ETV Bharat / sports

'ಅಕ್ಸರ್​'​ ಆರ್ಭಟಕ್ಕೆ ಚೆನ್ನೈ ಉಡೀಸ್​: ಕೊಂಡಾಡಿದ ಕ್ಯಾಪ್ಟನ್​​ ಅಯ್ಯರ್​! - ಅಕ್ಸರ್​ ಆರ್ಭಟಕ್ಕೆ ಚೆನ್ನೈ ಉಡೀಸ್​​

180 ರನ್​ಗಳ ಟಾರ್ಗೆಟ್​ನ ಡೆಲ್ಲಿ ತಂಡ 19.5 ಓವರ್​​ಗಳಲ್ಲಿ 5 ವಿಕೆಟ್​ ಕಳೆದುಕೊಂಡು ಮುಟ್ಟಿತು. ಈ ವೇಳೆ, ಶಿಖರ್​ ಧವನ್​ ಹಾಗೂ ಅಕ್ಸರ್​ ಪಟೇಲ್​​ ಆರ್ಭಟ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತು.

Axar Patel
Axar Patel
author img

By

Published : Oct 18, 2020, 7:45 AM IST

ಶಾರ್ಜಾ: ಇಂಡಿಯನ್​​ ಪ್ರೀಮಿಯರ್​ ಲೀಗ್​​ನ ನಿನ್ನೆಯ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​​ ಭರ್ಜರಿ ಗೆಲುವು ದಾಖಲು ಮಾಡುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಹಾಕಿದೆ.

ಡೆಲ್ಲಿ ತಂಡ ಮಧ್ಯಮ ಕ್ರಮಾಂಕದಲ್ಲಿ ದಿಢೀರ್​ ಕುಸಿತಗೊಳ್ಳುತ್ತಿದ್ದಂತೆ ಸೋಲುವ ಭೀತಿಗೊಳಗಾಗಿತ್ತು. ಈ ವೇಳೆ, ಧವನ್​ ಜೊತೆಗೂಡಿದ ಅಕ್ಸರ್​ ಪಟೇಲ್​ ಕೇವಲ 5 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್​​ ಸಿಡಿಸಿ 21ರನ್ ​ಗಳಿಕೆ ಮಾಡುವುದರ ಜತೆಗೆ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಇವರ ಆಟಕ್ಕೆ ಫಿದಾ ಆಗಿರುವ ಕ್ಯಾಪ್ಟನ್​ ಶ್ರೇಯಸ್​ ಅಯ್ಯರ್​ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

skipper Iyer
ಡೆಲ್ಲಿ ಕ್ಯಾಪ್ಟನ್​​ ಶ್ರೇಯಸ್​ ಅಯ್ಯರ್​​

ಪಂದ್ಯ ಕೊನೆಯ ಓವರ್​ವರೆಗೂ ಹೋಗಿದ್ದರಿಂದ ನಾನು ಒತ್ತಡಕ್ಕೊಳಗಾಗಿದ್ದೇನು. ಶಿಖರ್​ ಧವನ್​ ಕೊನೆಯವರೆಗೂ ಇರುವ ಕಾರಣ ತಂಡಕ್ಕೆ ಗೆಲುವು ತಂದುಕೊಂಡುತ್ತಾರೆಂಬ ನಂಬಿಕೆ ಇತ್ತು. ಆದರೆ ಅಕ್ಸರ್​ ಪಟೇಲ್​ ಆಟ ನಿಜಕ್ಕೂ ಅದ್ಭುತವಾಗಿತ್ತು. ಡ್ರೆಸ್ಸಿಂಗ್​ ರೂಮ್​ನಲ್ಲಿ ಆತನಿಗೆ ನಾವು ಮ್ಯಾನ್​​ ಆಫ್​ ದಿ ಮ್ಯಾಚ್​ ನೀಡಿದೆವು. ಆತ ಒಬ್ಬ ಹೀರೋ ಎಂದಿದ್ದಾರೆ.

Axar Patel
ಚೆನ್ನೈ ವಿರುದ್ಧ ಅಕ್ಸರ್​ ಆರ್ಭಟ

ನಮ್ಮ ತಂಡದ ಸಾಮರ್ಥ್ಯ ಮತ್ತು ದೌರ್ಬಲ್ಯ ನಾವು ಚೆನ್ನಾಗಿ ಬಲ್ಲೆವು. ಶಿಖರ್​ ಬ್ಯಾಟಿಂಗ್​ ಮಾಡಿದ ರೀತಿ ನೋಡಲು ನಿಜಕ್ಕೂ ಚೆಂದವಾಗಿತ್ತು. ಕೊನೆಯವರೆಗೂ ನಿಂತು ತಂಡಕ್ಕೆ ಗೆಲ್ಲುವು ತಂದುಕೊಟ್ಟಿರುವ ಶ್ರೇಯ ಶಿಖರ್​ ಧವನ್​ಗೆ ಸಲ್ಲಬೇಕು ಎಂದು ಇದೇ ವೇಳೆ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.