ETV Bharat / sports

ರಹಾನೆ ಪಡೆಗೆ ಸೋಲಿನ ರುಚಿ ತೋರಿಸಿದ ಅಶ್ವಿನ್​ ಬಳಗ... ಟೂರ್ನಿಯಲ್ಲಿ ಪಂಜಾಬ್​ ಶುಭಾರಂಭ

ಮೊದಲ ಪಂದ್ಯದಲ್ಲಿ ಸುಲಭ ಗೆಲುವಿನ ತವಕದಲ್ಲಿದ್ದ ರಾಜಸ್ಥಾನ ತಂಡಕ್ಕೆ ಅಶ್ವಿನ್​ ಮಾರಕವಾದರು. ಉತ್ತಮವಾಗಿ ಬ್ಯಾಟ್​ ಬೀಸುತ್ತಿದ್ದ ಬಟ್ಲರ್​ ವಿಕೆಟ್​​ ವಿವಾದಿತ ರೀತಿಯಲ್ಲಿ ಪಡೆದುಕೊಂಡು ತಂಡಕ್ಕೆ ಮೆಲುಗೈ ತಂದುಕೊಟ್ಟರು.

ಪಂಜಾಬ್​ ಆಟಗಾರರ ಸಂಭ್ರಮಾಚರಣೆ
author img

By

Published : Mar 26, 2019, 3:57 AM IST

ಜೈಪುರ್​: ಇಂಡಿಯನ್​ ಪ್ರೀಮಿಯರ್​ ಲೀಗ್​ನ ಮತ್ತೊಂದು ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ತಂಡಕ್ಕೆ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡ ಸೋಲಿನ ರುಚಿ ತೋರಿಸಿದೆ. ಪಂದ್ಯದಲ್ಲಿ ರೋಚಕ ಗೆಲುವು ದಾಖಲು ಮಾಡಿರುವ ಅಶ್ವಿನ ಪಡೆ ಶುಭಾರಂಭ ಮಾಡಿದೆ.

ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಪಂಜಾಬ್​ ತಂಡ ಗೇಲ್​ ಅಬ್ಬರದ 79ರನ್​ ಹಾಗೂ ಸರ್ಫರಾಜ್​ ಖಾನ್​ ಅಜೇಯ 46ರನ್​ಗಳ ನೇರವಿನಿಂದ ನಿಗದಿತ 20 ಓವರ್​ಗಳಲ್ಲಿ 4ವಿಕೆಟ್​ ಕಳೆದುಕೊಂಡು 184ರನ್​ಗಳಿಕೆ ಮಾಡಿತು.

185ರನ್​ಗಳ ಗುರಿ ಬೆನ್ನತ್ತಿದ್ದ ರಹಾನೆ ಪಡೆ ಉತ್ತಮ ಆರಂಭ ಪಡೆದುಕೊಂಡಿತು. ರಾಜಸ್ಥಾನ ತಂಡದ ನಾಯಕ ಅಜಿಂಕ್ಯ ರಹಾನೆ ಹಾಗೂ ಜೋಸ್ ಬಟ್ಲರ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 78 ರನ್ ಸಿಡಿಸಿತು. ಆದರೆ ರಹಾನೆ 27 ರನ್ ಸಿಡಿಸಿ ಔಟಾದರು. ಇತ್ತ ಅದ್ಭುತವಾಗಿ ಬ್ಯಾಟ್​ ಬೀಸುತ್ತಿದ್ದ ಬಟ್ಲರ್​ ವಿವಾದಿತ ರೀತಿ ವಿಕೆಟ್​​ ಒಪ್ಪಿಸಿದರು. ಅಶ್ವಿನ್​ ಬೌಲಿಂಗ್ ಮಾಡುತ್ತಿದ್ದ ವೇಳೆ ಕ್ರೀಸ್‌ನಿಂದ ಹೊರಗಿದ್ದ ಬಟ್ಲರ್‌ ವಿಕೆಟ್​ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಇದು ಕೆಲಹೊತ್ತು ಗೊಂದಲಕ್ಕೆ ಕಾರಣವಾಯಿತು. ಆದರೆ ಅಂಪೈರ್​ ಔಟ್​ ಎಂದು ತೀರ್ಪು ನೀಡಿದರು.

ಇದಾದ ಬಳಿಕ ಸಾಮ್ಸನ್- ಸ್ಟೀವ್ ಸ್ಮಿತ್ ಅಬ್ಬರಿಸಿದರೂ ತಂಡವನ್ನ ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಅಂತಿಮ ಹಂತದಲ್ಲಿ ರಾಜಸ್ಥಾನ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡು ಆತಂಕಕ್ಕೆ ಒಳಗಾಯಿತು. ಬೆನ್ ಸ್ಟೋಕ್ಸ್ (6), ರಾಹುಲ್ ತ್ರಿಪಾಠಿ (1), ಜೋಫ್ರಾ ಆರ್ಚರ್ (2) ರನ್ ಸಿಡಿಸಿ ಔಟಾದರು. ಕೊನೆಯದಾಗಿ ತಂಡ ನಿಗದಿತ 20 ಓವರ್​ಗಳಲ್ಲಿ 9ವಿಕೆಟ್​​ ಕಳೆದುಕೊಂಡು 170ರನ್​ಗಳಿಕೆ ಮಾಡಿತು. ಹೀಗಾಗಿ ಪಂಜಾಬ್​ ತಂಡ 14ರನ್​ಗಳ ಗೆಲುವು ದಾಖಲು ಮಾಡಿದೆ.

Intro:Body:

185ರನ್​ಗಳ ಗುರಿ ಬೆನ್ನತ್ತಿದ್ದ ರಹಾನೆ ಪಡೆ ಉತ್ತಮ ಆರಂಭ ಪಡೆದುಕೊಂಡಿತು. ರಾಜಸ್ಥಾನ ತಂಡದ ನಾಯಕ ಅಜಿಂಕ್ಯ ರಹಾನೆ ಹಾಗೂ ಜೋಸ್ ಬಟ್ಲರ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 78 ರನ್ ಸಿಡಿಸಿತು. ಆದರೆ ರಹಾನೆ 27 ರನ್ ಸಿಡಿಸಿ ಔಟಾದರು. ಇತ್ತ ಅದ್ಭುತವಾಗಿ ಬ್ಯಾಟ್​ ಬೀಸುತ್ತಿದ್ದ ಬಟ್ಲರ್​ ವಿವಾದಿತ ರೀತಿ ವಿಕೆಟ್​​ ಒಪ್ಪಿಸಿದರು. ಅಶ್ವಿನ್​ ಬೌಲಿಂಗ್ ಮಾಡುತ್ತಿದ್ದ ವೇಳೆ ಕ್ರೀಸ್‌ನಿಂದ ಹೊರಗಿದ್ದ ಬಟ್ಲರ್‌ ವಿಕೆಟ್​ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.

ಇದಾದ ಬಳಿಕ ಸಾಮ್ಸನ್- ಸ್ಟೀವ್ ಸ್ಮಿತ್ ಅಬ್ಬರಿಸಿದರೂ ತಂಡವನ್ನ ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಅಂತಿಮ ಹಂತದಲ್ಲಿ ರಾಜಸ್ಥಾನ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡು ಆತಂಕಕ್ಕೆ ಒಳಗಾಯಿತು. ಬೆನ್ ಸ್ಟೋಕ್ಸ್ (6), ರಾಹುಲ್ ತ್ರಿಪಾಠಿ (1), ಜೋಫ್ರಾ ಆರ್ಚರ್ (2) ರನ್ ಸಿಡಿಸಿ ಔಟಾದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.