​​ನಲ್ಲಿ ಆಸ್ಟ್ರೇಲಿಯಾದ ಟಾಮ್​ ಮೊಡಿ,ನ್ಯೂಜಿಲ್ಯಾಂಡ್​ನ ಮಾಜಿ ಕೋಚ್​ ಮೈಕ್​ ಹಸ್ಸನ್​​,ಟೀಂ ಇಂಡಿಯಾದ ಮಾಜಿ ಪ್ಲೇಯರ್​​ ರಾಬಿನ್ ಸಿಂಗ್​​, ಲಾಲ್​ಚಂದ್ ರಜಪೂತ್ ಸೇರಿ ಪ್ರಮುಖರು ಅರ್ಜಿ ಸಲ್ಲಿಸಿದ್ದಾರೆ. ಇದರ ಜತೆಗೆ ಫಿಲ್ಡಿಂಗ್​ ಕೋಚ್​ ಹುದ್ದೆಗೆ ಜಾಂಟಿ ರೋಡ್ಸ್ ಅರ್ಜಿ ಸಲ್ಲಿಸಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.