ದುಬೈ: ಬಹುನಿರೀಕ್ಷಿತ 13ನೇ ಇಂಡಿಯನ್ ಪ್ರೀಮಿಯರ್ ಲೀಗ್ನ ಸಂಪೂರ್ಣ ವೇಳಾಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಲಾಗುವುದು ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಖಚಿತಪಡಿಸಿದ್ದಾರೆ.
ಕಳೆದ ಒಂದು ವಾರಗಳಿಂದ ವಿವಿಧ ಪ್ರಾಂಚೈಸಿಗಳು ಹಾಗೂ ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವಂತೆ ಆಗ್ರಹಪಡಿಸುತ್ತಿದ್ದರು. ಇದೀಗ ಪಟೇಲ್ ನಾಳೆ ಖಂಡಿತ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 19ರಿಂದ ಪ್ರಸಕ್ತ ವರ್ಷದ ಟೂರ್ನಿ ಆರಂಭವಾಗಲಿದ್ದು, ಫೈನಲ್ ಪಂದ್ಯ ನವೆಂಬರ್ 10ರಂದು ನಡೆಯಲಿದೆ. ಅಭಿಮಾನಿಗಳು ತಮ್ಮ ತಂಡಗಳು ಯಾವ ಯಾವ ತಂಡವನ್ನು ಯಾವದಿನ ಎದುರಿಸಲಿವೆ ಎಂದು ತಿಳಿದುಕೊಳ್ಳಲು ಹಾತೊರೆಯುತ್ತಿದ್ದಾರೆ. ಇದೀಗ ವೇಳಾಪಟ್ಟಿ ಬಗ್ಗೆ ಕೇಳಿದ್ದಕ್ಕೆ ಬ್ರಿಜೇಶ್ ಪಟೇಲ್" 13ನೇ ಲೀಗ್ನ ಸಂಫೂರ್ಣ ವೇಳಾಪಟ್ಟಿ ನಾಳೆ ಬಿಡುಗಡೆ ಮಾಡಲಾಗುವುದು" ಎಂದು ತಿಳಿಸಿದ್ದಾರೆ.
ಈ ಬಾರಿ ಟೂರ್ನಿ 8 ಗಂಟೆಗೆ ಬದಲಾಗಿ 7:30ಕ್ಕೆ, 4 ಗಂಟೆಗೆ ಬದಲಾಗಿ 3:30ಕ್ಕೆ ಆರಂಭಗೊಳ್ಳಲಿವೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ 13 ಮಂದಿಗೆ ಕೋವಿಡ್ 19 ಪಾಸಿಟಿವ್ ಕಾಣಿಸಿಕೊಂಡಿದ್ದರಿಂದ ವೇಳಾಪಟ್ಟಿಯನ್ನು ತಡೆ ಹಿಡಿಯಲಾಗಿತ್ತು. ಇದೀಗ ಎಲ್ಲಾ ಸೋಂಕಿತರು ಕ್ವಾರಂಟೈನ್ ಅವಧಿಯಲ್ಲಿ ನೆಗೆಟಿವ್ ಪಡೆದಿರುವುದರಿಂದ ಟೂರ್ನಿಯನ್ನು ಯೋಜನೆಯಂತೆ ನಡೆಸಲು ಬಿಸಿಸಿಐ ಮುಂದಾಗಿದೆ.