ಹೈದರಾಬಾದ್: ಬಹು ನಿರೀಕ್ಷಿತ ಐಪಿಎಲ್ ಹರಾಜು ಪ್ರಕ್ರಿಯೆ ಇದೇ ತಿಂಗಳ 19ರಂದು ಕೋಲ್ಕತ್ತಾದಲ್ಲಿ ನಡೆಯಲಿದ್ದು, ಆಸ್ಟ್ರೇಲಿಯಾ ತಂಡದ ವೇಗಿ ಮಿಚೆಲ್ ಸ್ಟಾರ್ಕ್ 2020ರ ಐಪಿಎಲ್ ಹರಾಜಿನಿಂದ ದೂರ ಉಳಿದಿದ್ದಾರೆ.
ಕೋಲ್ಕತ್ತಾದಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯಿಯಲ್ಲಿ ಭಾಗವಹಿಸಲು ಈಗಾಗಲೇ 971 ಆಟಗಾರರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ ಈ 971 ಆಟಗಾರರ ಪೈಕಿ ಆಸೀಸ್ ತಂಡದ ವೇಗಿ ಮಿಚೆಲ್ ಸ್ಟಾರ್ಕ್ ಮತ್ತು ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಜೋ ರೂಟ್ ಹೆಸರಿಲ್ಲದಿರುವುದು ವಿಶೇಷ.
2015ರ ಐಪಿಎಲ್ ಟೂರ್ನಿಯಿಂದ ಮಿಚೆಲ್ ಸ್ಟಾರ್ಕ್ ದೂರ ಉಳಿದಿದ್ದರು. 2019ರ ಏಕದಿನ ವಿಶ್ವಕಪ್ ಟೂರ್ನಿಯನ್ನ ಗಮನದಲ್ಲಿಟ್ಟುಕೊಂಡು ಕಳೆದ ಆವೃತ್ತಿಯ ಐಪಿಎಲ್ನಿಂದಲೂ ಸ್ಟಾರ್ಕ್ ದೂರ ಉಳಿದಿದ್ದರು. ಆದರೆ 2020ರ ಐಪಿಎಲ್ಗೆ ಸಾರ್ಟ್ ವಾಪಾಸ್ ಆಗಲಿದ್ದಾರೆ ಎಂದು ಎಲ್ಲರು ಭಾವಿಸಿದ್ದರು.
2020ರ ಐಪಿಎಲ್ ಟೂರ್ನಿಗೆ ಸ್ಟಾರ್ಕ್ ಖರೀದಿ ಮಾಡಲು ಹಲವು ತಂಡಗಳು ಉತ್ಸುಕವಾಗಿದ್ದವು. ಅದರಲ್ಲೂ ಆರ್ಸಿಬಿ ತಂಡ ಈ ಆಸೀಸ್ ಆಟಗಾರನ ಮೇಲೆ ಕಣ್ಣಿಟ್ಟಿತ್ತು. ಆದ್ರೆ ಮಿಚೆಲ್ ಸ್ಟಾರ್ಕ್ ಹರಾಜು ಪ್ರಕ್ರಿಯೆಯಿಂದ ಹಿಂದೆ ಸರಿದಿರುವುದು ಕ್ರಿಕೆಟ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇತ್ತ ಇಂಗ್ಲೆಂಡ್ ತಂಡದ ಬ್ಯಾಟ್ಸ್ಮನ್ ಜೋ ರೂಟ್ ಕೂಡ 2020ರ ಐಪಿಎಲ್ ಹರಾಜಿನಿಂದ ದೂರ ಉಳಿದಿದ್ದಾರೆ.