ದುಬೈ: ಕೋಲ್ಕತ್ತಾ ನೈಟ್ ರೈಡರ್ಸ್ ಬಿಗಿ ಬೌಲಿಂಗ್ ದಾಳಿಗೆ ರನ್ಗಳಿಸಲು ಹೆಣಗಾಡಿದ ಸನ್ರೈಸರ್ಸ್ ಹೈದರಾಬಾದ್ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 142 ರನ್ಗಳ ಸಾಧಾರಣ ಮೊತ್ತ ದಾಖಲಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಹೈದರಾಬಾದ್ ತಂಡ ಡೇವಿಡ್ ವಾರ್ನರ್ 36, ಮನೀಷ್ ಪಾಂಡೆ 51 ಹಾಗೂ ವೃದ್ಧಿಮಾನ್ ಸಹಾ ಅವರ 30 ರನ್ಗಳ ನೆರವಿನಿಂದ 142 ರನ್ಗಳಿಸಿದ್ದು, ಕೆಕೆಆರ್ ಗೆಲುವಿಗೆ 143 ರನ್ಗಳ ಟಾರ್ಗೆಟ್ ನೀಡಿದೆ.
-
Innings Break!#KKR restrict #SRH to a total of 142/4.
— IndianPremierLeague (@IPL) September 26, 2020 " class="align-text-top noRightClick twitterSection" data="
Will the @KKRiders chase this down?
Live - https://t.co/vYh0Hti7TU #Dream11IPL #KKRvSRH pic.twitter.com/X2NRKKDOFe
">Innings Break!#KKR restrict #SRH to a total of 142/4.
— IndianPremierLeague (@IPL) September 26, 2020
Will the @KKRiders chase this down?
Live - https://t.co/vYh0Hti7TU #Dream11IPL #KKRvSRH pic.twitter.com/X2NRKKDOFeInnings Break!#KKR restrict #SRH to a total of 142/4.
— IndianPremierLeague (@IPL) September 26, 2020
Will the @KKRiders chase this down?
Live - https://t.co/vYh0Hti7TU #Dream11IPL #KKRvSRH pic.twitter.com/X2NRKKDOFe
ಟಾಸ್ ಗೆದ್ದು ಇನ್ನಿಂಗ್ಸ್ ಆರಂಭಿಸಿದ ಹೈದರಾಬಾದ್ ತಂಡಕ್ಕೆ ಕಮ್ಮಿನ್ಸ್ 5 ರನ್ಗಳಿಸಿದ್ದ ಬರ್ತಡೇ ಬಾಯ್ ಜಾನಿ ಬೈರ್ಸ್ಟೋವ್ ವಿಕೆಟ್ ಪಡೆದು ಆರಂಭಿಕ ಆಘಾತ ನೀಡಿದರು. ನಂತರ ನಾಯಕ ವಾರ್ನರ್ ಜೊತೆಗೂಡಿದ ಮನೀಶ್ ಪಾಂಡೆ 2 ನೇ ವಿಕೆಟ್ಗೆ 35 ರನ್ ಸೇರಿಸಿದರು. ಈ ಇಬ್ಬರು ಬ್ಯಾಟ್ಸ್ಮನ್ಗಳು ವಿಕೆಟ್ ಕಾಯ್ದುಕೊಳ್ಳುವುದರತ್ತ ಗಮನ ನೀಡುತ್ತಿದ್ದರೆ, ಕೆಕೆಆರ್ ರನ್ ನಿಯಂತ್ರಿಸುವುದರ ಜೊತೆಗೆ ಒತ್ತಡವನ್ನೇರುವಲ್ಲಿ ಯಶಸ್ವಿಯಾಯಿತು.
ಈ ವೇಳೆ 30 ಎಸೆತಗಳಲ್ಲಿ 36 ರನ್ಗಳಿಸಿದ್ದ ವಾರ್ನರ್ರನ್ನು ವರುಣ್ ಚಕ್ರವರ್ತಿ ಬೌಲಿಂಗ್ನಲ್ಲಿ ಅವರಿಗೆ ಕ್ಯಾಚ್ ನೀಡಿ ಔಟಾದರು. ನಂತರ ಬಂದ ವೃದ್ಧಿಮಾನ್ ಸಹಾ ಪಾಂಡೆ ಜೊತೆಗೂಡಿ 3 ನೇ ವಿಕೆಟ್ಗೆ 62 ರನ್ಗಳ ಜೊತೆಯಾಟ ನೀಡಿದರು. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಪಾಂಡೆ ರಸೆಲ್ ಓವರ್ನಲ್ಲಿ ಅವರಿಗೆ ಕ್ಯಾಚ್ ನೀಡಿ ಔಟಾದರು. ಅವರು 38 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 51 ರನ್ಗಳಿಸಿದರು.
ಕೆಕೆಆರ್ ಸಂಘಟಿತ ಬೌಲಿಂಗ್ ದಾಳಿಗೆ ರನ್ಗಳಿಸಲಾಗದೆ ಆರಂಭದಿಂದ ಕೊನೆಯವರೆಗೂ ಪರದಾಡಿದ ಸಹಾ 31 ಎಸೆತಗಳಲ್ಲಿ 30 ರನ್ಗಳಿಸಿ ರನ್ಔಟ್ ಆದರು. ಮೊಹಮ್ಮದ್ ನಬಿ 11 ರನ್ಗಳಿಸಿದರು.
ಅಂತಿಮವಾಗಿ ಸನ್ರೈಸರ್ಸ್ 20 ಓವರ್ಗಳ ಆಟದಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 142ರನ್ಗಳಿಸಲಷ್ಟೆ ಶಕ್ತವಾಯಿತು. ಈ ಮೊತ್ತ ಇಡೀ ಟೂರ್ನಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಗಳಿಸಿದ ಕನಿಷ್ಠ ಮೊತ್ತವಾಯಿತು.
ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ ಕೆಕೆಆರ್ ಪರ ಪ್ಯಾಟ್ ಕಮ್ಮಿನ್ಸ್ 19 ರನ್ ನೀಡಿ 1 ವಿಕೆಟ್, ಯುವ ಸ್ಪಿನ್ನರ್ ವರುಣ್ ಚಕ್ರವರ್ತಿ 25 ರನ್ ನೀಡಿ 1 ವಿಕೆಟ್ ಹಾಗೂ ರಸೆಲ್ 16 ರನ್ ನೀಡಿ 1 ವಿಕೆಟ್ ಪಡೆದರು. ಉಳಿದ ಬೌಲರ್ಗಳು ಕೂಡ ವಿಕೆಟ್ ಪಡೆಯದಿದ್ದರೂ ರನ್ ಕಂಟ್ರೋಲ್ ಮಾಡುವಲ್ಲಿ ಯಶಸ್ವಿಯಾದರು.