ಸೌತಾಂಪ್ಟನ್: ಇಂಗ್ಲೆಂಡ್ ವಿರುದ್ಧ ಜುಲೈ 30 ರಿಂದ ಆರಂಭವಾಗಲಿರುವ ವಿಶ್ವಕಪ್ ಸೂಪರ್ಲೀಗ್ನ ಮೊದಲ ಸರಣಿಗೆ ಐರ್ಲೆಂಡ್ ತಂಡ ತನ್ನ 14 ಸದಸ್ಯರ ತಂಡ ಪ್ರಕಟಿಸಿದೆ.
ಈ ಸರಣಿಯಲ್ಲಿ ಪ್ರತಿ ಪಂದ್ಯಕ್ಕೂ 14 ಆಟಗಾರರ ತಂಡವನ್ನೇ ಆಯ್ಕೆ ಮಾಡುವುದಾಗಿ ಐರ್ಲೆಂಡ್ ಕ್ರಿಕೆಟ್ ಬೋರ್ಡ್ ಘೋಷಿಸಿದೆ.
ಈ ಸರಣಿಯ ಪ್ರಮುಖ ಅಂಶವೆಂದರೆ ಪ್ರತಿ ಪಂದ್ಯಕ್ಕೂ 14 ಆಟಗಾರರ ತಂಡವನ್ನು ಆಯ್ಕೆ ಮಾಡಬಹುದು, ಯಾವುದೇ ಸಮಯದಲ್ಲಿ ಆಟಗಾರರನ್ನು ಬದಲಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ" ಎಂದು ಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
"ಇದಲ್ಲದೆ, ಐರ್ಲೆಂಡ್ ತನ್ನ 22 ಆಟಗಾರರನ್ನು ಸೌತಾಂಪ್ಟನ್ಗೆ ಪ್ರಯಾಣಿಸಲು ಅನುಮತಿ ನೀಡಿದೆ. ಯಾವುದೇ ಸಂದರ್ಭದಲ್ಲಾದರ ಮೀಸಲಿರುವ ಎಂಟು ಆಟಗಾರರನ್ನು ನಂತರದ ಪಂದ್ಯಕ್ಕೆ ಕರೆಸಿಕೊಳ್ಳಬಹುದು.ಆದ್ದರಿಂದ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೆ ಆಯ್ಕೆದಾರರು ಇಂದು 14 ಆಟಗಾರರನ್ನು ಹೆಸರಿಸಿದ್ದಾರೆ" ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಮೊದಲ ಏಕದಿನ ಪಂದ್ಯದ ಹೊರತಾಗಿ, ಸರಣಿಯ ಉಳಿದ ಎರಡು ಪಂದ್ಯಗಳು ಕ್ರಮವಾಗಿ ಆಗಸ್ಟ್ 1 ಮತ್ತು ಆಗಸ್ಟ್ 4 ರಂದು ಸೌತಾಂಪ್ಟನ್ನಲ್ಲೇ ನಡೆಯಲಿವೆ.
ಇನ್ನು ಇದೇ ಸರಣಿಯಿಂದ ಐಸಿಸಿ ವಿಶ್ವಕಪ್ ಸೂಪರ್ ಲೀಗ್ ಆರಂಭವಾಗಲಿದೆ ಎಂದು ಐಸಿಸಿ ಮಂಗಳವಾರ ಘೋಷಿಸಿದೆ. ಈ ಸೂಪರ್ ಲೀಗ್ನಲ್ಲಿ ಮೊದಲ 7 ಸ್ಥಾನ ಪಡೆಯುವ ತಂಡಗಳ ಭಾರತದಲ್ಲಿ 2023ರ ವಿಶ್ವಕಪ್ಗೆ ನೇರ ಅರ್ಹತೆ ಪಡೆದುಕೊಳ್ಳಲಿವೆ.
14 ಸದಸ್ಯರ ಐರ್ಲೆಂಡ್ ತಂಡ:
ಆಂಡ್ರ್ಯೂ ಬಾಲ್ಬಿರ್ನಿ (ಸಿ), ಪಾಲ್ ಸ್ಟಿರ್ಲಿಂಗ್ (ವಿಸಿ), ಕರ್ಟಿಸ್ ಕ್ಯಾಂಪರ್,ಗ್ಯಾರೆತ್ ಡೆಲಾನಿ, ಜೋಶ್ ಲಿಟಲ್, ಆಂಡ್ರ್ಯೂ ಮೆಕ್‌ಬ್ರೈನ್, ಬ್ಯಾರಿ ಮೆಕಾರ್ಥಿ, ಕೆವಿನ್ ಒ'ಬ್ರಿಯೆನ್, ವಿಲಿಯಂ ಪೋರ್ಟರ್‌ಫೀಲ್ಡ್, ಬಾಯ್ಡ್ ರಾಂಕಿನ್, ಸಿಮಿ ಸಿಂಗ್, ಹ್ಯಾರಿ ಟೆಕ್ಟರ್, ಲಾರ್ಕನ್ ಟಕರ್, ಕ್ರೇಗ್ ಯಂಗ್.