ETV Bharat / sports

ಹರ್ಭಜನ್​ ಸಿಂಗ್ ಜಾಗಕ್ಕೆ ಈತ ಸೂಕ್ತವಾದ ಆಟಗಾರ:ದೀಪ್​ ದಾಸಗುಪ್ತಾ - Jalaj Saxena deserves a place CSK

2020ರ ಐಪಿಎಲ್​ನಿಂದ ಸುರೇಶ್​ ರೈನಾ ಹೊರಬಂದ ಬೆನ್ನಲ್ಲೇ ಅನುಭವಿ ಬೌಲರ್​ ಹರ್ಭಜನ್​ ಸಿಂಗ್ ಕೂಡ ತಾವೂ ಐಪಿಎಲ್​ನಿಂದ ಹೊರ ಉಳಿಯುವುದಾಗಿ ನಿನ್ನೆ ಘೋಷಿಸಿಕೊಂಡಿದ್ದರು. ಇದೀಗ ಅವರ ಜಾಗಕ್ಕೆ ಸೂಕ್ತವಾದ ಆಟಗಾರನನ್ನು ಹುಡುಕುತ್ತಿರುವ ಸಿಎಸ್​ಕೆಗೆ ಮಾಜಿ ವಿಕೆಟ್​ ಕೀಪರ್​ ದೀಪ್​ ದಾಸಗುಪ್ತಾ, ಆಲ್​ರೌಂಡರ್​ ಜಲಜ್ ಸಕ್ಸೇನಾ ಉತ್ತಮ ಆಯ್ಕೆ ಎಂದಿದ್ದಾರೆ.

ಐಪಿಎಲ್​ 2020
ಹರ್ಭಜನ್​ ಸಿಂಗ್​
author img

By

Published : Sep 5, 2020, 5:52 PM IST

ಮುಂಬೈ: ಭಾರತದ ಮಾಜಿ ವಿಕೆಟ್​ ಕೀಪರ್​ ಹಾಗೂ ಕಾಮಂಟೇಟರ್​ ದೀಪ್​ ದಾಸಗುಪ್ತಾ ವೈಯಕ್ತಿಕ ಕಾರಣಗಳಿಂದ ಸಿಎಸ್​ಕೆಯಿಂದ ಹೊರಬಂದಿರುವ ಹರ್ಭಜನ್​ ಸಿಂಗ್​ ಬದಲಿಗೆ ದೇಶಿ ಪ್ರತಿಭೆ ಜಲಜ್​ ಸಕ್ಷೇನಾು ಸೂಕ್ತವಾದ ಆಟಗಾರ ಎಂದು ತಿಳಿಸಿದ್ದಾರೆ.

2020ರ ಐಪಿಎಲ್​ನಿಂದ ಸುರೇಶ್​ ರೈನಾ ಹೊರಬಂದ ಬೆನ್ನಲ್ಲೇ ಅನುಭವಿ ಬೌಲರ್​ ಹರ್ಭಜನ್​ ಸಿಂಗ್ ಕೂಡ ತಾವೂ ಐಪಿಎಲ್​ನಿಂದ ಹೊರ ಉಳಿಯುವುದಾಗಿ ನಿನ್ನೆ ಘೋಷಿಸಿಕೊಂಡಿದ್ದರು. ಇದೀಗ ಅವರ ಜಾಗಕ್ಕೆ ಸೂಕ್ತವಾದ ಆಟಗಾರನನ್ನು ಹುಡುಕುತ್ತಿರುವ ಸಿಎಸ್​ಕೆ ಪ್ರಾಂಚೈಸಿಗೆ ​ ದೀಪ್​ ದಾಸಗುಪ್ತಾ ಪ್ರಥಮ ದರ್ಜೆ ಕ್ರಿಕೆಟ್​ನ ಆಲ್​ರೌಂಡರ್​ ಸಕ್ಸೇನಾರನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.

ಜಲಜ್ ಸಕ್ಸೇನಾ
ಜಲಜ್ ಸಕ್ಸೇನಾ

33 ವರ್ಷದ ಜಲಜ್​ ಸಕ್ಸೇನಾ 123 ಪ್ರಥಮ ದರ್ಜೆ ಪಂದ್ಯಗಳಿಂದ 6334 ರನ್​ ಸಿಡಿಸಿದ್ದಾರೆ. 14 ಶತಕ ಹಾಗೂ 31 ಅರ್ಧಶತಕ ಕೂಡ ದಾಖಲಿಸಿದ್ದಾರೆ. ಜೊತೆಗೆ 21 ಬಾರಿ 5 ವಿಕೆಟ್​ ಸಾಧನೆ ಮಾಡಿರುವ ಅವರು 347 ವಿಕೆಟ್​ಗಳನ್ನು ಪಡೆದಿದ್ದಾರೆ. 54 ಟಿ20 ಪಂದ್ಯಗಳಿಂದ 633ರನ್​ ಹಾಗೂ 49 ವಿಕೆಟ್​ ಪಡೆದಿದ್ದಾರೆ.

ಭಜ್ಜಿ ಜಾಗಕ್ಕೆ ಜಲಜ್ ಸಕ್ಸೇನಾ ಅರ್ಹರು. ಅವರು ಅದ್ಭುತ ಆಲ್​ರೌಂಡರ್​ ಆಗಿದ್ದು, ಸಿಎಸ್​ಕೆ ಖಂಡಿತ ಅವರನ್ನು ನೋಡಬಹುದೆಂದು ನಾನು ಭಾವಿಸುತ್ತೇನೆ. ಸಕ್ಸೇನಾ ಖಂಡಿತ ಭಜ್ಜಿ ಸ್ಥಾನಕ್ಕೆ ಉತ್ತಮ ಆಯ್ಕೆಯಾಗಿದ್ದಾರೆ ಎಂದು ಕ್ರಿಕ್​ ಇನ್ಫೋಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

ಸಕ್ಸೇನಾ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಮಾತ್ರವಲ್ಲದೆ ಸೀಮಿತ ಓವರ್​ಗಳ ಪಂದ್ಯದಲ್ಲೂ ಸಾಕಷ್ಟು ಅನುಭವ ಹೊಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಸ್ಪಿನ್​ಗೆ ನೆರವು ನೀಡುವ ಯುಎಇನಲ್ಲಿ ಸಿಎಸ್​ಕೆ ಹರ್ಭಜನ್​ ಸಿಂಗ್​ರನ್ನು ಖಂಡಿತ ಮಿಸ್ ಮಾಡಿಕೊಳ್ಳಲಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.