ETV Bharat / sports

ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾದಲ್ಲಿ ಐಪಿಎಲ್ ನಡೆಯುವ ಸಾಧ್ಯತೆ: ಸುನಿಲ್ ಗವಾಸ್ಕರ್ - ಐಪಿಎಲ್ -2020

ಟಿ-20 ವಿಶ್ವಕಪ್​ ಪಂದ್ಯ ಮುಂದೂಡಲ್ಪಟ್ಟಿದ್ದು ಆಸ್ಟ್ರೇಲಿಯಾ ಪಿಎಂ ಸ್ಕಾಟ್ ಮಾರಿಸನ್ ಘೊಷಣೆ ಮಾಡಿದರೆ ಮಾತ್ರ ಪಂದ್ಯ ನಡೆಯಬಹುದು. ಇಲ್ಲಾ ಅಂದ್ರೆ, ಅಕ್ಟೋಬರ್‌ನಲ್ಲಿ ಐಪಿಎಲ್ ನಡೆಯುವುದು ಅಸಾಧ್ಯ. ಸೆಪ್ಟೆಂಬರ್​ನಲ್ಲಿ ಶ್ರೀಲಂಕಾ ಅಥವಾ ಯುಎಇಯಲ್ಲಿ ಪಂದ್ಯ ನಡೆಸುವ ಸಾಧ್ಯತೆಗಳಿವೆ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

IPL can be held in Sri Lanka in September, feels Sunil Gavaskar
ಸುನಿಲ್ ಗವಾಸ್ಕರ್
author img

By

Published : Jun 14, 2020, 2:12 PM IST

ನವದೆಹಲಿ : ಆಸ್ಟ್ರೇಲಿಯಾದಲ್ಲಿ ಈ ಮೊದಲೇ ಯೋಚಿಸಿದಂತೆ ಟಿ -20 ವಿಶ್ವಕಪ್ ಪಂದ್ಯ ನಡೆಯಬಹುದು. ಹಾಗಾಗಿ, ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್​) ನ 13 ನೇ ಆವೃತ್ತಿಯನ್ನು ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾದಲ್ಲಿ ನಡೆಸಬೇಕು ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಆಸ್ಟ್ರೇಲಿಯಾ ಸರ್ಕಾರ ಶೇ. 25 ಜನ ಸೇರಬಹುದು ಎಂದು ಘೋಷಿಸಿದೆ. ಹೀಗಾಗಿ ಅಕ್ಟೋಬರ್‌ನಲ್ಲಿ ಟಿ-20 ವಿಶ್ವ ಕಪ್​ ನಡೆಯುವ ಸಾಧ್ಯತೆಯಿದೆ. ಆಸ್ಟ್ರೇಲಿಯಾ ಸರ್ಕಾರದ ಪ್ರಕಟಣೆಯ ನಂತರ ಬಹುಶಃ ತಂಡಗಳು ಮೂರು ವಾರಗಳ ಮುಂಚೆಯೇ ತಲುಪಬೇಕಾಗಬಹುದು, ಏಳು ದಿನಗಳ ಅಭ್ಯಾಸ ಪಂದ್ಯದ ಬಳಿಕ 14 ದಿನಗಳ ಕ್ವಾರಂಟೈನ್ ಇರಬಹುದು ಎಂದು ಹೇಳಿದ್ದಾರೆ.

ಐಸಿಸಿ ಇಚ್ಛಿಸಿದರೆ ಟಿ-20 ವಿಶ್ವಕಪ್​ ಪಂದ್ಯ ನಡೆಯಬಹುದು. ಆದರೆ, ಐಪಿಎಲ್ ನಡೆಯವುದು ಅಸಾಧ್ಯ ಎಂದು ತೋರುತ್ತದೆ. ಟಿ- 20 ವಿಶ್ವಕಪ್​ ಪಂದ್ಯ ಮುಂದೂಡಲ್ಪಟ್ಟು ಆಸ್ಟ್ರೇಲಿಯಾ ಪಿಎಂ ಸ್ಕಾಟ್ ಮಾರಿಸನ್ ಘೋಷಣೆ ಮಾಡಿದರೆ ಮಾತ್ರ ಪಂದ್ಯ ನಡೆಯಬಹುದು. ಇಲ್ಲಾ ಅಂದ್ರೆ ಅಕ್ಟೋಬರ್‌ನಲ್ಲಿ ಐಪಿಎಲ್ ನಡೆಯುವುದು ಅಸಾಧ್ಯ. ಸೆಪ್ಟೆಂಬರ್​ನಲ್ಲಿ ಶ್ರೀಲಂಕಾ ಅಥವಾ ಯುಎಇಯಲ್ಲಿ ಪಂದ್ಯ ನಡೆಸಲು ಸಾಧ್ಯತೆಗಳಿವೆ ಎಂದು ಗವಾಸ್ಕರ್​ ಹೇಳಿದ್ದಾರೆ.

ಸೆಪ್ಟೆಂಬರ್​ನಲ್ಲಿ ಮಳೆ ಕಾರಣ ಭಾರತದಲ್ಲಿ ಐಪಿಎಲ್ ನಡೆಸಲು ಸಾಧ್ಯವಿಲ್ಲ. ಆದರೆ, ಶ್ರೀಲಂಕಾದಲ್ಲಿ ಡಬಲ್ ಹೆಡರ್ ಬದಲಿಗೆ ತಂಡಗಳು ಪರಸ್ಪರ ಆಟವಾಡಬಹುದು. ಕೋವಿಡ್​ ಬಳಿಕ ಕ್ರೀಡಾಂಗಣದಲ್ಲಿ ಯಾವುದೇ ಪ್ರೇಕ್ಷಕರಿಲ್ಲದೆ ಕ್ರಿಕೆಟ್ ಆಡುವುದು ವಿಭಿನ್ನ ಅನುಭವ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.