ನವದೆಹಲಿ : ಅತ್ಯುತ್ತಮ ರಿವರ್ಸ್ ಸ್ವಿಂಗ್ ಬೌಲರ್ಗಳಲ್ಲಿ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಒಬ್ಬರು ಎಂದು ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಜೇಮ್ಸ್ ಆಂಡರ್ಸನ್ ಬೌಲಿಂಗ್ ಮಾಡುವಾಗ ಇನ್ಸ್ವಿಂಗ್ ಬೌಲಿಂಗ್ ಎಂದು ಬ್ಯಾಟ್ಸ್ಮನ್ಗಳಿಗೆ ಅನಿಸುತ್ತದೆ. ಆದರೆ, ಆಂಡರ್ಸನ್ ಬ್ಯಾಟ್ಸ್ಮನ್ ಮೊಣಕಾಲಿಗೆ ಗುರಿಯಿಟ್ಟು ಔಟ್ ಸ್ವಿಂಗ್ ಬೌಲ್ ಮಾಡುತ್ತಾರೆ. ಈ ರೀತಿ ಬೌಲ್ ಮಾಡುವ ಮೂಲಕ ಬ್ಯಾಟ್ಸ್ಮನ್ಗಳಿಗೆ ಗೊಂದಲ ಉಂಟು ಮಾಡುತ್ತಾರೆ ಎಂದು ಹೇಳಿರುವ ಸಚಿನ್, ಈ ಕುರಿತ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
-
While batting against @jimmy9, I noticed his remarkable ability to bowl reverse swing REVERSE!
— Sachin Tendulkar (@sachin_rt) July 9, 2020 " class="align-text-top noRightClick twitterSection" data="
He is one of the best exponents of this art! Will be interesting to watch him bowl once the ball starts to reverse. #EngvWI @brianlara pic.twitter.com/zhPM8MXsUM
">While batting against @jimmy9, I noticed his remarkable ability to bowl reverse swing REVERSE!
— Sachin Tendulkar (@sachin_rt) July 9, 2020
He is one of the best exponents of this art! Will be interesting to watch him bowl once the ball starts to reverse. #EngvWI @brianlara pic.twitter.com/zhPM8MXsUMWhile batting against @jimmy9, I noticed his remarkable ability to bowl reverse swing REVERSE!
— Sachin Tendulkar (@sachin_rt) July 9, 2020
He is one of the best exponents of this art! Will be interesting to watch him bowl once the ball starts to reverse. #EngvWI @brianlara pic.twitter.com/zhPM8MXsUM
ಇದೇ ರೀತಿಯ ಬೌಲಿಂಗ್ ಶೈಲಿಯನ್ನು ಸ್ಟುವರ್ಟ್ ಬ್ರಾಡ್ ಕೂಡ ಅನುಸರಿಸುತ್ತಾರೆ. ಆದರೆ, ಈ ಶೈಲಿಯನ್ನು ಮೊದಲಿನಿಂದ ಬಳಸಿರುವುದು ಜಿಮಿ ಮಾತ್ರ. ಹಾಗಾಗಿ ನಾನು ಈ ವಿಷಯದಲ್ಲಿ ಬ್ರಾಡ್ಗಿಂತ ಆಂಡರ್ಸನ್ಗೆ ಹೆಚ್ಚಿನ ಮಹತ್ವ ನೀಡುತ್ತೇನೆ. ಆಂಡರ್ಸನ್ ವಿಶ್ವದ ರಿವರ್ಸ್ ಸ್ವಿಂಗ್ ಬೌಲರ್ಗಳಲ್ಲಿ ಅತ್ಯುತ್ತಮರು ಎಂದು ಭಾವಿಸಿರುವುದಾಗಿ ಸಚಿನ್ ತಿಳಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ತನ್ನ ತಂಡವನ್ನು ಸಮರ್ಥವಾಗಿ ಮುನ್ನಡೆಸುವ ಮೂಲಕ ಗೆಲುವಿನತ್ತ ಕೊಂಡೊಯ್ಯತ್ತಾರೆ ಎಂದು ಈ ಹಿಂದೆ ಸಚಿನ್ ಹೇಳಿದ್ದರು.