ಜೈಪುರ: ಇಂಗ್ಲೆಂಡ್ ವಿರುದ್ಧ ಸೀಮಿತ ಓವರ್ಗಳ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಐಪಿಎಲ್ನಲ್ಲಿ ಮೊದಲ ವಾರ ತಪ್ಪಿಸಿಕೊಳ್ಳಲಿದ್ದಾರೆ. ಆ ಕಾರಣದಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮೊದಲ ವಾರ ವೇಗದ ಬೌಲರ್ ಜಯದೇವ್ ಉನಾದ್ಕಟ್ ಮುನ್ನಡೆಸಿಲಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.
ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಪ್ಟೆಂಬರ್ ಕೊನೆ ವಾರದಲ್ಲಿ ಸೀಮಿತ ಓವರ್ಗಳ ಸರಣಿಯಲ್ಲಿ ಪಾಲ್ಗೊಳ್ಳಲಿವೆ. ಈ ಕಾರಣದಿಂದ ಕೆಲವು ಪಂದ್ಯಗಳನ್ನು ಈ ಎರಡೂ ದೇಶಗಳ ಆಟಗಾರರು ತಪ್ಪಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಆಟಗಾರರನ್ನೇ ಹೆಚ್ಚು ಅವಲಂಬಿಸಿರುವ ರಾಜಸ್ಥಾನ್ ರಾಯಲ್ಸ್ ಈ ಸರಣಿಯಿಂದ ಹೆಚ್ಚು ಪರಿಣಾಮ ಬೀರಲಿದೆ. ರಾಯಲ್ಸ್ ತಂಡದಲ್ಲಿ ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್, ಸ್ಟಿವ್ ಸ್ಮಿತ್, ಜೋಪ್ರಾ ಆರ್ಚರ್ ಇದ್ದಾರೆ.
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ 3 ಪಂದ್ಯಗಳ ಟಿ-20 ಹಾಗೂ 3 ಏಕದಿನ ಪಂದ್ಯಗಳನ್ನು ಆಡಲಿವೆ. ಸೆಪ್ಟೆಂಬರ್ 16ಕ್ಕೆ ಸರಣಿ ಅಂತ್ಯಗೊಳ್ಳಲಿದೆ. ಐಪಿಎಲ್ 19ರಂದು ಐಪಿಎಲ್ ಶುರುವಾಗಲಿದೆ. ಇಂಗ್ಲೆಂಡ್ನಿಂದ ಬರುವ ಆಟಗಾರರು 6 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಬೇಕಾಗಿರುವುದರಿಂದ ಮೊದಲ ವಾರದ ಪಂದ್ಯಗಳನ್ನು ಎರಡೂ ದೇಶದ ಆಟಗಾರರು ಮಿಸ್ ಮಾಡಿಕೊಳ್ಳಲಿದ್ದಾರೆ.
ಉನಾದ್ಕಟ್ ಇಲ್ಲಿಯವರೆಗೆ ಐಪಿಎಲ್ ತಂಡವನ್ನು ಮುನ್ನಡೆಸಿಲ್ಲ ಎಂಬುದು ಗಮನಾರ್ಹ.