ಎರಡು ತಂಡಗಳು ಕೆಲವು ಹೊಸ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಿಕೊಂಡಿದ್ದಾರೆ. ಕಳೆದ ಎರಡು ಆವೃತ್ತಿಗಳಲ್ಲಿ ಅಶ್ವಿನ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿದ್ದ ಅವರು ಈ ಬಾರಿ ಡೆಲ್ಲಿ ಕ್ಯಾಪಿಟಲ್ ತಂಡದಲ್ಲಿ ಆಡುತ್ತಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ವಿದೇಶಿ ಆಟಗಾರರಾಗಿ ಮ್ಯಾಕ್ಸ್‌ವೆಲ್, ಪೂರನ್, ಜೋರ್ಡಾನ್ ಮತ್ತು ಕಾಟ್ರೆಲ್ ಕಣಕ್ಕಿಳಿಯುತ್ತಿದ್ದಾರೆ. ಕ್ರಿಸ್ ಗೇಲ್ ಈ ಪಂದ್ಯದಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಅಂಡರ್ 19 ಸ್ಟಾರ್ ರವಿ ಬಿಷ್ಣೋಯ್ ಐಪಿಎಲ್ಗೆ ಪದಾರ್ಪಣೆ ಮಾಡಲಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ ಮಂದೀಪ್ ಸಿಂಗ್ ಬದಲಿಗೆ ಸರ್ಫರಾಜ್ ಖಾನ್ ಪಂಜಾಬ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಕರ್ನಾಟಕದ ನಾಲ್ವರು ಆಟಗಾರರು ಇಂದಿನ ಪಂದ್ಯದಲ್ಲಿದ್ದಾರೆ.
-
Match 2. Kings XI Punjab win the toss and elect to field https://t.co/M4W0PN6mGY #DCvKXIP #Dream11IPL #IPL2020
— IndianPremierLeague (@IPL) September 20, 2020 " class="align-text-top noRightClick twitterSection" data="
">Match 2. Kings XI Punjab win the toss and elect to field https://t.co/M4W0PN6mGY #DCvKXIP #Dream11IPL #IPL2020
— IndianPremierLeague (@IPL) September 20, 2020Match 2. Kings XI Punjab win the toss and elect to field https://t.co/M4W0PN6mGY #DCvKXIP #Dream11IPL #IPL2020
— IndianPremierLeague (@IPL) September 20, 2020
ಡೆಲ್ಲಿ ಕ್ಯಾಪಿಟಲ್ ತಂಡದಲ್ಲಿ ಹೆಟ್ಮೈರ್, ರಬಾಡ, ಸ್ಟೋಯ್ನಿಸ್ ಹಾಗೂ ಎನ್ರಿಚ್ ನಾರ್ಟ್ಜ್ ವಿದೇಶಿ ಆಟಗಾರರಾಗಿ ಕಣಕ್ಕಿಳಿಯುತ್ತಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್: ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್(ನಾಯಕ), ರಿಷಭ್ ಪಂತ್(ವಿ.ಕೀ), ಮಾರ್ಕಸ್ ಸ್ಟೋಯ್ನಿಸ್, ಕಗಿಸೋ ರಬಾಡ, ಅಮಿತ್ ಮಿಶ್ರಾ, ಆರ್. ಅಶ್ವಿನ್, ಅಕ್ಷರ್ ಪಟೇಲ್, ಮೋಹಿತ್ ಶರ್ಮಾ, ಶಿಮ್ರಾನ್ ಹೆಟ್ಮೈರ್,ಎನ್ರಿಚ್ ನಾರ್ಟ್ಜ್,
ಕಿಂಗ್ಸ್ ಇಲೆವೆನ್ ಪಂಜಾಬ್: ಕೆ.ಎಲ್ ರಾಹುಲ್(ನಾಯಕ,ವಿ.ಕೀ) ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಸರ್ಫರಾಜ್ ಖಾನ್, ನಿಕೋಲಸ್ ಪೂರನ್, ಗ್ಲೆನ್ ಮ್ಯಾಕ್ಸ್‌ವೆಲ್, ಕೆ. ಗೌತಮ್, ಮೊಹಮ್ಮದ್ ಶಮಿ, ಕ್ರಿಸ್ ಜೋರ್ಡನ್, ಶೆಲ್ಡಾನ್ ಕಾಟ್ರೆಲ್, ರವಿ ಬಿಷ್ನೋಯ್,