ETV Bharat / sports

ಅರ್ಜುನ್​ ಅವಾರ್ಡ್​​: ಬಿಸಿಸಿಐಯಿಂದ ಬುಮ್ರಾ ಹೆಸರು ಶಿಫಾರಸು ಸಾಧ್ಯತೆ - ಅರ್ಜುನ್​ ಅವಾರ್ಡ್​

ಟೀಂ ಇಂಡಿಯಾ ವೇಗಿ ಜಸ್​ಪ್ರೀತ್​ ಬುಮ್ರಾ ಹೆಸರು ಈ ಸಲದ ಅರ್ಜುನ್​​ ಅವಾರ್ಡ್​ ಪ್ರಶಸ್ತಿಗಾಗಿ ಬಿಸಿಸಿಐನಿಂದ ಶಿಫಾರಸುಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

Jasprit Bumrah
Jasprit Bumrah
author img

By

Published : May 13, 2020, 6:59 PM IST

ಮುಂಬೈ: ಟೀಂ ಇಂಡಿಯಾ ಯಾರ್ಕರ್​ ಕಿಂಗ್​ ಜಸ್​ಪ್ರೀತ್​ ಬುಮ್ರಾ ಹೆಸರು ಪ್ರಸಕ್ತ ವರ್ಷದ ಕ್ರೀಡಾ ಪ್ರಶಸ್ತಿ ಅರ್ಜುನ್ ಅವಾರ್ಡ್​ಗೆ ಶಿಫಾರಸುಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.ಈ ಬಗ್ಗೆ ಭಾರತೀಯ ಕ್ರಿಕೆಟ್​ ಮಂಡಳಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಕಳೆದ ವರ್ಷ ರವಿಂದ್ರ ಜಡೇಜಾ ಹಾಗೂ ಮೊಹಮ್ಮದ್​ ಶಮಿ ಜತೆ ಬುಮ್ರಾ ಹೆಸರು ಕೂಡ ಶಿಫಾರಸು ಮಾಡಲಾಗಿತ್ತು. ಆದರೆ ಹೆಚ್ಚು ಅನುಭವ ಇಲ್ಲದ ಕಾರಣ ಅವರು ಪ್ರಶಸ್ತಿಯಿಂದ ವಂಚಿತರಾಗಿದ್ದರು. ಹೀಗಾಗಿ ಈ ಸಲ ಮತ್ತೊಮ್ಮೆ ಬಿಸಿಸಿಐ ಇವರ ಹೆಸರು ಶಿಫಾರಸು ಮಾಡಿದ್ದು, ಇವರ ಜತೆಗೆ ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್​ ಧವನ್​ ಹೆಸರು ಶಿಫಾರಸು ಮಾಡುವ ಸಾಧ್ಯತೆ ದಟ್ಟವಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮೂರು ವರ್ಷ ಮುಕ್ತಾಯ ಮಾಡಿರುವ ಬುಮ್ರಾ ಈಗಾಗಲೇ ಐಸಿಸಿ ಏಕದಿನ ಕ್ರಿಕೆಟ್​ನಲ್ಲಿ ನಂಬರ್​​ 1ಬೌಲರ್​ ಆಗಿದ್ದು, ಅದ್ಭುತ ಬೌಲಿಂಗ್​ ಪ್ರದರ್ಶನ ನೀಡುತ್ತಿದ್ದಾರೆ. 26 ವರ್ಷದ ಈ ಪ್ಲೇಯರ್​​ 14 ಟೆಸ್ಟ್​​ ಪಂದ್ಯಗಳಿಂದ 68 ವಿಕೆಟ್​, 64 ಏಕದಿನ ಪಂದ್ಯಗಳಿಂದ 104 ವಿಕೆಟ್​ ಹಾಗೂ 50 ಟಿ-20 ಪಂದ್ಯಗಳಿಂದ 59 ವಿಕೆಟ್​ ಪಡೆದುಕೊಂಡಿದ್ದಾರೆ.

ಇನ್ನು ಮೊಹಮ್ಮದ್​ ಶಮಿ ಮೇಲೆ ಅವರ ಪತ್ನಿ ಕೇಸ್​ ಹಾಕಿರುವ ಕಾರಣ ಪ್ರಶಸ್ತಿ ನೀಡಲು ಸಾಧ್ಯವಿಲ್ಲ. ಈಗಾಗಲೇ ಟೀಂ ಇಂಡಿಯಾ ಕ್ಯಾಪ್ಟನ್​​ ವಿರಾಟ್​ ಕೊಹ್ಲಿ, ಆರ್​.ಅಶ್ವಿನ್​, ರೋಹಿತ್​ ಶರ್ಮಾ, ರಹಾನೆ, ಚೇತೇಶ್ವರ್​ ಪೂಜಾರ್​, ಜಡೇಜಾ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ.

2018ರಲ್ಲಿ ಶಿಖರ್​ ಧವನ್​ ಹೆಸರು ಶಿಫಾರಸು ಮಾಡಲಾಗಿತ್ತು. ಆದರೆ ಸ್ಮೃತಿ ಮಂಧಾನಾ ಈ ಅವಾರ್ಡ್​ ಪಡೆದುಕೊಂಡಿದ್ದರು. ಮಹಿಳಾ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಆಲ್​ರೌಂಡರ್​​ ದೀಪ್ತಿ ಶರ್ಮಾ ಹಾಗೂ ಬೌಲರ್​​ ಶಿಖಾ ಪಾಂಡೆ ಹೆಸರು ಶಿಫಾರಸು ಮಾಡುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.