ನವದೆಹಲಿ: 2020ರ ಐಪಿಎಲ್ ವೀಕ್ಷಕರ ಸಂಖ್ಯೆ ಮತ್ತು ರೇಟಿಂಗ್ ವಿಷಯದಲ್ಲಿ ಪಡೆಯುತ್ತಿರುವ ಪ್ರತಿಕ್ರಿಯೆಗೆ ಸಂತೋಷ ವ್ಯಕ್ತಪಡಿಸಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇದರಿಂದ ಹೆಚ್ಚೇನು ಅಶ್ಚರ್ಯವಿಲ್ಲ ಏಕೆಂದರೆ ಐಪಿಎಲ್ ವಿಶ್ವದ ಅತ್ಯುತ್ತಮ ಲೀಗ್ ಎಂದಿದ್ದಾರೆ.
2020ರ ಐಪಿಎಲ್ ಈ ವರ್ಷದ ಮಾರ್ಚ್ನಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್ 19 ಬಿಕ್ಕಟ್ಟಿನಿಂದ ಸೆಪ್ಟೆಂಬರ್ಗೆ ಮುಂದೂಡಲ್ಲಪಟ್ಟಿದ್ದಲ್ಲದೆ, ಯುಎಇಗೆ ವರ್ಗಾವಣೆಗೊಂಡಿತ್ತು.
" ಇದು ನಂಬಲಸಾಧ್ಯವಾಗಿದೆ, ಆದರೆ ನನಗೆ ಇದರಿಂದ ಆಶ್ಚರ್ಯವಾಗಿಲ್ಲ. ನಾವು ಸ್ಟಾರ್ ಚಾನೆಲ್ ಜೊತೆ ಟೂರ್ನಿ ಆಯೋಜನೆಗೆ ಒಂದು ತಿಂಗಳ ಹಿಂದೆ ಈ ವರ್ಷ ಲೀಗ್ ನಡೆಯುವುದೇ ಅಥವಾ ಇಲ್ಲವೇ ಎಂಬುವುದರ ಬಗ್ಗೆ ಯೋಚಿಸುತ್ತಿದ್ದೆವು. ಆದರೆ ಬಯೋ ಬಬಲ್ನಿಂದ ಫಲಿತಾಂಶ ಯಶಸ್ವಿಯಾಗಿದೆ" ಎಂದು ಗಂಗೂಲಿ ಹೇಳಿದ್ದಾರೆ.
ನಾವು ನಮ್ಮ ಯೋಜನೆಗಳಂತೆ ಮುಂದುವರೆಯಲು ನಿರ್ಧರಿಸಿದೆವು. ಏಕೆಂದರೆ ನಾವು ಎಲ್ಲರ ಜೀವನದಲ್ಲಿ ಸಾಮಾನ್ಯತೆಯನ್ನು ತರಲು ಬಯಸಿದ್ದೆವು. ನೆಚ್ಚಿನ ಕ್ರಿಕೆಟ್ಅನ್ನು ಮರಳಿ ತರಲು ಬುಯಸಿದ್ದೆವು. ಹಾಗಾಗಿ ವೀಕ್ಷಕರ ಪ್ರತಿಕ್ರಿಯೆಯಿಂದ ನನಗೆ ಆಶ್ಚರ್ಯವಿಲ್ಲ, ಇದು ವಿಶ್ವದ ಅತ್ಯುತ್ತಮ ಪಂದ್ಯಾವರಳಿ ಎಂದಿದ್ದಾರೆ.
ಸೌರವ್ ಹೇಳಿರುವಂತೆ ಈ ವರ್ಷದ ಐಪಿಎಲ್ ವೀಕ್ಷಣೆಯಲ್ಲಿ ದಾಖಲೆ ಬರೆದಿದೆ. 2019ಕ್ಕೆ ಹೋಲಿಸಿದರೆ, ಈ ವರ್ಷದ ವೀಕ್ಷಣೆಯಲ್ಲಿ ಶೇಕಡಾ 15ರಷ್ಟು ಹಚ್ಚಾಗಿದೆ. ಪ್ರತಿ ಪಂದ್ಯವೂ ಕಳೆದ ವರ್ಷಕ್ಕಿಂತ 11 ಮಿಲಿಯನ್ ಹೆಚ್ಚಾಗುತ್ತಿದೆ.