ಅಹ್ಮದಾಬಾದ್ : ಭಾರತ ತಂಡದ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ನಲ್ಲಿ ಆಡುವ ಮೂಲಕ ಕಪಿಲ್ ದೇವ್ ನಂತರ 100 ಟೆಸ್ಟ್ ಪಂದ್ಯಗಳನ್ನಾಡಿದ 2ನೇ ವೇಗದ ಬೌಲರ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
32 ವರ್ಷದ ಇಶಾಂತ್ ಶರ್ಮಾ ಭಾರತ ತಂಡದ ಪರ 99 ಟೆಸ್ಟ್ ಪಂದ್ಯವನ್ನಾಡಿದ್ದು, 302 ವಿಕೆಟ್ ಪಡೆದಿದ್ದರು. ಇದೀಗ ವಿಶ್ವದ ಅತ್ಯಂತ ದೊಡ್ಡ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯ ಡೆಲ್ಲಿ ವೇಗಿ ಪಾಲಿಗೆ 100ನೇ ಟೆಸ್ಟ್ ಪಂದ್ಯವಾಗಿದೆ.
ರಾಹುಲ್ ದ್ರಾವಿಡ್ ಭಾರತ ತಂಡದ ನಾಯಕನಾಗಿದ್ದ ವೇಳೆ ತನ್ನ 18ನೇ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಇಶಾಂತ್ ಶರ್ಮಾ, ನಂತರ ಅನಿಲ್ ಕುಂಬ್ಳೆ, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಆಡಿದ್ದಾರೆ.
-
.@ImIshant was felicitated by the Honourable President of India Shri Ram Nath Kovind & Honourable Home Minister of India Shri Amit Shah before the start of play here in Ahmedabad.@rashtrapatibhvn @AmitShah pic.twitter.com/7elMWDa9ye
— BCCI (@BCCI) February 24, 2021 " class="align-text-top noRightClick twitterSection" data="
">.@ImIshant was felicitated by the Honourable President of India Shri Ram Nath Kovind & Honourable Home Minister of India Shri Amit Shah before the start of play here in Ahmedabad.@rashtrapatibhvn @AmitShah pic.twitter.com/7elMWDa9ye
— BCCI (@BCCI) February 24, 2021.@ImIshant was felicitated by the Honourable President of India Shri Ram Nath Kovind & Honourable Home Minister of India Shri Amit Shah before the start of play here in Ahmedabad.@rashtrapatibhvn @AmitShah pic.twitter.com/7elMWDa9ye
— BCCI (@BCCI) February 24, 2021
ಇಂದು ಪಂದ್ಯಾರಂಭಕ್ಕೂ ಮುನ್ನ ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ನೆನಪಿನ ಕಾಣಿಕೆ ಪಡೆದರು.
ಇಶಾಂತ್ ಶರ್ಮಾ 100ನೇ ಟೆಸ್ಟ್ ಆಡುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿರುವ ನಾಯಕ ವಿರಾಟ್ ಕೊಹ್ಲಿ, ಭಾರತದಂತಹ ವೇಗಿಗಳಿಗೆ ಕಠಿಣವಾಗಿರುವ ಪರಿಸ್ಥಿತಿಯಲ್ಲಿ 100 ಟೆಸ್ಟ್ ಆಡುವುದು ಅದ್ಭುತ ಸಾಧನೆ ಎಂದಿದ್ದಾರೆ.
ಕಪಿಲ್ ದೇವ್ 131 ಟೆಸ್ಟ್ಗಳನ್ನಾಡಿರುವ ಭಾರತದ ಏಕೈಕ ಟೆಸ್ಟ್ ಬೌಲರ್ ಆಗಿದ್ದಾರೆ. ಇದೀಗ ಇಶಾಂತ್ ಶರ್ಮಾ 100ನೇ ಟೆಸ್ಟ್ ಪಂದ್ಯವನ್ನಾಡಿದ 2ನೇ ಬೌಲರ್ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ. ಇಶಾಂತ್ಗೆ 32 ವರ್ಷ ವಯಸ್ಸಾಗಿದ್ದು, ಕಪಿಲ್ ದಾಖಲೆ ಮುರಿಯುವ ಸಾಧ್ಯತೆ ಕೂಡ ಇದೆ.
ಇದನ್ನು ಓದಿ:ಪಶ್ಚಿಮ ಬಂಗಾಳ ಚುನಾವಣೆ: ಟಿಎಂಸಿ ಪಕ್ಷ ಸೇರಿದ ಕ್ರಿಕೆಟರ್ ಮನೋಜ್ ತಿವಾರಿ!