ಹೈದರಾಬಾದ್: ಬುಧವಾರ ಕೆಕೆಆರ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 10 ರನ್ಗಳ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಸಿಎಸ್ಕೆ ಮಧ್ಯಮ ಕ್ರಮಾಂದ ಬ್ಯಾಟಿಂಗ್ ವೈಫಲ್ಯದಿಂದ ಸೋಲನುಭವಿಸಿತ್ತು.
ಆದರೆ, ಸಿಎಸ್ಕೆ ತಂಡದ ನಾಯಕ ಎಂಎಸ್ ಧೋನಿ ಹಲವು ದಾಖಲೆಗಳಿಗೆ ಪಾತ್ರರಾಗಿದ್ದಾರೆ. ಈ ಪಂದ್ಯದಲ್ಲಿ ಧೋನಿ ಕೆಕೆಆರ್ ತಂಡದ ನಾಲ್ಕು ಬ್ಯಾಟ್ಸ್ಮನ್ಗಳನ್ನು ಪೆವಿಲಿಯನ್ಗಟ್ಟಿದ್ದರು. ಇದು ವಿಕೆಟ್ ಕೀಪರ್ 4 ವಿಕೆಟ್ ಪಡೆದ 18ನೇ ದೃಷ್ಟಾಂತವಾಯಿತು. ಇನ್ನು ಧೋನಿ ಐಪಿಎಲ್ ಇತಿಹಾಸದಲ್ಲಿ 2ನೇ ಬಾರಿ ಒಂದೇ ಪಂದ್ಯದಲ್ಲಿ 4 ಮಂದಿಯನ್ನು ಔಟ್ ಮಾಡಿದ ಶ್ರೇಯಕ್ಕೆ ಪಾತ್ರರಾದರು.
No | Player | Dis | I | Team | Opp | Ground | Date |
1 | Sangakkara | 5 | 2 | Dec | Ban | HydRGS | 14.04.11 |
2 | YV Takawale | 4 | 1 | Mum | Raj | Mumbai | 07.05.08 |
3 | MN van Wyk | 4 | 2 | Kol | Ban | Durban | 29.04.09 |
4 | KD Karthik | 4 | 2 | Delhi | Raj | B’fontein | 17.05.09 |
5 | RV Uthappa | 4 | 2 | Pune | Mum | Mumbai | 06.04.12 |
6 | AC Gilchrist | 4 | 1 | Pun | Che | Dharamsala | 17.05.12 |
7 | BB McCullum | 4 | 2 | Kol | Delhi | PuneMCA | 22.05.12 |
8 | MS Dhoni | 4 | 1 | Che | Ban | Chennai | 13.04.13 |
9 | PA Patel | 4 | 2 | Mum | Guj | Mumbai | 16.04.16 |
10 | NV Ojha | 4 | 2 | Sun | Mum | Vizag | 08.05.16 |
11 | WP Saha | 4 | 2 | Pun | RPun | Vizag | 21.05.16 |
12 | WP Saha | 4 | 1 | Pun | Sun | HydRGS | 17.04.17 |
14 | KD Karthik | 4 | 1 | Kol | Raj | Kolkata | 15.05.18 |
15 | H Klassen | 4 | 2 | Raj | Ban | Jaipur | 19.05.18 |
16 | Q de Kock | 4 | 2 | Mum | Che | Mumbai | 03.04.19 |
17 | SV Samson | 4 | 2 | Raj | Che | Sharjah | 22.09.20 |
18 | MS Dhoni | 4 | 1 | Che | Kol | A Dhabi | 07.10.20 |
ಎಂಎಸ್ ಧೋನಿ ಕೆಕೆಆರ್ ವಿರುದ್ಧ 4 ಬ್ಯಾಟ್ಸ್ಮನ್ಗಳನ್ನು ಕ್ಯಾಚ್ ಮೂಲಕವೇ ಔಟ್ ಮಾಡಿದ್ದು ಮತ್ತೊಂದು ವಿಶೇಷವಾಗಿದೆ. ಇದು ಐಪಿಎಲ್ನಲ್ಲಿ 7ನೇ ಬಾರಿ ಕೀಪರ್ 4 ಅಥವಾ ಅದಕ್ಕಿಂತ ಹೆಚ್ಚು ಬ್ಯಾಟ್ಸ್ಮನ್ಗಳನ್ನು ಕ್ಯಾಚ್ ಮೂಲಕ ಔಟ್ ಮಾಡಿದ ದೃಷ್ಟಾಂತವಾಯಿತು. ಸಂಗಾಕ್ಕರ 5 ಕ್ಯಾಚ್ ಪಡೆದಿರುವ ಏಕೈಕ ವಿಕೆಟ್ ಕೀಪರ್ ಆಗಿದ್ದಾರೆ.
No | Player | Dis | Ct | I | Team | Opp | Ground | Date |
1 | Sangakkara | 5 | 5 | 2 | Dec | Ban | HydRGS | 14.04.11 |
2 | MN van Wyk | 4 | 4 | 2 | Kol | Ban | Durban | 29.04.09 |
3 | AC Gilchrist | 4 | 4 | 1 | Pun | Che | Dharamsala | 17.05.12 |
4 | PA Patel | 4 | 4 | 2 | Mum | Guj | Mumbai | 16.04.16 |
5 | NV Ojha | 4 | 4 | 2 | Sun | Mum | Vizag | 08.05.16 |
6 | Q de Kock | 4 | 4 | 2 | Mum | Che | Mumbai | 03.04.19 |
7 | MS Dhoni | 4 | 4 | 1 | Che | Kol | A Dhabi | 07.10.20 |
ಎಂಎಸ್ ಧೋನಿ 2ನೇ ಬಾರಿ ಪಂದ್ಯವೊಂದರಲ್ಲಿ 4 ಕ್ಯಾಚ್ ಪಡೆಯುವ ಮೂಲಕ ದಿನೇಶ್ ಕಾರ್ತಿಕ್ ಹಾಗೂ ವೃದ್ಧಿಮಾನ್ ಸಹಾ ಅವರ ದಾಖಲೆಯನ್ನು ಸರಿಗಟ್ಟಿದರು.
No | Player | Dis | I | Team | Opp | Ground | Date |
1 | KD Karthik | 4 | 2 | Delhi | Raj | B’fontein | 17.05.09 |
2 | KD Karthik | 4 | 1 | Kol | Raj | Kolkata | 15.05.18 |
1 | MS Dhoni | 4 | 1 | Che | Ban | Chennai | 13.04.13 |
2 | MS Dhoni | 4 | 1 | Che | Kol | A Dhabi | 07.10.20 |
1 | WP Saha | 4 | 2 | Pun | RPun | Vizag | 21.05.16 |
2 | WP Saha | 4 | 1 | Pun | Sun | HydRGS | 17.04.17 |
- 4 ಕ್ಯಾಚ್ ಪಡೆದ ಧೋನಿ(104) ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಕ್ಯಾಚ್ ಪಡೆದ ವಿಕೆಟ್ ಕೀಪರ್ ಎಂಬ ದಾಖಲೆಗೆ ಪಾತ್ರರಾದರು. ಆದರೆ ಚೆನ್ನೈ ಬ್ಯಾಟಿಂಗ್ ವೇಳೆ ಕಾರ್ತಿಕ್ ಕೂಡ ಒಂದು ಕ್ಯಾಚ್ ಪಡೆದು ಮತ್ತೆ ಧೋನಿ ಜೊತೆ ಅಗ್ರಸ್ಥಾನವನ್ನು ಹಂಚಿಕೊಂಡರು.
- ಈ 4 ಕ್ಯಾಚ್ಗಳೊಂದಿಗೆ ಟಿ-20 ಕ್ರಿಕೆಟ್ನಲ್ಲಿ 175 ಕ್ಯಾಚ್ ಪಡೆದ ಮೊದಲ ವಿಕೆಟ್ ಕೀಪರ್ ಎನಿಸಿಕೊಂಡರು. 158 ಕ್ಯಾಚ್ ಪಡೆದಿರುವ ಕಾರ್ತಿಕ್ 2ನೇ ಸ್ಥಾನದಲ್ಲಿದ್ದಾರೆ.
- 167ಕ್ಕೆ ಆಲೌಟ್ ಆದ ಕೆಕೆಆರ್ ಆಯಿತು. ಇದು ಐಪಿಎಲ್ ಟೂರ್ನಮೆಂಟ್ನಲ್ಲಿ ಕಂಡುಬಂದ 128 ಬಾರಿ ಆಲೌಟ್ ಇದಾಗಿತ್ತು. ಇನ್ನು ಕೆಕೆಆರ್ ಕೂಡ 14ನೇ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಲೌಟ್ ಆದಂತಾಯಿತು.
- ಡಿಜೆ ಬ್ರಾವೋ 3 ವಿಕೆಟ್ ಪಡೆಯುವ ಮೂಲಕ ಐಪಿಎಲ್ನಲ್ಲಿ 150 ವಿಕೆಟ್ ಪೂರ್ಣಗೊಳಿಸಿದರು. ಈ ಮೂಲಕ ಈ ಸಾಧನೆ ಮಾಡಿದ 5ನೇ ಬೌಲರ್ ಆದರು. ಇವರಿಗೂ ಮುನ್ನ ಮಾಲಿಂಗ( 170), ಅಮಿತ್ ಮಿಶ್ರಾ (160), ಪಿಯೂಷ್ ಚಾವ್ಲಾ (156), ಹಾಗೂ ಹರ್ಭಜನ್ ಸಿಂಗ್ (150)ಈ ಸಾಧನೆ ಮಾಡಿದ್ದರು.
ಈ ಪಂದ್ಯದಲ್ಲಿ 50 ರನ್ಗಳಿಸುವ ಮೂಲಕ ವಾಟ್ಸನ್ ತಮ್ಮ 25ನೇ ಅರ್ಧಶತಕ ಪೂರೈಸಿದರು. ವಾಟ್ಸನ್ ಟೂರ್ನಿಯಲ್ಲಿ 25 ಅರ್ಧಶತಕ ಪೂರೈಸಿದ 10 ನೇ ಬ್ಯಾಟ್ಸ್ಮನ್ ಎನಿಸಿಕೊಂಡರು.
No | Player | Mat | Runs | HS | C | HC | 50+ |
1 | DA Warner | 131 | 4881 | 126 | 4 | 45 | 49 |
2 | V Kohli | 182 | 5545 | 113 | 5 | 37 | 42 |
3 | SK Raina | 193 | 5368 | 100* | 1 | 38 | 39 |
4 | RG Sharma | 194 | 5109 | 109* | 1 | 38 | 39 |
5 | AB de Villiers | 159 | 4550 | 133* | 3 | 35 | 38 |
6 | S Dhawan | 164 | 4706 | 97* | 0 | 37 | 37 |
7 | G Gambhir | 154 | 4217 | 93 | 0 | 36 | 36 |
8 | CH Gayle | 125 | 4484 | 175* | 6 | 28 | 34 |
9 | AM Rahane | 140 | 3820 | 105* | 2 | 27 | 29 |
10 | SR Watson | 140 | 3760 | 117* | 4 | 21 | 25 |