ಹ್ಯಾಮಿಲ್ಟನ್: ಪ್ರವಾಸಿ ಭಾರತ ಹಾಗೂ ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧ ಮೊದಲ ಏಕದಿನ ಪಂದ್ಯ ಇಲ್ಲಿನ ಸೆಡ್ಡನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿದ್ದು, ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಎದುರಾಳಿ ತಂಡದ ಗೆಲುವಿಗೆ 348 ರನ್ ಟಾರ್ಗೆಟ್ ನೀಡಿದೆ.
ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ ಹಾಗೂ ಮಯಾಂಕ್ ಅಗರವಾಲ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಈ ಜೋಡಿ 7.4 ಓವರ್ಗಳಲ್ಲಿ 50ರನ್ಗಳಿಕೆ ಮಾಡಿತು. ಇದಾದ ಬಳಿಕ 20ರನ್ಗಳಿಸಿದ ಪೃಥ್ವಿ ಹಾಗೂ 32ರನ್ಗಳಿಸಿದ್ದ ಮಯಾಂಕ್ ವಿಕೆಟ್ ಒಪ್ಪಿಸಿದರು.
ಇದಾದ ಬಳಿಕ ಕಣಕ್ಕಿಳಿದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ತಂಡಕ್ಕೆ ಆಸರೆಯಾದರು. ಉತ್ತಮ ಫಾರ್ಮ್ನಲ್ಲಿದ್ದ ಕೊಹ್ಲಿ 58ನೇ ಅರ್ಧಶತಕ ಸಿಡಿಸಿ ವಿಕೆಟ್ ಒಪ್ಪಿಸಿದರು. 63 ಎಸೆತಗಳನ್ನು ಎದುರಿಸಿದ ಕೊಹ್ಲಿ ಆರು ಬೌಂಡರಿಗಳಿಂದ 51 ರನ್ ಗಳಿಸಿದರು. ಕೊಹ್ಕಿಗೆ ಉತ್ತಮ ಸಾಥ್ ನೀಡಿದ ಶ್ರೇಯಸ್ ಚೊಚ್ಚಲ ಶತಕ ಸಿಡಿಸಿ ಮಿಂಚಿದರು. 103ರನ್ಗಳಿಕೆ ಮಾಡಿ ಅಯ್ಯರ್ ವಿಕೆಟ್ ಒಪ್ಪಿಸಿದ್ರೆ, ಕನ್ನಡಿಗ ಕೆಎಲ್ ರಾಹುಲ್ ಮತ್ತೊಮ್ಮೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು.
64 ಎಸೆತಗಳಲ್ಲಿ 6 ಸಿಕ್ಸರ್, 3 ಬೌಂಡರಿ ಸೇರಿದಂತೆ ರಾಹುಲ್ 88ರನ್ ಸಿಡಿಸಿದ್ರೆ, 15 ಎಸೆತಗಳಲ್ಲಿ ಕೇದಾರ್ ಜಾಧವ್ 26ರನ್ಗಳಿಕೆ ಮಾಡಿ ತಂಡ ಬೃಹತ್ ಮೊತ್ತ ಗಳಿಕೆ ಮಾಡುವಂತೆ ಮಾಡಿದರು. ನ್ಯೂಜಿಲ್ಯಾಂಡ್ ಪರ ಟಿಮ್ ಸೌಥಿ 2ವಿಕೆಟ್,ಗ್ರ್ಯಾಂಡ್ಹೊಮ್ ಹಾಗೂ ಸೋಧಿ ತಲಾ 1ವಿಕೆಟ್ ಪಡೆದುಕೊಂಡರು.