ಕೋಲ್ಕತಾ: ಸೆಪ್ಟೆಂಬರ್ 19 ರಿಂದ ನವೆಂಬರ್ 10 ರವರೆಗೆ ಯುಎಇಯಲ್ಲಿ ನಡೆಯಲಿರುವ ಐಪಿಎಲ್‌ಗೆ ನೆಟ್ ಬೌಲರ್‌ಗಳಾಗಿ ಬಂಗಾಳದ ವೇಗದ ಬೌಲಿಂಗ್ ಜೋಡಿ ಆಕಾಶ್‌ದೀಪ್ ಮತ್ತು ಸಯಾನ್ ಘೋಷ್ ಕ್ರಮವಾಗಿ ರಾಜಸ್ಥಾನ್ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳೊಂದಿಗೆ ಪ್ರಯಾಣಿಸಲಿದ್ದಾರೆ.
ಫ್ರಾಂಚೈಸಿಗಳು ಈ ಇಬ್ಬರು ಯುವಕರ ಬಗ್ಗೆ ಆಸಕ್ತಿ ತೋರಿಸಿದ್ದಕ್ಕೆ ನಮಗೆ ಸಂತೋಷವಾಗಿದೆ. ಕಳೆದ ಕೆಲವು ದಿನಗಳಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು, ಫ್ರಾಂಚೈಸಿಗಳು ಇಂದು ಅಧಿಕೃತವಾಗಿ ದೃಢ ಪಡಿಸಿವೆ. ಈ ಇಬ್ಬರು ಬೌಲರ್ಗಳು ಸ್ಕ್ವಾಡ್ ಬೌಲರ್‌ಗಳಾಗಿ ಸೇರಲಿದ್ದಾರೆ, ಇಬ್ಬರ ಈ ಯಶಸ್ಸಿಗೆ ಶುಭ ಹಾರೈಸುತ್ತೇನೆ ”ಎಂದು ಸಿಎಬಿ ಅಧ್ಯಕ್ಷ ಅವಿಶೇಕ್ ದಾಲ್ಮಿಯಾ ಹೇಳಿದ್ದಾರೆ.
"ಈ ಆಟಗಾರರು ತುಂಬಾ ಪ್ರತಿಭಾವಂತರು ಮತ್ತು ಸಾಕಷ್ಟು ಸಾಮರ್ಥ್ಯ ಹೊಂದಿದ್ದಾರೆ. ಸುಮಾರು 75 ರಿಂದ 80 ದಿನಗಳವರೆಗೆ ಫ್ರಾಂಚೈಸಿಗಳೊಂದಿಗೆ ಈ ವಾಸ್ತವ್ಯವು ಅವರ ಕೌಶಲ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ " ಎಂದು ಸಿಎಬಿ ಕಾರ್ಯದರ್ಶಿ ಸ್ನೇಹಶಿಶ್ ಗಂಗೂಲಿ ಹೇಳಿದ್ದಾರೆ.
ಆಕಾಶ್‌ದೀಪ್ ಮತ್ತು ಘೋಷ್ ಇಬ್ಬರೂ ಫ್ರಾಂಚೈಸಿಗಳಿಗೆ ಸೇರುವ ನಿರೀಕ್ಷೆಯ ಬಗ್ಗೆ ಉತ್ಸುಕರಾಗಿದ್ದಾರೆ ಮತ್ತು ಆಗಸ್ಟ್ ಮೂರನೇ ವಾರದಲ್ಲಿ ಹೊರಡಲು ನಿರ್ಧರಿಸಲಾಗಿದೆ.
"ನಾನು ವಿಶ್ವದ ಕೆಲವು ಅತ್ಯುತ್ತಮ ಪಂದ್ಯಗಳಿಗೆ ಬೌಲಿಂಗ್ ಮಾಡುವ ಅವಕಾಶ ಪಡೆಯುತ್ತಿದ್ದೇನೆ. ರಾಜಸ್ಥಾನ್ ರಾಯಲ್ಸ್ ನಾಯಕನಾಗಿರುವ ಸ್ಟೀವ್ ಸ್ಮಿತ್ ಮತ್ತು ಕೋಚ್ ಆಗಿರುವ ಆಂಡ್ರ್ಯೂ ಮೆಕ್ಡೊನಾಲ್ಡ್ ಜೊತೆ ಕಲಿಯಲು ಸಾಕಷ್ಟು ಇರುತ್ತದೆ "ಎಂದು ಆಕಾಶ್‌ದೀಪ್ ಹೇಳಿದರು.
ಕಳೆದ ಋತುವಿನಲ್ಲಿ ದೆಹಲಿ ಕ್ಯಾಪಿಟಲ್ಸ್‌ನಿಂದ 20 ಲಕ್ಷ ರೂ.ಗೆ ಆಯ್ಕೆಯಾದ ಘೋಷ್ ಅವರು ಆಡಲು ಅವಕಾಶ ಸಿಗಲಿಲ್ಲ. ಈ ಬಾರಿ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ಹೇಳಿದರು. ಕೆ.ಎಲ್. ರಾಹುಲ್ ಮತ್ತು ಕ್ರಿಸ್ ಗೇಲ್ ಅವರಿಗೆ ಬೌಲಿಂಗ್ ಮಾಡುವುದು ಇದು ನನಗೆ ಸಿಕ್ಕ ಉತ್ತಮ ಅವಕಾಶ. ನಾನು ಇಲ್ಲಿ ಪಡೆಯುವ ಅನುಭವದ ಮುಂದೆ ಭವಿಷ್ಯದಲ್ಲಿ ಬಂಗಾಳ ತಂಡಕ್ಕೆ ಸಹಾಯಕ ವಾಗುತ್ತದೆ ಎಂದರು.