ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ನ 3ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ರೈಡರ್ಸ್ ವಿರುದ್ಧ ಟಾಸ್ ಗೆದ್ದ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
-
Toss News - #SRH have won the toss and they will bowl first against #KKR at Chennai.
— IndianPremierLeague (@IPL) April 11, 2021 " class="align-text-top noRightClick twitterSection" data="
Live - https://t.co/yqAwBPCpkb #VIVOIPL #SRHvKKR pic.twitter.com/f8pmqOY67r
">Toss News - #SRH have won the toss and they will bowl first against #KKR at Chennai.
— IndianPremierLeague (@IPL) April 11, 2021
Live - https://t.co/yqAwBPCpkb #VIVOIPL #SRHvKKR pic.twitter.com/f8pmqOY67rToss News - #SRH have won the toss and they will bowl first against #KKR at Chennai.
— IndianPremierLeague (@IPL) April 11, 2021
Live - https://t.co/yqAwBPCpkb #VIVOIPL #SRHvKKR pic.twitter.com/f8pmqOY67r
ಕಳೆದ ಬಾರಿ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಿದ್ದ ಕೆಕೆಆರ್ ಈ ಬಾರಿ ತಂಡದಲ್ಲಿ ಕೆಲವು ಬದಲಾವಣೆ ಮಾಡಿಕೊಂಡಿದೆ. ಈ ವರ್ಷವಷ್ಟೇ ಕೆಕೆಆರ್ ಸೇರಿರುವ 40 ವರ್ಷದ ಹರ್ಭಜನ್ ಸಿಂಗ್ ಅವರನ್ನು ಇಂದಿನ ಪಂದ್ಯದಲ್ಲಿ ಆಡಿಸಲು ನಿರ್ಧರಿಸಿದೆ. ಸ್ಪಿನ್ ಸ್ನೇಹಿ ಪಿಚ್ ಆದ ಕಾರಣ ಭಜ್ಜಿ ಜೊತೆಗೆ ವರುಣ್ ಚಕ್ರವರ್ತಿ, ಶಕಿಬ್ ಕೂಡ ತಂಡದಲ್ಲಿದ್ದಾರೆ. ವಿದೇಶಿ ಆಟಗಾರರ ವಿಭಾಗದಲ್ಲಿ ಶಕಿಬ್ ಅಲ್ ಹಸನ್, ಪ್ಯಾಟ್ ಕಮ್ಮಿನ್ಸ್, ಇಯಾನ್ ಮಾರ್ಗನ್ ಮತ್ತು ಆ್ಯಂಡ್ರೆ ರಸೆಲ್ ಕಣಕ್ಕಿಳಿದಿದ್ದಾರೆ.
ಹೈದರಾಬಾದ್ ಕಡೆ ಡೇವಿಡ್ ವಾರ್ನರ್, ಜಾನಿ ಬೈರ್ಸ್ಟೋವ್, ಮೊಹಮ್ಮದ್ ನಬಿ, ರಶೀದ್ ಖಾನ್ ಆಡಲಿದ್ದಾರೆ. ವೃದ್ಧಿಮಾನ್ ಸಹಾ ವಿಕೆಟ್ ಕೀಪರ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಹೈದರಾಬಾದ್ ಕೂಡ ಪಿಚ್ಗೆ ತಕ್ಕಂತೆ ಇಬ್ಬರು ವಿದೇಶಿ ಸ್ಪಿನ್ನರ್ಗಳನ್ನು ಆಡಿಸುತ್ತಿದೆ. ಹಾಗಾಗಿ ಕೇನ್ ವಿಲಿಯಮ್ಸನ್ ಮತ್ತು ಜೇಸನ್ ಹೋಲ್ಡರ್ಗೆ ಆಡುವ ಅವಕಾಶ ಸಿಕ್ಕಿಲ್ಲ.
ಸನ್ರೈಸರ್ಸ್ ಹೈದರಾಬಾದ್:
ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್‌ಸ್ಟೋವ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಮನೀಶ್ ಪಾಂಡೆ,ಅಬ್ದುಲ್ ಸಮದ್, ವಿಜಯ್ ಶಂಕರ್, ಮೊಹಮ್ಮದ್ ನಬಿ, ಭುವನೇಶ್ವರ್ ಕುಮಾರ್, ಟಿ ನಟರಾಜನ್, ರಶೀದ್ ಖಾನ್, ಸಂದೀಪ್ ಶರ್ಮಾ
ಕೋಲ್ಕತ್ತಾ ನೈಟ್ ರೈಡರ್ಸ್:
ಶುಬ್ಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಇಯಾನ್ ಮಾರ್ಗನ್ (ನಾಯಕ), ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ಪ್ಯಾಟ್ ಕಮ್ಮಿನ್ಸ್, ಪ್ರಸಿದ್ ಕೃಷ್ಣ, ಶಕಿಬ್ ಅಲ್ ಹಸನ್, ಹರ್ಭಜನ್ ಸಿಂಗ್