ಕೇಪ್ಟೌನ್: ವಿಶ್ವಕಂಡ ಶ್ರೇಷ್ಠ ಆಲ್ರೌಂಡರ್ ಜಾಕ್ ಕಾಲೀಸ್ ದಕ್ಷಿಣ ಆಫ್ರಿಕಾದ ನೂತನ ಬ್ಯಾಟಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ.
ಈಗಾಗಲೇ ಮಾರ್ಕ್ ಬೌಷರ್ ದ.ಆಫ್ರಿಕಾ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದು, ಮಹತ್ತರ ಬದಲಾವಣೆ ತಂದಿದ್ದಾರೆ. ಇದೀಗ ಇವರಿಗೆ ಬೆಂಬಲವಾಗಿ ಜಾಕ್ ಕಾಲೀಸ್ ಬ್ಯಾಟಿಂಗ್ ಕೋಚ್ಗೆ ಆಯ್ಕೆಯಾಗಿದ್ದಾರೆ. ಇವರ ಜೊತೆಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯಿಂದ ಕರೆಬಂದ ಹಿನ್ನಲೆ ಬಾಂಗ್ಲಾದೇಶದ ಬೌಲಿಂಗ್ ಕೋಚ್ ಹುದ್ದೆಯನ್ನು ತ್ಯಜಿಸಿರುವ ಚಾರ್ಲ್ ಲಾಂಗ್ವೆಲ್ಟ್ ತಮ್ಮ ತವರು ತಂಡದ ಬೌಲಿಂಗ್ ಕೋಚ್ಆಗಿ ನೇಮಕಗೊಂಡಿದ್ದಾರೆ.
-
Kallis boasts a combined 519 international matches for South Africa with 25 534 runs and 577 wickets. He retired from all forms of international cricket in 2014 after amassing 62 international centuries – 45 Test and 17 ODI – averaging 55.37 and 44.36 in each format respectively. pic.twitter.com/v1uG8vf22R
— Cricket South Africa (@OfficialCSA) December 18, 2019 " class="align-text-top noRightClick twitterSection" data="
">Kallis boasts a combined 519 international matches for South Africa with 25 534 runs and 577 wickets. He retired from all forms of international cricket in 2014 after amassing 62 international centuries – 45 Test and 17 ODI – averaging 55.37 and 44.36 in each format respectively. pic.twitter.com/v1uG8vf22R
— Cricket South Africa (@OfficialCSA) December 18, 2019Kallis boasts a combined 519 international matches for South Africa with 25 534 runs and 577 wickets. He retired from all forms of international cricket in 2014 after amassing 62 international centuries – 45 Test and 17 ODI – averaging 55.37 and 44.36 in each format respectively. pic.twitter.com/v1uG8vf22R
— Cricket South Africa (@OfficialCSA) December 18, 2019
"ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯಿಂದ ನಮಗೆ ಗೌರವಯುತ ಮನವಿ ಬಂದ ಹಿನ್ನಲೆ ಲಾಂಗ್ವೆಲ್ಟ್ರನ್ನು ಕೋಚ್ ಹುದ್ದೆಯಿಂದ ಹೊರಹೋಗುವಂತೆ ಸೂಚಿಸಿದ್ದೇವೆ. ನಮಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ(CSA) ಜೊತೆ ಇರುವ ಬಾಂಧವ್ಯವನ್ನು ಗಟ್ಟಿಗೊಳಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಅಲ್ಲದೆ ಲಾಂಗ್ವೆಲ್ಟ್ ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರರಾಗಿರುವುದರಿಂದ ಹಾಗೂ ಅವರು ತಮ್ಮ ತವರಿನ ತಂಡಕ್ಕೆ ಸೇವೆ ಸಲ್ಲಿಸಲು ಮಾಡಿರುವ ಮನವಿಯನ್ನು ಮನದಲ್ಲಿಟ್ಟುಕೊಂಡು ತ್ವರಿತವಾಗಿ ಕೋಚ್ ತಂಡದಿಂದ ಬಿಟ್ಟುಕೊಟ್ಟಿದ್ದೇವೆ ಎಂದು ಬಿಸಿಬಿ ಸಿಇಒ ನಿಜಾಮ್ ಉದ್ದೀನ್ ಚೌದರಿ ತಿಳಿಸಿದ್ದಾರೆ.
ಡಿಸೆಂಬರ್ನಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯಲ್ಲಿ ಮಹತ್ತರ ಬದಲಾವಣೆಯಾಗಿದ್ದು, ಗ್ರೇಮ್ ಸ್ಮಿತ್ರನ್ನು ಡೈರೆಕ್ಟರ್ ಆಗಿ ನೇಮಕ ಮಾಡಲಾಗಿತ್ತು. ನಂತರ ಮಾರ್ಕ್ಬೌಷರ್ರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿತ್ತು.