ETV Bharat / sports

ಅಗಸ್ಟ್​ ಆರಂಭದಲ್ಲೇ ಯುಎಇನಲ್ಲಿ ತರಬೇತಿ ಶಿಬಿರ ಆರಂಭಿಸಲು ಬಯಸಿದ ಸಿಎಸ್​ಕೆ

author img

By

Published : Aug 1, 2020, 6:18 PM IST

ಸಿಎಸ್​ಕೆಯಲ್ಲಿ ಹೆಚ್ಚು ಹಿರಿಯ ಆಟಗಾರರು ಇರುವುದರಿಂದ, ಅದರಲ್ಲೂ ಕೆಲವರು ಕಳೆದ ಒಂದು ವರ್ಷದಿಂದ ಕ್ರಿಕೆಟ್​ನಲ್ಲಿ ಕಾಣಿಸಿಕೊಳ್ಳದಿರುವ ಆಟಗಾರರು ಹೆಚ್ಚಿರುವುದರಿಂದ ಟೂರ್ನಾಮೆಂಟ್​ ಸಿದ್ಧತೆಗೆ ಒಂದು ತಿಂಗಳು ಮುಂಚಿತವಾಗಿ ತೆರಳಲು ಬಯಸಿದೆ..

ಚೆನ್ನೈ ಸೂಪರ್ ಕಿಂಗ್ಸ್​
ಚೆನ್ನೈ ಸೂಪರ್ ಕಿಂಗ್ಸ್​

ಚೆನ್ನೈ : 3 ಬಾರಿಯ ಐಪಿಎಲ್​ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ಅಗಸ್ಟ್​ ಆರಂಭದಿಂದಲೇ 13ನೇ ಆವೃತ್ತಿಯ ಟೂರ್ನಿಗೆ ಯುಎಇನಲ್ಲಿ ತರಬೇತಿ ಆರಂಭಿಸಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

ಕೊರೊನಾ ವೈರಸ್​ ಭೀತಿಯಿಂದ ಮಾರ್ಚ್​ನಲ್ಲಿ ನಡೆಯಬೇಕಿದ್ದ ಟೂರ್ನಿ ಸೆಪ್ಟೆಂಬರ್​ಗೆ ಮುಂದೂಡಲಾಗಿದೆ. ಈಗಾಗಲೇ ಐಪಿಎಲ್​ ಮಂಡಳಿ ಅಧ್ಯಕ್ಷ ಬ್ರಿಜೇಶ್​ ಪಟೇಲ್​ ಯುಎಇನಲ್ಲಿ ಸೆಪ್ಟೆಂಬರ್​ 19ರಿಂದ ಟೂರ್ನಿ ಆರಂಭವಾಗಲಿದೆ ಎಂದು ಘೋಷಣೆ ಮಾಡಿದ್ದಾರೆ. ಜೊತೆಗೆ ತಯಾರಿಯಲ್ಲೂ ತೊಡಗಿದ್ದಾರೆ.

ಕ್ರೀಡಾ ವೆಬ್​ಸೈಟ್​ವೊಂದರ ಮಾಹಿತಿ ಪ್ರಕಾರ, ಸಿಎಸ್​ಕೆ ಆಟಗಾರರಿಗೆ ಪ್ರಾಂಚೈಸಿ ಚೆನ್ನೈಗೆ ಬರಲು ಸೂಚನೆ ನೀಡಿದ್ದು, ಭಾರತ ಸರ್ಕಾರ ಅನುಮತಿ ನೀಡುತ್ತಿದ್ದಂತೆ ಚಾರ್ಟಡ್​ ಫ್ಲೈಟ್​ನಲ್ಲಿ ದುಬೈಗೆ ತೆರಳಲು ಸಿದ್ಧವಾಗಿದೆ ಎನ್ನಲಾಗಿದೆ.

ಎಂಎಸ್​ ಧೋನಿ
ಎಂಎಸ್​ ಧೋನಿ

ಅಗಸ್ಟ್​ 2ರಂದು ಐಪಿಎಲ್ ಆಡಳಿತ ಮಂಡಳಿ ಸಭೆ ನಡೆಸಲಿದ್ದು, ಟೂರ್ನಾಮೆಂಟ್​ನ ಸಂಪೂರ್ಣ ವೇಳಾಪಟ್ಟಿ, ಟೂರ್ನಾಮೆಂಟ್​ನ ತಯಾರಿ ಹಾಗೂ 51 ದಿನಗಳ ಕಾಲ 8 ತಂಡಗಳು ಹೇಗಿರಬೇಕು ಎನ್ನುವುದಕ್ಕೆ ಸ್ಟಾಂಡರ್ಡ್​ ಆಪರೇಟಿಂಗ್ ಪ್ರೊಸಿಜರ್ಸ್​(SOP)ಗಳನ್ನು ಸಭೆಯಲ್ಲಿ ಸಿದ್ದಪಡಿಸಿಲಿದೆ ಎಂದು ತಿಳಿದು ಬಂದಿದೆ.

ಸಿಎಸ್​ಕೆಯಲ್ಲಿ ಹೆಚ್ಚು ಹಿರಿಯ ಆಟಗಾರರು ಇರುವುದರಿಂದ, ಅದರಲ್ಲೂ ಕೆಲವರು ಕಳೆದ ಒಂದು ವರ್ಷದಿಂದ ಕ್ರಿಕೆಟ್​ನಲ್ಲಿ ಕಾಣಿಸಿಕೊಳ್ಳದಿರುವ ಆಟಗಾರರು ಹೆಚ್ಚಿರುವುದರಿಂದ ಟೂರ್ನಾಮೆಂಟ್​ ಸಿದ್ಧತೆಗೆ ಒಂದು ತಿಂಗಳು ಮುಂಚಿತವಾಗಿ ತೆರಳಲು ಬಯಸಿದೆ. ಸಿಎಸ್​ಕೆ ಪ್ರತಿ ಆವೃತ್ತಿಯಲ್ಲೂ ಒಂದು ತಿಂಗಳಿಗೆ ಮೊದಲೇ ತರಬೇತಿ ಶಿಬಿರ ನಡೆಸುವುದನ್ನು ರೂಡಿಸಿಕೊಂಡಿದೆ. ಮಾರ್ಚ್​ನಲ್ಲೂ ತರಬೇತಿ ಆರಂಭಿಸಿತ್ತಾದ್ರೂ ಕೊರೊನಾ ವೈರಸ್ ಕಾರಣದಿಂದ ನಿಲ್ಲಿಸಿತ್ತು. ಸಿಎಸ್​ಕೆ ಹೊರೆತುಪಡಿಸಿದ್ರೆ ಉಳಿದ ತಂಡಗಳು ಅಗಸ್ಟ್​ 20ಕ್ಕೆ ದುಬೈಗೆ ತೆರಳಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.