ಮುಂಬೈ: ಪ್ರತಿಯೊಂದು ಸರಣಿಗೆ ತಂಡದ ಆಯ್ಕೆ ನಡೆಯಯುವಾಗ ಹೆಚ್ಚಿನ ಟೀಕೆಗೆ ಗುರಿಯಾಗುತ್ತಿರುವುದು ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ಕೆ ಪ್ರಸಾದ್. ಇಂತಹ ಟೀಕೆಗಳಿಗೆ ಪ್ರಸಾದ್ ತಮ್ಮ ಟೀಕೆಗೆ ನಯವಾಗಿಯೇ ಉತ್ತರ ಕೊಟ್ಟಿದ್ದಾರೆ.
ಭಾರತ ತಂಡದ ಪರ ಕೇವಲ 17 ಏಕದಿನ ಪಂದ್ಯ ಹಾಗೂ 6 ಟೆಸ್ಟ್ ಪಂದ್ಯಗಳನ್ನಾಡಿರುವ ಎಂಎಸ್ಕೆ ಪ್ರಸಾದ್, ಕಳೆದ ಮೂರು ವರ್ಷಗಳಿಂದ ಬಿಸಿಸಿಐನ ಆಯ್ಕೆ ಸಮಿತಿ ಅಧ್ಯರಾಗಿದ್ದಾರೆ. ಆದರೆ, ಮೂರು ವರ್ಷದ ಈ ಅವಧಿಯಲ್ಲಿ ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡಿದೆಯಾದರೂ 4 ನೇ ಕ್ರಮಾಂಕದ ಸಮಸ್ಯೆ ಮಾತ್ರ ಬಗೆಹರಿಸಲಾಗಲಿಲ್ಲ.
ಪದೇ ಪದೇ ತಮ್ಮ ನೇತೃತ್ವದ ತಂಡವನ್ನು ಸುನಿಲ್ ಗವಾಸ್ಕರ್ರಂತಹ ಮಾಜಿ ಆಟಗಾರರು ಅನನುಭವಿ ತಂಡ ಎಂದು ಕಡೆಗಣಿಸುತ್ತಿದ್ದರು. ಅದಕ್ಕೆ ಉತ್ತರಿಸಿರುವ ಪ್ರಸಾದ್ ಹೆಚ್ಚು ಪಂದ್ಯವನ್ನಾಡಿದವರು ಹೆಚ್ಚು ತಿಳಿದಿರುತ್ತಾರೆ ಎಂಬುವುದು ತಪ್ಪು ತಿಳಿವಳಿಕೆ ಎಂದು ತಮ್ಮ ಮೂರು ವರ್ಷದ ಸಾಧನೆಯನ್ನು ವಿವರಿಸಿದ್ದಾರೆ.
ನಾನು 15 ಪಂದ್ಯವನ್ನಾಡಿದರೂ ಆಡಿದ್ದೇನೆ, ಆದರೆ ಒಂದೂ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ರಾಜ್ ಸಿಂಗ್ ಡುಂಗಾರ್ಪುರ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಸಚಿನ್ರಂತ ಡೈಮಂಡ್ ಉದಯಕ್ಕೆ ಕಾರಣರಾಗಿದ್ದರು. ಪ್ರಸ್ತುತ ಇಸಿಬಿ ಅಧ್ಯಕ್ಷ ಎಡ್ ಸ್ಮಿತ್ ಕೇವಲ ಒಂದು ಪಂದ್ಯವಾಡಿದ್ದರೆ, ಕಳೆದ 10 ವರ್ಷಗಳಿಂದ ಆಸ್ಟ್ರೇಲಿಯಾ ಸೆಲೆಕ್ಷನ್ ಕಮಿಟಿಯ ಅಧ್ಯಕ್ಷರಾಗಿದ್ದಾರೆ. ಇವರ ಕೈಕೆಳಗೆ 128 ಟೆಸ್ಟ್ ಹಾಗೂ 244 ಏಕದಿನ ಪಂದ್ಯಗಳನ್ನಾಡಿರುವ ಮಾರ್ಕ್ ವಾ ಕಾರ್ಯ ನಿರ್ವಹಿಸುತ್ತಿದ್ದಾರೆ.
ಭಾರತ ತಂಡದ ಕೋಚ್ ಆಗಿದ್ದ ಗ್ರೇಗ್ ಚಾಪೆಲ್ ಕೂಡಾ ಟ್ರೆವರ್ ಕೈಕೆಳಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಎಷ್ಟು ಪಂದ್ಯಗಳನ್ನಾಡಿದ್ದಾರೆ ಎಂಬುದರಿಂದ ಎಷ್ಟು ತಿಳಿದಿದ್ದಾರೆ ಎಂಬುದನ್ನು ಅಳೆಯಬಾರದು ಎಂದು ತಮ್ಮ ತಂಡದ ವಿರುದ್ಧದ ಟೀಕೆಗಳಿಗೆ ಉತ್ತರಿಸಿದ್ದಾರೆ.
ಅಲ್ಲದೇ ನಮ್ಮ ನೇತೃತ್ವದಲ್ಲಿ ರಚಿತವಾಗಿರುವ ತಂಡದಿಂದ ಟೆಸ್ಟ್ನಲ್ಲಿ 13 ಪಂದ್ಯಗಳಲ್ಲಿ 11 ಪಂದ್ಯ ಗೆದ್ದಿದೆ. ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಮೂರು ವರ್ಷದಿಂದ ನಂಬರ್ ಒನ್ ಸ್ಥಾನದಲ್ಲಿದ್ದೇವೆ. ಏಕದಿನ ಕ್ರಿಕೆಟ್ನಲ್ಲೂ ನಂಬರ್ 2 ಸ್ಥಾನ ಕಾಪಾಡಿಕೊಂಡಿದೆ. 2 ಏಷ್ಯಾಕಪ್ ಚಾಂಪಿಯನ್, ಚಾಂಪಿಯನ್ ಟ್ರೋಫಿ ರನ್ನರ್ ಆಪ್ ಆಗಿದ್ದೇವೆ.
ಇನ್ನು ಭಾರತ ಎ ತಂಡ ನಮ್ಮ ಅವಧಿಯಲ್ಲಿ ಆಡಿರುವ 11 ಏಕದಿನ ಸರಣಿಯಲ್ಲೂ ಗೆಲುವು ಸಾಧಿಸಿದೆ. 9 ಟೆಸ್ಟ್ ಸರಣಿಯಲ್ಲಿ 8 ರಲ್ಲಿ ಜಯ ಹಾಗೂ 1 ರಲ್ಲಿ ಮಾತ್ರ ಸೋಲುಕಂಡಿದೆ. ಒಟ್ಟಾರೆ 35 ಕ್ರಿಕೆಟಿಗರು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ನಮ್ಮ ಅವಧಿಯಲ್ಲಿ ಭಾರತ ತಂಡ ಹೆಚ್ಚು ಯಶಸ್ಸು ಕಂಡಿದೆ. ನಮ್ಮ ಕಾರ್ಯಕ್ಷಮತೆ ಬಗ್ಗೆ ನಮಗೆ ಸಂತೋಷವಿದೆ. ಮುಂಬರುವ ಆಯ್ಕೆ ಸಮಿತಿಗೆ ಖುಷಿಯಿಂದಲೇ ಅಧಿಕಾರ ವರ್ಗಾಯಿಸುತ್ತೇವೆ ಎಂದು ಪ್ರಸಾದ್ ತಿಳಿಸಿದ್ದಾರೆ.