ಅಬುಧಾಬಿ: ಶೇನ್ ವಾಟ್ಸನ್ ಅರ್ಧಶತಕದ ಹೊರೆತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡ 168 ರನ್ಗಳನ್ನು ಬೆನ್ನಟ್ಟಲಾಗದೆ 10 ರನ್ಗಳ ಸೋಲು ಕಂಡಿದೆ.
ಕೆಕೆಆರ್ ನೀಡಿದ 168 ರನ್ಗಳ ಟಾರ್ಗೆಟ್ ಬೆನ್ನೆತ್ತಿದ ಚೆನ್ನೈ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 157 ರನ್ಗಳಿಸಿ 10 ರನ್ಗಳ ಸೋಲನುಭಿಸಿತು.
ಆರಂಭಿಕರಾಗಿ ಕಣಕ್ಕಿಳಿದಿದ್ದ ಶೇನ್ ವಾಟ್ಸನ್ 40 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 50 ರನ್ಗಳಿಸಿದರು. ಇವರು ಆರಂಭಿಕ ಫಾಫ್ ಡು ಪ್ಲೆಸಿಸ್ ಜೊತೆ ಮೊದಲ ವಿಕೆಟ್ಗೆ 30ರನ್ಗಳ ಜೊತೆಯಾಟ ನಡೆಸಿದರು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಪ್ಲೆಸಿಸ್ ಯುವ ಬೌಲರ್ ಶಿವಂ ಮಾವಿಗೆ ವಿಕೆಟ್ ಒಪ್ಪಿಸಿದರು.
-
That's that from Match 21. @KKRiders win by 10 runs against #CSK.#Dream11IPL pic.twitter.com/wji9rmsowC
— IndianPremierLeague (@IPL) October 7, 2020 " class="align-text-top noRightClick twitterSection" data="
">That's that from Match 21. @KKRiders win by 10 runs against #CSK.#Dream11IPL pic.twitter.com/wji9rmsowC
— IndianPremierLeague (@IPL) October 7, 2020That's that from Match 21. @KKRiders win by 10 runs against #CSK.#Dream11IPL pic.twitter.com/wji9rmsowC
— IndianPremierLeague (@IPL) October 7, 2020
ನಂತರ ಒಂದಾದ ರಾಯಡು ಹಾಗೂ ವಾಟ್ಸನ್ 2ನೇ ವಿಕೆಟ್ಗೆ 69 ರನ್ಗಳ ಜೊತೆಯಾಟ ನೀಡಿದರು. ರಾಯುಡು 27 ಎಸೆತಗಳಲ್ಲಿ 3 ಬೌಂಡರಿ ಸಹಿತ 30 ರನ್ಗಳಿಸಿ ನಾಗರಕೋಟಿಗೆ ವಿಕೆಟ್ ಒಪ್ಪಿಸಿದರು. ರಾಯಡು ಬೆನ್ನಲ್ಲೇ ಅರ್ಧಶತಕ ಸಿಡಿಸಿದ್ದ ವಾಟ್ಸನ್ ನರೈನ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು.
ಆದರೆ ಇವರಿಬ್ಬರ ನಂತರ ಬಂದ ಬ್ಯಾಟ್ಸ್ಮನ್ಗಳು ರನ್ಗಳಿಸಲು ಪರದಾಡಿದರು. ನಾಯಕ ಧೋನಿ 12 ಎಸೆತಗಳಲ್ಲಿ 11, ಸ್ಯಾಮ್ ಕರ್ರನ್ 11 ಎಸೆತಗಳಲ್ಲಿ 17 ರನ್ಗಳಿಸಿ ನಿರ್ಣಾಯಕ ಹಂತದಲ್ಲಿ ವಿಕೆಟ್ ಒಪ್ಪಿಸಿದ್ದು ಸಿಎಸ್ಕೆಗೆ ನುಂಗಲಾರದ ತುತ್ತಾಯಿತು.
ಇನ್ನು ಕೊನೆಯ 17 ಎಸೆತಗಳಿಗೆ 39 ರನ್ಗಳ ಅಗತ್ಯವಿದ್ದರೂ ಜಾಧವ್ ಬೌಂಡರಿಗಳಿಸಲಾಗದೆ ಪರದಾಡಿದರು. ಅವರು 12 ಎಸೆತಗಳಲ್ಲಿ ಕೇವಲ 7 ರನ್ಗಳಿಸಿ ಔಟಾಗದೆ ಉಳಿದರು. ಜಡೇಜಾ 8 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 21 ರನ್ಗಳಿಸಿದರೂ ತಂಡವನ್ನು ಗೆಲುವಿನ ಗಡಿ ದಾಟಿಸುವಲ್ಲಿ ವಿಫಲರಾದರು.
ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಕೆಕೆಆರ್ ತಂಡದ ಪರ ಶಿವಂ ಮಾವಿ 32 ಕ್ಕೆ 1, ವರುಣ್ ಚಕ್ರವರ್ತಿ 28ಕ್ಕೆ 1, ಕಮಲೇಶ್ ನಾಗರಕೋಟಿ 21ಕ್ಕೆ 1, ಸುನೀಲ್ ನರೈನ್ 31ಕ್ಕೆ 1 ಹಾಗೂ ಆ್ಯಂಡ್ರೆ ರಸೆಲ್ 18ಕ್ಕೆ ಒಂದು ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.