ಶಾರ್ಜಾ: ಸತತ ಸೋಲಿನಿಂದ ಕಂಗೆಟ್ಟಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ..
ಇತ್ತ ಆಡಿರುವ 7 ಪಂದ್ಯಗಳಲ್ಲಿ 2 ಸೋಲು 5 ಜಯದೊಂದಿಗೆ 3ನೇ ಸ್ಥಾನದಲ್ಲಿರುವ ಆರ್‌ಸಿಬಿ ಇಂದಿನ ಪಂದ್ಯವನ್ನು ಗೆದ್ದು ಪ್ಲೇ ಆಫ್ಗೆ ಮತ್ತಷ್ಟು ಹತ್ತಿರವಾಗುವ ಆಶಯದಲ್ಲಿದೆ. ಆರ್‌ಸಿಬಿ ಯಾವುದೇ ಬದಲಾಣೆಯಿಲ್ಲದೆ ಆಡುತ್ತಿದೆ.
-
No pressure - Universe Boss @henrygayle #Dream11IPL pic.twitter.com/3WLNjcoW72
— IndianPremierLeague (@IPL) October 15, 2020 " class="align-text-top noRightClick twitterSection" data="
">No pressure - Universe Boss @henrygayle #Dream11IPL pic.twitter.com/3WLNjcoW72
— IndianPremierLeague (@IPL) October 15, 2020No pressure - Universe Boss @henrygayle #Dream11IPL pic.twitter.com/3WLNjcoW72
— IndianPremierLeague (@IPL) October 15, 2020
13ನೇ ಆವೃತ್ತಿಯಲ್ಲಿ ಆಡಿರುವ 7 ಪಂದ್ಯಗಳಲ್ಲಿ 6 ರಲ್ಲಿ ಸೋಲು ಕಂಡಿರುವ ಪಂಜಾಬ್ ತಂಡ ಕೇವಲ ಒಂದೇ ಒಂದು ಗೆಲುವು ಸಾಧಿಸಿದೆ. ಅದು ಆರ್‌ಸಿಬಿ ವಿರುದ್ಧವೇ ಎಂಬುದೇ ವಿಶೇಷ. ಇದೀಗ ಮತ್ತೆ ಆರ್‌ಸಿಬಿ ವಿರುದ್ಧವೇ ಗೆಲುವಿನ ಹಾದಿಗೆ ಮರಳುವ ಆಲೋಚನೆಯಲ್ಲಿದೆ.
-
Virat Kohli wins the toss and #RCB will bat first against #KXIP at Sharjah.#Dream11IPL pic.twitter.com/akYXohimjf
— IndianPremierLeague (@IPL) October 15, 2020 " class="align-text-top noRightClick twitterSection" data="
">Virat Kohli wins the toss and #RCB will bat first against #KXIP at Sharjah.#Dream11IPL pic.twitter.com/akYXohimjf
— IndianPremierLeague (@IPL) October 15, 2020Virat Kohli wins the toss and #RCB will bat first against #KXIP at Sharjah.#Dream11IPL pic.twitter.com/akYXohimjf
— IndianPremierLeague (@IPL) October 15, 2020
ಕಿಂಗ್ಸ್ ಇಲೆವೆನ್ ಪಂಜಾಬ್ ಮೂರು ಬಲಾವಣೆ ಮಾಡಿಕೊಂಡಿದೆ. ಕ್ರಿಸ್ ಗೇಲ್ ಕಣಕ್ಕಿಳಿಯುತ್ತಿದ್ದಾರೆ. ಯುವ ಆಲ್ರೌಂಡರ್ ದೀಪಕ್ ಹೂಡಾ ಕೂಡ ಮಂದೀಪ್ ಸಿಂಗ್ ಜಾಗದಲ್ಲಿ, ಪ್ರಭಸಿಮ್ರಾನ್ ಜಾಗಕ್ಕೆ ಎಂ ಆಶ್ವಿನ್ ಅವಕಾಶ ಪಡೆದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು : ದೇವದತ್ ಪಡಿಕ್ಕಲ್, ಆ್ಯರೋನ್ ಫಿಂಚ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್ (ವಿ,ಕೀ), ವಾಷಿಂಗ್ಟನ್ ಸುಂದರ್, ಶಿವಂ ದುಬೆ, ಕ್ರಿಸ್ ಮೋರಿಸ್, ಇಸುರು ಉದಾನ, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಯುಜವೇಂದ್ರ ಚಹಾಲ್
ಕಿಂಗ್ಸ್ ಇಲೆವೆನ್ ಪಂಜಾಬ್ : ಕ್ರಿಸ್ ಗೇಲ್, ರಾಹುಲ್ (ನಾಯಕ), ಮಾಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್, ಗ್ಲೆನ್ ಮ್ಯಾಕ್ಸ್ ವೆಲ್, ದೀಪಕ್ ಹೂಡಾ, ಕ್ರಿಸ್ ಜೋರ್ಡಾನ್, ಮುರುಗನ್ ಅಶ್ವಿನ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷ್‌ದೀಪ್ ಸಿಂಗ್