ನವದೆಹಲಿ: ಪ್ರಸಕ್ತ ಸಾಲಿನ ಕ್ರೀಡಾ ಇಲಾಖೆ ನೀಡುವ ಅತ್ಯುನ್ನತ ಅರ್ಜುನ್ ಅವಾರ್ಡ್ ಇಶಾಂತ್ ಶರ್ಮಾಗೂ ಸಿಕ್ಕಿದ್ದು, ಇದೇ ವಿಚಾರವಾಗಿ ಇದೀಗ ಅವರ ವಿಡಿಯೋ ಶೇರ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
-
'A proud moment for me and my family,' @ImIshant on winning the Arjuna Award for 2020.#TeamIndia pic.twitter.com/VbVdWN0qWE
— BCCI (@BCCI) August 24, 2020 " class="align-text-top noRightClick twitterSection" data="
">'A proud moment for me and my family,' @ImIshant on winning the Arjuna Award for 2020.#TeamIndia pic.twitter.com/VbVdWN0qWE
— BCCI (@BCCI) August 24, 2020'A proud moment for me and my family,' @ImIshant on winning the Arjuna Award for 2020.#TeamIndia pic.twitter.com/VbVdWN0qWE
— BCCI (@BCCI) August 24, 2020
ಅರ್ಜುನ್ ಅವಾರ್ಡ್ ಸಿಕ್ಕಿರುವುದು ನನಗೆ ಮತ್ತು ನನ್ನ ಕುಟುಂಬಕ್ಕೆ ಸಂತೋಷ ನೀಡಿದೆ. ನನಗಿಂತ ಹೆಚ್ಚಾಗಿ, ನಾನು ಈ ಪ್ರಶಸ್ತಿಗೆ ಅರ್ಹನೆಂದು ನನ್ನ ಪತ್ನಿ ನಂಬಿದ್ದಳು ಎಂದಿರುವ ವೇಗದ ಬೌಲರ್, ಕಳೆದ 13 ವರ್ಷಗಳ ಕಾಲ ನಾನು ಪಟ್ಟಿರುವ ಶ್ರಮಕ್ಕೆ ಸಿಕ್ಕಿರುವ ಪ್ರತಿಫಲ ಇದಾಗಿದೆ ಎಂದು ತಿಳಿಸಿದ್ದಾರೆ.
ಭಾರತೀಯ ಮಹಿಳಾ ತಂಡದ ಬಾಸ್ಕೇಟ್ ಬಾಲ್ ಆಟಗಾರ್ತಿಯಾಗಿರುವ ಇಶಾಂತ್ ಶರ್ಮಾ ಪತ್ನಿ ಪ್ರತೀಮಾ ಸಿಂಗ್, ನೀವೂ ಈ ಪ್ರಶಸ್ತಿಗೆ ಅರ್ಹರಾಗಿದ್ದೀರಿ ಎಂದು ತಿಳಿಸಿದ್ದು, ನಿಮಗಿಂತಲೂ ನನಗೆ ಹೆಚ್ಚಿನ ಸಂತೋಷವಾಗಿದೆ ಎಂದು ತಿಳಿಸಿದ್ದಾಗಿ ಇಶಾಂತ್ ಶರ್ಮಾ ಹೇಳಿದ್ದಾರೆ.
2020ನೇ ಸಾಲಿನ ಅರ್ಜುನ್ ಅವಾರ್ಡ್ 27 ಕ್ರೀಡಾಪಟುಗಳಿಗೆ ಘೋಷಣೆಯಾಗಿದ್ದು, ಅದರಲ್ಲಿ ಇಶಾಂತ್ ಶರ್ಮಾ ಜತೆಗೆ ಮಹಿಳಾ ತಂಡದ ಕ್ರಿಕೆಟರ್ ದಿಪ್ತಿ ಶರ್ಮಾ ಕೂಡ ಸೇರಿದ್ದಾರೆ.