ETV Bharat / sports

​IPLಗೂ ಮುನ್ನ ಮೊಟೆರಾದಲ್ಲಿ ತರಬೇತಿ ಶಿಬಿರ ಅನುಮಾನ: ಅಧಿಕೃತ ಮಾಹಿತಿ ಇಲ್ಲ ಎಂದ ಜಿಸಿಎ - Cheteshwar pujara news

ಬಿಸಿಸಿಐ ಮೊಟೆರಾದಲ್ಲಿ ಕ್ಯಾಂಪ್​ ನಡೆಸುವ ಸಾಧ್ಯತೆ ಶೂನ್ಯವಾಗಿದೆ. ಏಕೆಂದರೆ ಶಿಬಿರದ ಬಗ್ಗೆ ಬಿಸಿಸಿಐ ಗುಜರಾತ್​ ಕ್ರಿಕೆಟ್​ ಅಸೋಸಿಯೇಷನ್​ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಇದನ್ನು ಗಮನಿಸಿದರೆ ತರಬೇತಿ ಶಿಬಿರ ನಡೆಯುವ ಯಾವುದೇ ಲಕ್ಷಣವಿಲ್ಲ ಎಂದು ತಿಳಿದು ಬಂದಿದೆ.

ತರಬೇತಿ ಶಿಬಿರ
ತರಬೇತಿ ಶಿಬಿರ
author img

By

Published : Jul 30, 2020, 1:46 PM IST

ನವದೆಹಲಿ: ಮುಂದಿನ ತಿಂಗಳು ಮೊಟೆರಾದಲ್ಲಿ ಆಯೋಜನೆಗೊಂಡಿದ್ದ ತರಬೇತಿ ಶಿಬಿರ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಕ್ರಿಕೆಟಿಗರ ಆರೋಗ್ಯ ಮತ್ತು ಸುರಕ್ಷತೆಯನ್ನು ಗಣನೆಗೆ ತೆಗೆದುಕೊಂಡು ಈ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಬಿಸಿಸಿಐನ ಕೇಂದ್ರಿಯ ಗುತ್ತಿಗೆಯಲ್ಲಿರುವ ಚೇತೇಶ್ವರ್​ ಪೂಜಾರ ಮತ್ತು ಹನುಮ ವಿಹಾರಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಕ್ರಿಕೆಟಿಗರು ಐಪಿಎಲ್​ನ ತಮ್ಮ ಪ್ರಾಂಚೈಸಿಗಳು ದುಬೈನಲ್ಲಿ ಏರ್ಪಡಿಸಿರುವ ತರಬೇತಿ ಶಿಬಿರಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಇನ್ನು ಹನಮ ವಿಹಾರಿ ಮತ್ತು ಪೂಜಾರ ಅವರನ್ನು ಐಪಿಎಲ್​ನ ಯಾವುದೇ ತಂಡಗಳು ಖರೀದಿಸಿಲ್ಲ.

Men-in-Blue's training camp
ವಿರಾಟ್​ -ಪೂಜಾರ

ಬಿಸಿಸಿಐ ಮೊಟೆರಾದಲ್ಲಿ ಕ್ಯಾಂಪ್​ ನಡೆಸುವ ಸಾಧ್ಯತೆ ಶೂನ್ಯವಾಗಿದೆ. ಏಕೆಂದರೆ ಶಿಬಿರದ ಬಗ್ಗೆ ಬಿಸಿಸಿಐ ಗುಜರಾತ್​ ಕ್ರಿಕೆಟ್​ ಅಸೋಸಿಯೇಷನ್​ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಇದನ್ನು ಗಮನಿಸಿದರೆ ತರಬೇತಿ ಶಿಬಿರ ನಡೆಯುವ ಯಾವುದೇ ಲಕ್ಷಣವಿಲ್ಲ ಎಂದು ತಿಳಿದು ಬಂದಿದೆ.

"ಆಗಸ್ಟ್ 18 ರಿಂದ ಸೆಪ್ಟೆಂಬರ್ 4 ರವರೆಗೆ ತರಬೇತಿ ಶಿಬಿರ ಪ್ರಾರಂಭವಾಗಲಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು, ಆದರೆ ಇದುವರೆಗೂ ಬಿಸಿಸಿಐನಿಂದ ನಮಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ" ಎಂದು ಜಿಸಿಎ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಐಪಿಎಲ್​ ಪ್ರಾಂಚೈಸಿ ಅಧಿಕಾರಿಯೊಬ್ಬರು " ಐಪಿಎಲ್​ ಮುಂದಿಟ್ಟುಕೊಂಡು ಕೆಂಪು ಬಾಲ್ ಕ್ಯಾಂಪ್ ಮಾಡುವ ಸಾಧ್ಯತೆ ಇದೆಯೇ?" ಎಂದು ತಿಳಿಸಿದ್ದಾರೆ.

ಗುತ್ತಿಗೆಯಲ್ಲಿರುವ ಎಲ್ಲ ಆಟಗಾರರು ಐಪಿಎಲ್​ನಲ್ಲಿ ಆಡುವುದರಿಂದ ಅವರು ಪ್ರಾಂಚೈಸಿ ಆಯೋಜಿಸುವ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು ಉಳಿದ ಪೂಜಾರ ಮತ್ತು ವಿಹಾರಿ ಮಾತ್ರ ತಮ್ಮ ನಗರದಲ್ಲಿ ನೆಟ್​ ಪ್ರಾಕ್ಟೀಸ್​ ಮಾಡಬಹುದು ಅಥವಾ ಬಿಸಿಸಿಐ ಅವರಿಗಾಗಿ ಬೇರೆ ವ್ಯವಸ್ಥೆ ಮಾಡಿಕೊಡಬಹುದು ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.