ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ನ ಹರಾಜು ಪ್ರಕ್ರಿಯೆಯಲ್ಲಿ ಕೆಲ ಅನ್ಕ್ಯಾಪ್ಡ್ ಪ್ಲೇಯರ್ಸ್ಗೆ ಬಂಪರ್ ಲಾಟರಿ ಹೊಡೆದಿದ್ದು, ಮೂಲ ಬೆಲೆಗಿಂತಲೂ ದುಪ್ಪಟ್ಟು ಬೆಲೆಗಳಿಗೆ ಬಿಕರಿಯಾಗಿ ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ.
-
Shahrukh Khan earns big and how! 👍
— IndianPremierLeague (@IPL) February 18, 2021 " class="align-text-top noRightClick twitterSection" data="
He joins @PunjabKingsIPL for INR 5.25 Cr. @Vivo_India #IPLAuction pic.twitter.com/uHcOJ7LGdl
">Shahrukh Khan earns big and how! 👍
— IndianPremierLeague (@IPL) February 18, 2021
He joins @PunjabKingsIPL for INR 5.25 Cr. @Vivo_India #IPLAuction pic.twitter.com/uHcOJ7LGdlShahrukh Khan earns big and how! 👍
— IndianPremierLeague (@IPL) February 18, 2021
He joins @PunjabKingsIPL for INR 5.25 Cr. @Vivo_India #IPLAuction pic.twitter.com/uHcOJ7LGdl
ಅನ್ಕ್ಯಾಪ್ಡ್ ಪ್ಲೇಯರ್ ಆಗಿರುವ ಶಾರುಖ್ ಖಾನ್ ಪ್ರಸಕ್ತ ಸಾಲಿನ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ 20 ಲಕ್ಷ ರೂ.ಗೆ ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದರು. ಈ ಪ್ಲೇಯರ್ ಖರೀದಿ ಮಾಡಲು ಡೆಲ್ಲಿ ಕ್ಯಾಪಿಟಲ್ಸ್, ಆರ್ಸಿಬಿ ಹಾಗೂ ಕಿಂಗ್ಸ್ ಪಂಜಾಬ್ ಪೈಪೋಟಿ ನಡೆಸಿದ್ದವು. ಆದರೆ ಕೊನೆಯದಾಗಿ 5.25 ಕೋಟಿ ರೂ. ನೀಡಿ ಪ್ರೀತಿ ಜಿಂಟಾ ಒಡೆತನದ ಪಂಜಾಬ್ ತಂಡ ಖರೀದಿ ಮಾಡಿದೆ.
ಯಾರು ಈ ಶಾರುಖ್ ಖಾನ್!?
ತಮಿಳುನಾಡು ದೇಶಿ ಕ್ರಿಕೆಟ್ನಲ್ಲಿ ಮಿಂಚು ಹರಿಸಿರುವ ಶಾರುಖ್ ಖಾನ್ ಈಗಾಗಲೇ ಸೈಯದ್ ಮುಸ್ತಾಕ್ ಅಲಿ ಟೂರ್ನಿಯಲ್ಲಿ ತಮ್ಮ ಸಾಮರ್ಥ್ಯ ಹೊರಹಾಕಿದ್ದು, ತಮಿಳುನಾಡು ತಂಡ ಗೆಲುವು ಸಾಧಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಟಿ- 20 ಕ್ರಿಕೆಟ್ನಲ್ಲಿ 131 ಸ್ಟ್ರೈಕ್ ರೇಟ್ ಹೊಂದಿರುವ ಈ ಪ್ಲೇಯರ್ ಕಳೆದ ವರ್ಷ ಅನ್ಸೋಲ್ಡ್ ಆಗಿದ್ದರು.
-
When you get a certain "Shahrukh Khan" in your side 😉😉 @PunjabKingsIPL @Vivo_India #IPLAuction pic.twitter.com/z4te9w2EIZ
— IndianPremierLeague (@IPL) February 18, 2021 " class="align-text-top noRightClick twitterSection" data="
">When you get a certain "Shahrukh Khan" in your side 😉😉 @PunjabKingsIPL @Vivo_India #IPLAuction pic.twitter.com/z4te9w2EIZ
— IndianPremierLeague (@IPL) February 18, 2021When you get a certain "Shahrukh Khan" in your side 😉😉 @PunjabKingsIPL @Vivo_India #IPLAuction pic.twitter.com/z4te9w2EIZ
— IndianPremierLeague (@IPL) February 18, 2021
ಓದಿ: ಕನ್ನಡಿಗನಿಗೆ ಒಲಿದ ಅದೃಷ್ಟ ಲಕ್ಷ್ಮಿ: ಬರೋಬ್ಬರಿ 9.75 ಕೋಟಿ ರೂ.ಗೆ ಸೇಲ್ ಆದ ಕೆ. ಗೌತಮ್
2014ರಲ್ಲಿ ಟಿ20 ಡೆಬ್ಯು ಮಾಡಿರುವ ಈ ಪ್ಲೇಯರ್ ಇಲ್ಲಿಯವರೆಗೆ 31 ಪಂದ್ಯಗಳನ್ನಾಡಿದ್ದು, 293ರನ್ಗಳಿಕೆ ಮಾಡಿದ್ದಾರೆ. ಸೈಯದ್ ಮುಸ್ತಾಕ್ ಅಲಿ ಪಂದ್ಯವೊಂದರಲ್ಲಿ ಒಂದೇ ಓವರ್ನಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿ ತಂಡ ಸೆಮಿಫೈನಲ್ ಪ್ರವೇಶ ಮಾಡುವಂತೆ ಮಾಡಿದ್ದರು.