ETV Bharat / sports

ನಿಜಕ್ಕೂ ಅಚ್ಚರಿ!... LPLನಲ್ಲಿ ರಸೆಲ್​ಗೆ ಸಮನಾದ ವೇತನ ಪಡೆಯುತ್ತಿರುವ ಇರ್ಪಾನ್ ಪಠಾಣ್​!

author img

By

Published : Dec 3, 2020, 9:36 PM IST

ಎಲ್​ಪಿಎಲ್​ನಲ್ಲಿ 5 ತಂಡಗಳಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಲಂಕಾ ಪ್ರತಿನಿಧಿಸುತ್ತಿರುವ ಹಾಗೂ ಎಲ್​ಪಿಎಲ್​ ತಂಡಗಳ ನಾಯಕರಿಗೆ 60,000 ಯುಎಸ್​ ಡಾಲರ್ (ಸುಮಾರ 44.32 ಲಕ್ಷ ರೂ) ನೀಡುತ್ತಿದೆ. ದ್ವಿತೀಯ ವಿಭಾಗದ ಆಟಗಾರರಿಗೆ 50, 000 ಯುಎಸ್ ಡಾಲರ್( ಸುಮಾರು 36.93 ಲಕ್ಷ ರೂ) ಹಾಗೂ ಮೂರನೇ ವರ್ಗದ ಆಟಗಾರರಿಗೆ 40,000 ಯುಎಸ್​ ಡಾಲರ್​(ಸುಮಾರು 29.55 ಲಕ್ಷ ರೂ) ನೀಡುತ್ತಿದೆ.

LPLನಲ್ಲಿ ರಸೆಲ್​ಗೆ ಸಮನಾದ ವೇತನ ಪಡೆಯುತ್ತಿರುವ ಇರ್ಪಾನ್ ಪಠಾಣ್

ಕೊಲೊಂಬೊ: ಶ್ರೀಲಂಕಾ ಕ್ರಿಕೆಟ್ ಆಯೋಜನೆ ಮಾಡುತ್ತಿರುವ ಚೊಚ್ಚಲ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್​ನಲ್ಲಿ ಆಟಗಾರರ ವೇತನ ಬಹಿರಂಗಗೊಂಡಿದ್ದು, ಭಾರತ ತಂಡದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್​ ಹಾಗೂ ವಿಂಡೀಸ್ ಸ್ಟಾರ್​ ಆಲ್​ರೌಂಡರ್​ ಆ್ಯಂಡ್ರೆ ರಸೆಲ್ ಇಬ್ಬರ ವೇತನ ಸಮವಾಗಿದೆ ಎಂಬ ಅಚ್ಚರಿ ಅಂಶ ಬೆಳಕಿಗೆ ಬಂದಿದೆ.

ಎಲ್​ಪಿಎಲ್​ನಲ್ಲಿ 5 ತಂಡಗಳಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಲಂಕಾ ಪ್ರತಿನಿಧಿಸುತ್ತಿರುವ ಹಾಗೂ ಎಲ್​ಪಿಎಲ್​ ತಂಡಗಳ ನಾಯಕರಿಗೆ 60,000 ಯುಎಸ್​ ಡಾಲರ್ ( ಸುಮಾರು 44.32 ಲಕ್ಷ ರೂ) ನೀಡುತ್ತಿದೆ. ದ್ವಿತೀಯ ವಿಭಾಗದ ಆಟಗಾರರಿಗೆ 50, 000 ಯುಎಸ್ ಡಾಲರ್( ಸುಮಾರು 36.93 ಲಕ್ಷ ರೂ) ಹಾಗೂ ಮೂರನೇ ವರ್ಗದ ಆಟಗಾರರಿಗೆ 40,000 ಯುಎಸ್​ ಡಾಲರ್​(ಸುಮಾರು 29.55 ಲಕ್ಷ ರೂ) ನೀಡುತ್ತಿದೆ.

ಲಂಕಾ ಪ್ರೀಮಿಯರ್ ಲೀಗ್​
ಲಂಕಾ ಪ್ರೀಮಿಯರ್ ಲೀಗ್​

ಇದರ ಪ್ರಕಾರ ದಾಸುನ್ ಶನಕ, ಕುಸಲ್ ಪೆರೆರಾ, ಏಂಜಲೊ ಮ್ಯಾಥ್ಯೂಸ್, ತಿಸಾರ ಪೆರೆರಾ 60 ಸಾವಿರ ಯುಎಸ್​ಡಿ, ವಿದೇಶಿ ಸ್ಟಾರ್ ಆಟಗಾರರಾದ ರಸೆಲ್, ಇರ್ಫಾನ್​ ಪಠಾಣ್, ಶಾಹೀದ್ ಅಫ್ರಿದಿ, ಡೇಲ್ ಸ್ಟೈನ್ ಜೊತೆಗೆ ಲಂಕಾ ಆಟಗಾರರಾದ ಡಿಸಿಲ್ವ, ಹಸರಂಗ 50 ಸಾವಿರ ಯುಎಸ್​ಡಿ ಪಡೆಯುತ್ತಿದ್ದಾರೆ.

ಭಾರತದ ಮಾಜಿ ಬೌಲರ್​ಗಳಾದ ಮನ್​ಪ್ರೀತ್ ಗೋನಿ, ಸುದೀಪ್ ತ್ಯಾಗಿ, ಹಜರತ್ತುಲ್ಲಾ ಝಾಝೈ, ಪ್ಲಂಕೇಟ್​, ಮಲಿಕ್​, ಕುಶಾಲ್ ಮೆಂಡಿಸ್​, ಇಸುರು ಉದಾನ, ಅವಿಶ್ಕಾ ಫರ್ನಾಂಡೋ 40 ಸಾವಿರ ಯುಎಸ್​ಡಿ ಪಡೆಯಲಿದ್ದಾರೆ.

4ನೇ ವರ್ಗದಲ್ಲಿರುವ ಸಮಿತ್ ಪಟೇಲ್, ಮೊಹಮ್ಮದ್ ಅಮಿರ್, ಜಾನ್ಸನ್ ಚಾರ್ಲ್ಸ್, ಉಜ್ಮಾನ್​ ಶಿನ್ವಾರಿ, ಲಾಹಿರು ಕುಮಾರ, ಭನುಕಾ ರಾಜಪಕ್ಸ, ನುವಾನ್ ಪ್ರದೀಪ್, ದಿನೇಶ್ ಚಾಂದಿಮಾಲ್, ಧನಂಜಯ ಡಿ'ಸಿಲ್ವಾ, ಓಷಾದಾ ಫರ್ನಾಂಡೊ, ಅಖಿಲ ಧನಂಜಯ, ಸೀಕುಗೆ ಪ್ರಸನ್ನ, ಅಮಿಲಾ ಅಪೊನ್ಸೊ, ಸುರಂಗ ಲಕ್ಷಮಲ್, ಕಸುನ್ ರಜಿತ, ಮಿಲಿಂಡ ಸಿರಿವರ್ಧನೆ, ಅಸೆಲಾ ಗುಣರತ್ನೆ, ಆಶಾನ್ ಪ್ರಿಯಾಂಜನ್, ಬಿನುರಾ ಫರ್ನಾಂಡೊ ಅವರಿಗೆ 25 ಸಾವಿರ ಯುಎಸ್​ಡಿ(18.4 ಲಕ್ಷ ರೂ) ನೀಡಲಾಗುತ್ತಿದೆ.

ಉಳಿದ ಅಂತಾರಾಷ್ಟ್ರೀಯ ಆಟಗಾರರಿಗೆ ಸುಮಾರು 15 ಸಾವಿರ ಯುಎಸ್​ಡಿ( 11.6 ಲಕ್ಷ ರೂ.) ಹಾಗೂ ರಾಷ್ಟ್ರೀಯ ಯುವ ಆಟಗಾರರಿಗೆ 3000 ಯುಎಸ್​ಡಿ( ಸುಮಾರು 2.2 ಲಕ್ಷ ರೂ.)ವೇತನ ನೀಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.