ETV Bharat / sports

ಇದು ಎಚ್ಚರಿಕೆ ಘಂಟೆ, ನಿರ್ಲಕ್ಷ್ಯ ಮಾಡಲ್ಲ: ಆಸ್ಟ್ರೇಲಿಯಾ ಕ್ರಿಕೆಟ್ ಕೋಚ್​

author img

By

Published : Feb 2, 2021, 4:01 PM IST

ಕಳೆದ ತಿಂಗಳ ಭಾರತ - ಆಸ್ಟ್ರೇಲಿಯಾ ನಡುವೆ ನಡೆದಿದ್ದ ಟೆಸ್ಟ್​ ಸರಣಿಯಲ್ಲಿ ಟೀಂ ಇಂಡಿಯಾ 2-1 ಅಂತರದಿಂದ ಗೆಲುವು ದಾಖಲು ಮಾಡಿದ್ದು, ಕಾಂಗರೂ ಪಡೆ ವಿರುದ್ಧ ಅಲ್ಲಿನ ಕೆಲ ಹಿರಿಯ ಆಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Langer
Langer

ಮೆಲ್ಬೋರ್ನ್​: ಆಸ್ಟ್ರೇಲಿಯಾ ನೆಲದಲ್ಲಿ ಟೀಂ ಇಂಡಿಯಾ ಟೆಸ್ಟ್ ಸರಣಿಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ್ದು, ಎಲ್ಲಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ. ಆದರೆ ಕಾಂಗರೂ ತಂಡ ಹಾಗೂ ಕೋಚ್​ಗೆ ಇನ್ನಿಲ್ಲದ ಟೀಕೆ ವ್ಯಕ್ತವಾಗ್ತಿದ್ದು, ಕೆಲ ಹಿರಿಯ ಪ್ಲೇಯರ್ಸ್ ತರಾಟೆ ತೆಗೆದುಕೊಂಡಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೋಚ್​ ಜಸ್ಟೀನ್ ಲ್ಯಾಂಗರ್​ ವಿರುದ್ಧ ಕೂಡ ಟೀಕೆ ಕೇಳಿ ಬಂದಿದ್ದು, ಅವರ ಕೋಚಿಂಗ್​ ಸ್ಟೈಲ್ ಸರಿಯಾಗಿಲ್ಲ ಎಂದು ಹೇಳಲಾಗುತ್ತಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಇದು ಎಚ್ಚರಿಕೆ ಘಂಟೆ, ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ನಿನ್ನ ವಿರುದ್ಧ ಕೇಳಿ ಬಂದಿರು ಆರೋಪಗಳನ್ನ ನಾನು ಉಡುಗೊರೆ ರೀತಿಯಲ್ಲಿ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.

ಓದಿ: ಭಾರತ - ಇಂಗ್ಲೆಂಡ್ ಟೆಸ್ಟ್​ಗೆ ಮೊಟೆರಾ ಸಜ್ಜು: ಪಂದ್ಯ ವೀಕ್ಷಣೆಗೆ ಪಿಎಂ ಆಗಮನ ಸಾಧ್ಯತೆ

ನಾನು ಕೋಚಿಂಗ್​​ ವೃತ್ತಿ ಜೀವನ ಆರಂಭಿಸಿದಾಗಿನಿಂದಲೂ ಅನನುಭವಿ ತರಬೇತುದಾರನೆಂದು ಕಲಿತುಕೊಳ್ಳುತ್ತಿದ್ದೇನೆ. ಕೋಚಿಂಗ್​ ಕೆಲಸವನ್ನ ನಾನು ಸಂತೋಷದಿಂದ ನಿರ್ವಹಿಸುತ್ತಿದ್ದೇನೆ ಎಂದಿದ್ದಾರೆ. ಆಸ್ಟ್ರೇಲಿಯಾ ತಂಡದ ಸೋಲಿನ ಬಗ್ಗೆ ಕಳೆದ ಕೆಲ ದಿನಗಳ ಹಿಂದೆ ಮಾತನಾಡಿದ್ದ ಲ್ಯಾಂಗರ್​, ಪಾಠ ಕಲಿತ್ತಿದ್ದೇವೆ. ಯಾವುದೇ ಕಾರಣಕ್ಕೂ ಭಾರತವನ್ನ ಲಘುವಾಗಿ ಪರಿಗಣಿಸುವುದಿಲ್ಲ ಎಂದು ಹೇಳಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.