ನವದೆಹಲಿ: ವಿಶ್ವದ ಶ್ರೀಮಂತ ಟಿ20 ಲೀಗ್ ಆದ ಐಪಿಎಲ್ ಫೈನಲ್ ಪಂದ್ಯ ಮೇ 24ಕ್ಕೆ ವಾಂಖಡೆ ಸ್ಟೇಡಿಯಂನಲ್ಲಿ ನಡೆಯಲಿದೆ ಎಂಬುದು ಈಗಾಗಲೇ ಖಾತ್ರಿಯಾಗಿದೆ. ಇದೀಗ ಫೈನಲ್ ಪಂದ್ಯ ಪ್ರತಿದಿನದ ಪಂದ್ಯಕ್ಕಿಂತ ಅರ್ಧಗಂಟೆ ಮುಂಚಿತವಾಗಿಯೇ ನಡೆಯಲಿದೆ ಎಂಬ ಮಾಹಿತಿ ಇದೆ.
ಮಾರ್ಚ್ 29 ರಿಂದ ವಾಂಖಡೆಯಲ್ಲಿ ಐಪಿಎಲ್ ಉದ್ಘಾಟನೆ ಪಂದ್ಯ, ಮೇ 24ರಂದು ಐಪಿಎಲ್ ಫೈನಲ್ ಪಂದ್ಯ ನಡೆಯಲಿದೆ ಎಂಬುದನ್ನು ಬಿಸಿಸಿಐ ಈಗಾಗಲೇ ಖಾತ್ರಿಪಡಿಸಿದೆ. ಇದೀಗ ಐಪಿಎಲ್ 45 ದಿನಗಳ ಬದಲಾಗಿ 57 ದಿನಗಳ ಕಾಲ ನಡೆಯಲಿದೆ ಎಂಬ ಹೊಸ ವಿಚಾರ ಕೇಳಿಬರುತ್ತಿದೆ. ಒಂದು ವೇಳೆ 57 ದಿನಗಳು ಐಪಿಎಲ್ ನಡೆಯಲಿದೆ ಎಂದರೆ 2020ರ ಆವೃತ್ತಿಯಲ್ಲಿ ದಿನಕ್ಕೆ ಒಂದೇ ಪಂದ್ಯ ನಡೆಯಲಿದೆ ಎಂಬ ವಿಚಾರ ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.
ಐಪಿಎಲ್ನ ಸಂಪೂರ್ಣ ವೇಳಾಪಟ್ಟಿ ನಿಗದಿಯಾಗಿಲ್ಲ. ಆದರೆ ಫೈನಲ್ ಪಂದ್ಯ ಮೇ 24 ರಂದು ನಡೆಯಲಿದ್ದು, ಬ್ರಾಡ್ಕಾಸ್ಟಿಂಗ್ ಚಾನೆಲ್ಗಳ ಮನವಿಯ ಮೇರೆಗೆ ಪಂದ್ಯ 7:30 ನಡೆಸಲು ತೀರ್ಮಾನಿಸಲಾಗಿದೆ. ಅಲ್ಲದೆ ಟೂರ್ನಿ ಹಿಂದಿ ಅವೃತ್ತಿಗಿಂತಲೂ ದೀರ್ಘವಾಗಿ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.