ಅಬುಧಾಬಿ: ಆರ್ಸಿಬಿ ಮಣಿಸಿ 2ನೇ ಕ್ವಾಲಿಫೈಯರ್ ತಲುಪಿರುವ ಸನ್ರೈಸರ್ಸ್ ಹೈದರಾಬಾದ್ ತಂಡ ಡೆಲ್ಲಿ ವಿರುದ್ಧ ತಮ್ಮ ಮೂಲ ಸಾಮರ್ಥ್ಯವನ್ನು ನಂಬಿ ಆಡಿದರೆ ಪಂದ್ಯವನ್ನು ಗೆಲ್ಲಬಹುದು ಎಂದು ಹೈದರಾಬಾದ್ ತಂಡದ ಸ್ಪಿನ್ನರ್ ರಶೀದ್ ಖಾನ್ ಹೇಳಿದ್ದಾರೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಸನ್ರೈಸರ್ಸ್ 6 ವಿಕೆಟ್ಗಳ ಸುಲಭದ ಜಯ ಸಾಧಿಸಿ ಕ್ವಾಲಿಫೈಯರ್ ಪ್ರವೇಶಿಸಿದೆ. ಭಾನುವಾರ ಫೈನಲ್ ಪ್ರವೇಶಕ್ಕಾಗಿ ನಡೆಯುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವಾರ್ನರ್ ಬಳಗ ಸೆಣಸಾಡಲಿದ್ದು, ಈ ಪಂದ್ಯದಲ್ಲಿ ಆಟಗಾರರೆಲ್ಲರು ತಮ್ಮ ಮೂಲ ಬಲವನ್ನು ನಂಬಿ ಆಡಬೇಕೆಂದು ರಶೀದ್ ಹೇಳಿದ್ದಾರೆ.
ಈ ಪಂದ್ಯ ನನಗೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯವನ್ನು ನೆನಪಿಸಿತ್ತು. ದೇವರ ದಯೆ ನಾವು ಗೆಲುವು ಸಾಧಿಸಿದ್ದೇವೆ. ನಾನು ಉತ್ತಮ ಪ್ರದೇಶದಲ್ಲಿ ಚೆಂಡನ್ನು ಎಸೆಯಲು ಸರಳ ಮಾರ್ಗ ಕಂಡುಕೊಂಡಿದ್ದೇನೆ. ಮುಂದಿನ ಪಂದ್ಯಗಳಲ್ಲೂ ಅದನ್ನೇ ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ಪಂದ್ಯದ ನಂತರ ಮಾತನಾಡಿದ ರಶೀದ್ ಹೇಳಿದ್ದಾರೆ.
ನಾನು ನನ್ನ ಹಳೆಯ ಬೌಲಿಂಗ್ ವಿಡಿಯೋಗಳನ್ನು ನೋಡುತ್ತೇನೆ. ಬ್ಯಾಟ್ಸ್ಮನ್ಗಳಿಗೆ ಸವಾಲೆನಿಸುವ ಪ್ರದೇಶಗಳನ್ನು ಗಮನಿಸಿ ಪಂದ್ಯದಲ್ಲಿ ಹೆಚ್ಚಿನ ಎಸೆತಗಳನ್ನು ಪ್ರಯೋಗ ಮಾಡುತ್ತೇನೆ. ಇಂತಹ ಪಿಚ್ಗಳಲ್ಲಿ ಹೆಚ್ಚಿನ ತಿರುವು ಪಡೆದುಕೊಳ್ಳುವುದರಿಂದ ಬೌಲಿಂಗ್ಗೆ ನೆರವಾಗಲಿದೆ ಎಂದಿದ್ದಾರೆ.
ಇಂದಿನ ಪಂದ್ಯದಲ್ಲಿ ಪಿಚ್ ಸ್ವಲ್ಪ ನಿಧಾನ ಎನ್ನಿಸಿತು. ನಾವು ಕೊನೆಯ ಪಂದ್ಯವಾಡಿದಷ್ಟು ಸ್ಕಿಡ್ ಕಂಡುಬರಲಿಲ್ಲ. ಹಾಗಾಗಿ ಡೆಲ್ಲಿ ವಿರುದ್ಧ ನಮ್ಮ ಮೂಲ ಅಂಶಗಳನ್ನು ಕಾರ್ಯಗತಗೊಳಿಸಿಬೇಕಿದೆ ಎಂದು ಹೇಳಿದ್ದಾರೆ.
ಈ ಟೂರ್ನಿಯಲ್ಲಿ ರಶೀದ್ ಖಾನ್ 15 ಪಂದ್ಯಗಳಿಂದ 19 ವಿಕೆಟ್ ಪಡೆದಿದ್ದು, ಹೈದರಾಬಾದ್ ತಂಡದ ಯಶಸ್ವಿ ಬೌಲರ್ ಆಗಿದ್ದಾರೆ.