ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ ಫೈನಲ್ ಹಂತಕ್ಕೆ ಬಂದು ನಿಂತಿದೆ. ಇದರ ಮಧ್ಯೆ ಕೆಲ ಯಂಗ್ ಪ್ಲೇಯರ್ಸ್ ಟೂರ್ನಿ ಉದ್ದಕ್ಕೂ ಅದ್ಭುತ ಪ್ರದರ್ಶನ ನೀಡಿ, ಹಿರಿಯ ಪ್ಲೇಯರ್ಸ್ಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಿನ್ನೆಯ ಕ್ವಾಲಿಫೈಯರ್ 2 ಪಂದ್ಯದಲ್ಲಿ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್ ಕೇವಲ 17ರನ್ಗಳ ಅಂತರದ ಸೋಲು ಕಂಡಿದ್ದು, ನಿರಾಸೆ ಅನುಭವಿಸಿದೆ. ಆದರೆ, ತಂಡದಲ್ಲಿದ್ದ ಕೆಲ ಯುವ ಪ್ರತಿಭೆಗಳು ಉತ್ತಮ ಪ್ರದರ್ಶನದ ಮೂಲಕ ಟೀಂ ಇಂಡಿಯಾದ ಭವಿಷ್ಯದ ತಾರೆಗಳಾಗಿ ಗುರುತಿಸಿಕೊಂಡಿವೆ.
ಇದೀಗ ತಂಡದ ಆರಂಭಿಕ ಆಟಗಾರ ಪ್ರಿಯಂ ಗರ್ಗ್ ಬಗ್ಗೆ ನ್ಯೂಜಿಲ್ಯಾಂಡ್ ಕ್ಯಾಪ್ಟನ್ ಹಾಗೂ ಹೈದರಾಬಾದ್ ತಂಡದ ಆಟಗಾರ ಕೇನ್ ವಿಲಿಯಮ್ಸನ್ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಪಂದ್ಯ ಮುಕ್ತಾಯಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಈ ಪ್ರತಿಭೆಗೆ ಬರುವ ದಿನಗಳಲ್ಲಿ ಉತ್ತಮ ಭವಿಷ್ಯವಿದೆ ಎಂದು ಪ್ರಿಯಂ ಗರ್ಗ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ಪ್ರಿಯಂ ಗರ್ಗ್ ಬಳಿ ಅಪಾರ ಪ್ರಮಾಣದ ಪ್ರತಿಭೆ ಇದೆ. ಮುಂದಿನ ದಿನಗಳಲ್ಲಿ ರೋಚಕ ಭವಿಷ್ಯ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಗರ್ಗ್ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಿಲ್ಲ. 14 ಪಂದ್ಯಗಳಿಂದ ಒಂದು ಅರ್ಧಶತಕ ಸೇರಿ 133ರನ್ಗಳಿಕೆ ಮಾಡಿದ್ದಾರೆ. ಆದರೆ, ಅವರಲ್ಲಿ ಉತ್ತಮ ಹೊಡೆತ ಹೊಡೆಯುವ ಕಲೆ ಇದೆ ಎಂದು ತಿಳಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದಲ್ಲಿ ನಾಳೆ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದ್ದು, ಚೊಚ್ಚಲ ಪ್ರಶಸ್ತಿ ಗೆಲುವ ಇರಾದೆಯೊಂದಿಗೆ ಶ್ರೇಯಸ್ ಅಯ್ಯರ್ ಪಡೆ ಕಣಕ್ಕಿಳಿಯಲಿದೆ.