ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳಲ್ಲಿ ಹೀನಾಯ ಸೋಲುಕಂಡಿರುವ ನ್ಯೂಜಿಲ್ಯಾಂಡ್ ತಂಡಕ್ಕೆ ಮೂರನೇ ಪಂದ್ಯಕ್ಕೂ ಮುನ್ನ ಆಟಗಾರರಲ್ಲಿ ಕಾಣಿಸಿಕೊಂಡಿರುವ ಜ್ವರ ಭಾರಿ ಆಘಾತ ತಂದಿದೆ.
ತಂಡದ ಕೆಲವು ಆಟಗಾರರಲ್ಲಿ ಜ್ವರದ ಲಕ್ಷಣ ಕಾಣಿಸಿಕೊಂಡಿದ್ದು ಅವರನ್ನು ಇತರೆ ಆಟಗಾರರಿಂದ ದೂರ ಉಳಿಸಲಾಗಿದೆ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿಯ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಜಿಲ್ಯಾಂಡ್ ತಂಡ ನಾಯಕ ಕೇನ್ ವಿಲಿಯಮ್ಸನ್,ಬ್ಯಾಟ್ಸ್ಮನ್ ಹೆನ್ರಿ ನಿಕೋಲ್ಸ್ರಲ್ಲಿ ಜ್ವರದ ಲಕ್ಷಣ ಕಂಡು ಬಂದಿದೆ. ಆದ್ದರಿಂದ ಅವರು ಬುಧವಾರದ ತರಭೇರಿ ಶಿಬಿರದಲ್ಲಿ ಕಾಣಿಸಿಕೊಂಡಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ನ್ಯೂಜಿಲ್ಯಾಂಡ್ ಬೌಲಿಂಗ್ ಕೋಚ್, "ಜ್ವರದಿಂದ ಬಳಲುತ್ತಿರುವವರ ಆರೋಗ್ಯ ಇಂದು ಉತ್ತಮವಾಗಿದೆ. ಕೆಲವರಲ್ಲಿ ಜ್ವರದ ಲಕ್ಷಣಗಳಿದ್ದು ನಾಳೆಯ ತರಭೇತಿಯ ವೇಳೆಗೆ ಅವರು ಹುಷಾರಾಗಿ ಬರಲಿದ್ದಾರೆ ಎಂಬ ವಿಶ್ವಾಸವಿದೆ. ಇಂದು ಮಾತ್ರ ಅವರಿಗೆ ತೊಂದರೆಯಾಗಬಾರದೆಂದು ವಿಶ್ರಾಂತಿ ನೀಡಲಾಗಿದೆ. ಕೊನೆಯ ಎರಡು ಟೆಸ್ಟ್ನಲ್ಲಿ ಸೋಲನುಭವಿಸಿರುವುದರಿಂದ ಕೊನೆಯ ಟೆಸ್ಟ್ನಲ್ಲಿ ಕಮ್ಬ್ಯಾಕ್ ಮಾಡಲು ಉತ್ತಮ ಅವಕಾಶ ಸಿಕ್ಕಿದೆ ಎಂದು ತಿಳಿಸಿದ್ದಾರೆ.