ETV Bharat / sports

ಗೌತಮ್​ ಬೌಲಿಂಗ್​ ಮುಂದೆ ಮಂಕಾದ ಕಾರ್ತಿಕ್​ ಶತಕ: ಕರ್ನಾಟಕಕ್ಕೆ ಇನ್ನಿಂಗ್ಸ್​ ಮುನ್ನಡೆ

author img

By

Published : Dec 11, 2019, 4:27 PM IST

ತಮಿಳುನಾಡು ವಿರುದ್ಧ ಕರ್ನಾಟಕ ತಂಡ 29 ರನ್​ಗಳ ಮುನ್ನಡೆ ಸಾಧಿಸಿದೆ. ತಮಿಳುನಾಡು ಪರ ದಿನೇಶ್​ ಕಾರ್ತಿಕ್​ ಶತಕ ಸಿಡಿಸಿದರೆ ಕರ್ನಾಟಕ ಪರ ಕೆ. ಗೌತಮ್​ 6 ವಿಕೆಟ್​ ಸಾಧನೆ ಮಾಡಿದ್ರು.

K Gowtham 6 wickets
K Gowtham 6 wickets

ದಿಂಡಿಗಲ್(ತಮಿಳುನಾಡು)​: ಸಯ್ಯದ್​ ಮುಷ್ತಾಕ್​ ಅಲಿ, ವಿಜಯ್​ ಹಜಾರೆ ಟ್ರೋಫಿ ನಂತರ ರಣಜಿ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಕರ್ನಾಟಕ ತಂಡ ತಮಿಳುನಾಡಿನ ಮೇಲೆ ಮತ್ತೆ ಪ್ರಾಬಲ್ಯ ಸಾಧಿಸಿ ಇನ್ನಿಂಗ್ಸ್​ ಮುನ್ನಡೆ ಸಾಧಿಸುವಲ್ಲಿ ಸಫಲರಾಗಿದ್ದಾರೆ.

ಮೊದಲು ಬ್ಯಾಟಿಂಗ್​ ನಡೆಸಿದ ಕರ್ನಾಟಕ 336 ರನ್ ​ಗಳಿಸಿತ್ತು. ಈ ಮೊತ್ತ ಬೆನ್ನತ್ತಿದ್ದ ತಮಿಳುನಾಡು ಎರಡನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ ಕಳೆದುಕೊಂಡು 165 ರನ್‌ ಗಳಿಸಿತ್ತು. ಮೂರನೇ ದಿನವಾದ ಇಂದು ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 307 ರನ್‌ ಗಳಿಸಲಷ್ಟೇ ಶಕ್ತವಾಯಿತು. ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 336 ರನ್‌ ಗಳಿಸಿತ್ತು. ಜೊತೆಗೆ 29 ರನ್​ಗಳ ಹಿನ್ನಡೆ ಅನುಭವಿಸಿತು.

ತಮಿಳುನಾಡು ಪರ ದಿನೇಶ್​ ಕಾರ್ತಿಕ್​ 235 ಎಸೆತಗಳನ್ನೆದುರಿಸಿ​ 113 ರನ್​ ಗಳಿಸೋ ಮೂಲಕ ಏಕಾಂಗಿ ಹೋರಾಟ ನಡೆಸಿದರು. ಇವರನ್ನು ಬಿಟ್ಟರೆ ಮುಕುಂದ್​ 47, ಮುರಳಿ ವಿಜಯ್​ 32, ಬಾಬಾ ಅಪರಾಜಿತ್​ 37 ರನ್ ​ಗಳಿಸಿದರು.

ಕರ್ನಾಟಕ ಪರ ರೋನಿತ್​ ಮೋರೆ 2, ಕೃಷ್ಣಪ್ಪ ಗೌತಮ್​ 6 ವಿಕೆಟ್​, ವಿ. ಕೌಶಿಕ್​, ಶ್ರೇಯಸ್​ ಗೋಪಾಲ್​ ತಲಾ ಒಂದೊಂದು ವಿಕೆಟ್​ ಪಡೆದರು.

29 ರನ್​ಗಳ ಮುನ್ನಡೆಯೊಂದಿಗೆ ಇನ್ನಿಂಗ್ಸ್​ ಆರಂಭಿಸಿರುವ ಕರ್ನಾಟಕ ಆರಂಭಿಕ ಆಘಾತ ಅನುಭವಿಸಿದೆ. ಆರಂಭಿಕರಾಗಿ ಕಣಕ್ಕಿಳಿದಿದ್ದ ಮಯಾಂಕ್​ ಅಗರ್​ವಾಲ್​ 8 ರನ್​ಗಳಿಸಿ ರನ್​ ಔಟ್​ ಆದರೆ, ದೇಗಾ ನಿಶ್ಚಲ್​ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿ ನಿರಾಶೆ ಮೂಡಿಸಿದ್ದಾರೆ.

ಯುವ ಬ್ಯಾಟ್ಸ್​ಮನ್ ದೇವದತ್​ ಪಡಿಕ್ಕಲ್​ 8 ರನ್​ ಹಾಗೂ ಕರುಣ್​ ನಾಯರ್​ ಕ್ರೀಸ್​ನಲ್ಲಿದ್ದಾರೆ. ಕರ್ನಾಟಕ ತಂಡ 47 ರನ್​ಗಳ ಮುನ್ನಡೆ ಸಾಧಿಸಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.