ಟ್ರೆನಿಡಾಡ್: ಐಪಿಎಲ್ ಬಿಟ್ಟರೆ ತಕ್ಕಮಟ್ಟಿಗೆ ಹೆಸರು ಮಾಡಿರುವ ಟಿ20 ಲೀಗ್ ಆದ ಸಿಪಿಎಲ್ನಲ್ಲಿ 5ಬಾರಿ ಫೈನಲ್ಗೇರಿರುವ ಗಯಾನ ಅಮೇಜಾನ್ ವಾರಿಯರ್ಸ್ 5 ಬಾರಿಯೂ ರನ್ನರ್ಅಪ್ಗೆ ತೃಪ್ತಿಪಟ್ಟು ನಿರಾಶೆ ಅನುಭವಿಸಿದೆ.
ವಿಶ್ವಪ್ರಸಿದ್ದ ಟಿ20 ಲೀಗ್ ಆದ ಐಪಿಎಲ್ನಲ್ಲಿ ಅತಿ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ಆರ್ಸಿಬಿ 3 ಬಾರಿ ಫೈನಲ್ಗೇರಿ 3 ಬಾರಿಯೂ ರನ್ನರ್ಅಪ್ಗೆ ತೃಪ್ತಿಪಟ್ಟುಕೊಂಡಿದೆ. ಆದರೆ, ಕೆರಿಬಿಯನ್ ಪ್ರೀಮಿಯರ್ನಲ್ಲಿ 7ಆವೃತ್ತಿಗಳಲ್ಲಿ 5 ಬಾರಿ ಫೈನಲ್ ಪ್ರವೇಶಿಸಿರುವ ಗಯಾನ ಅಮೇಜಾನ್ ವಾರಿಯರ್ ತಂಡಕ್ಕೆ ಮಾತ ಚಾಂಪಿಯನ್ ಪಟ್ಟ ದೊರೆಯುತ್ತಿಲ್ಲ.
2019 ಸೀಸನ್ನಲ್ಲಂತೂ ಆಡಿದ 10 ಪಂದ್ಯಗಳಲ್ಲಿ ಒಂದೂ ಪಂದ್ಯ ಸೋಲದ ಅಮೇಜಾನ್ ವಾರಿಯರ್ ತಂಡ ಫೈನಲ್ನಲ್ಲಿ ಬಾರ್ಬಡಸ್ ಟ್ರಿಡೆಂಟ್ಸ್ ವಿರುದ್ಧ 27 ರನ್ಗಳ ಸೋಲನುಭವಿಸಿ ನಿರಾಶೆ ಅನುಭವಿಸಿತು.
ಟೂರ್ನಿಯಲ್ಲಿ 2ನೇ ಸ್ಥಾನದಲ್ಲಿದ್ದ ಬಾರ್ಬಡಸ್ ಈ ಹಿಂದಿನ 2 ಮೂಖಾಮುಖಿಯಲ್ಲೂ ಅಮೇಜಾನ್ ವಿರುದ್ಧ ಸೋಲನುಭವಿಸಿತ್ತು.ಆದರೆ, ಫೈನಲ್ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ 171 ರನ್ಗಳಿಸಿತ್ತು. ಈ ಮೊತ್ತವನ್ನು ಬೆನ್ನೆತ್ತಿದ ಅಮೇಜಾನ್ ವಾರಿಯರ್ಸ್ 144 ರನ್ಗಳಿಸಿ 27 ರನ್ಗಳಿಸಲು ಶಕ್ತವಾಯಿತು. ಈ ಗೆಲುವಿನ ಮೂಲಕ ಬಾರ್ಬಡಸ್ 2ನೇ ಬಾರಿ ಟ್ರೋಫಿ ಎತ್ತಿ ಹಿಡಿಯಿತು.
ಬಾರ್ಬಡಸ್ ಟ್ರಿಡೆಂಟ್ಸ್ ತಂಡವನ್ನು ಜೇಸನ್ ಹೋಲ್ಡರ್ ಮುನ್ನಡೆಸಿದ್ದರೆ ಗಯಾನ ಅಮೇಜಾನ್ ವಾರಿಯರ್ಸ್ ತಂಡವನ್ನು ಶೋಯಬ್ ಮಲಿಕ್ ಮುನ್ನಡೆಸಿದ್ದರು.