ETV Bharat / sports

ಮಯಾಂಕ್​ ದ್ವಿಶತಕ, ಬೌಲರ್​ಗಳ ಮಾರಕ ದಾಳಿ: 3 ದಿನಕ್ಕೆ ಮೊದಲ ಟೆಸ್ಟ್​ ಫಿನಿಶ್ ಮಾಡಿದ ಭಾರತ​ - India declares innings for 493 runs

ಮೊದಲ ಟೆಸ್ಟ್​ನಲ್ಲಿ ಸಂಪೂರ್ಭ ಏಕಸ್ವಾಮ್ಯ ಸಾಧಿಸಿದ ಭಾರತ ತಂಡ ಬಾಂಗ್ಲಾದೇಶವನ್ನು 3 ದಿನಗಳಲ್ಲಿ ಎರಡು ಬಾರಿ ಆಲೌಟ್​ ಮಾಡಿ ಇನ್ನಿಂಗ್ಸ್​ ಹಾಗೂ 130 ರನ್​ಗಳಿಂದ ಸೋಲಿಸಿ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ.

ಭಾರತಕ್ಕೆ ಜಯ
author img

By

Published : Nov 16, 2019, 10:50 AM IST

Updated : Nov 16, 2019, 5:01 PM IST

ಇಂದೋರ್​: ಮಯಾಂಕ್ ​ದ್ವಿಶತಕ ಹಾಗೂ ಭಾರತೀಯ ಬೌಲರ್​ಗಳ ಪ್ರಚಂಡ ಬೌಲಿಂಗ್​ ದಾಳಿಯ ನೆರವಿನಿಂದ ಬಾಂಗ್ಲಾದೇಶದ ವಿರುದ್ಧ ಇನ್ನಿಂಗ್ಸ್​ ಹಾಗೂ 130 ರನ್​ಗಳ ಭರ್ಜರಿ ಜಯ ಸಾಧಿಸಿ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸಿದ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್​ನಲ್ಲಿ 150 ರನ್​ಗಳಿಗೆ ಆಲೌಟ್​ ಆಗಿತ್ತು. ಇದಕ್ಕುತ್ತರವಾಗಿ ಭಾರತ ತಂಡ ಮಯಾಂಕ್​(243) ಅವರ ದ್ವಿಶತಕದ ನೆರವಿನಿಂದ 6 ವಿಕೆಟ್​ ಕಳೆದುಕೊಂಡು 493ಕ್ಕೆ ಡಿಕ್ಲೇರ್​ ಘೋಷಿಸಿತ್ತು. ಅಬು ಜಾಯೇದ್​ 4 ವಿಕೆಟ್​ ಪಡೆದು ಬಾಂಗ್ಲಾದೇಶದ ಯಶಸ್ವಿ ಬೌಲರ್​ ಎನಿಸಿಕೊಂಡರು.

343 ರನ್​ಗಳ ಇನ್ನಿಂಗ್ಸ್​ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಬಾಂಗ್ಲಾದೇಶ 69.2 ಓವರ್​ಗಳಲ್ಲಿ 213 ರನ್​ಗಳಿಗೆ ಆಲೌಟ್​ ಆಯಿತು. ಈ ಮೂಲಕ ಇನ್ನಿಂಗ್ಸ್​ ಹಾಗೂ 130 ರನ್​ಗಳ ಸೋಲನುಭವಿಸಿತು.

ಭಾರತದ ಪರ ಮೊಹಮ್ಮದ್​ ಶಮಿ 4 ವಿಕೆಟ್​, ರವಿಚಂದ್ರನ್​ ಅಶ್ವಿನ್​ 3, ಉಮೇಶ್​ ಯಾದವ್​ 2, ಇಶಾಂತ್​ ಶರ್ಮಾ ಒಂದು ವಿಕೆಟ್​ ಪಡೆದರು. ಮೊದಲ ಇನ್ನಿಂಗ್ಸ್​ನಲ್ಲಿ ಶಮಿ 3, ಆಶ್ವಿನ್, ಇಶಾಂತ್​ ಹಾಗೂ ಯಾದವ್​ ತಲಾ 2 ವಿಕೆಟ್​ ಪಡೆದಿದ್ದರು.

ಬಾಂಗ್ಲಾದೇಶದ ಪರ ವಿಕೆಟ್​ ಕೀಪರ್​ ಮುಸ್ಫಿಕರ್​ ರಹೀಮ್​ 64 ರನ್​ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇವರನ್ನು ಬಿಟ್ಟರೆ, ಲಿಟ್ಟನ್​ ದಾಸ್ 35, ಮೆಹೆದಿ ಹಸನ್​ 38 ರನ್​ಗಳಿಸಿದರು.

ಆಕರ್ಷಕ ದ್ವಿಶತಕ ಬಾರಿಸಿದ ಮಯಾಂಕ್​ ಅಗರ್​ವಾಲ್​ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂರು. ನವೆಂಬರ್​ 22 ರಿಂದ 2ರವರೆಗೆ ಕೋಲ್ಕತ್ತಾದ ಈಡನ್​ ಗಾರ್ಡನ್​ನಲ್ಲಿ ಐತಿಹಾಸಿಕ ಆಹರ್ನಿಶಿ ಟೆಸ್ಟ್​ ನಡೆಯಲಿದೆ.

Intro:Body:

cricket

Conclusion:
Last Updated : Nov 16, 2019, 5:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.