ETV Bharat / sports

ಕೊಹ್ಲಿ & ರೋಹಿತ್​ಗೆ ಬೌಲಿಂಗ್​ ಮಾಡುವುದು ಹೇಗೆ ಎಂಬ ಮಾಹಿತಿ ನೀಡಿದ ಪಠಾಣ್​!

author img

By

Published : Nov 5, 2020, 3:47 PM IST

ಶ್ರೀಲಂಕಾ ಪ್ರೀಮಿಯರ್​ ಲೀಗ್​ನಲ್ಲಿ ಅಬ್ಬರಿಸಲು ಸಜ್ಜಾಗಿರುವ ಟೀಂ ಇಂಡಿಯಾ ಮಾಜಿ ಆಟಗಾರ ಇರ್ಫಾನ್ ಪಠಾಣ್​ ಕೆಲವೊಂದು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

Irfan Pathan
Irfan Pathan

ದುಬೈ: ಟೀಂ ಇಂಡಿಯಾ ಮಾಜಿ ಆಲ್​ರೌಂಡರ್​ ಇರ್ಫಾನ್​ ಪಠಾಣ್​ ಸದ್ಯ ಲಂಕಾ ಪ್ರೀಮಿಯರ್​ ಲೀಗ್​(ಎಲ್​ಪಿಎಲ್​)ನಲ್ಲಿ ಕ್ಯಾಂಡಿ ಟಸ್ಕರ್ಸ್​​ ಪ್ರಾಂಚೈಸಿನಲ್ಲಿ ಭಾಗಿಯಾಗಲು ಸಜ್ಜಾಗಿದ್ದರು. ಇದರ ಮಧ್ಯೆ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ತಾವು ಕೊಹ್ಲಿ ಹಾಗೂ ರೋಹಿತ್​ ಶರ್ಮಾ ಅವರಿಗೆ ಯಾವ ರೀತಿಯಾಗಿ ಬೌಲಿಂಗ್​ ಮಾಡ್ತಿದರೂ ಎಂಬುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಪಠಾಣ್​, ಎಲ್​ಪಿಎಲ್​ ಹಾಗೂ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಯುವ ದೇಶೀಯ ಆಟಗಾರರಿಗೆ ಸಹಾಯ ಮಾಡಲು ಎದುರು ನೋಡುತ್ತಿರುವುದಾಗಿ ಮಾತನಾಡಿರುವ ಅವರು ವಿರಾಟ್​​ ಕೊಹ್ಲಿ ಮತ್ತು ರೋಹಿತ್​ ಶರ್ಮಾ ಅವರೊಂದಿಗೆ ಬೌಲಿಂಗ್​ ಮಾಡುವುದು ಹೇಗೆ ಎಂಬುದರ ಬಗ್ಗೆ ಬೆಳಕು ಚೆಲ್ಲಿದ್ದಾರೆ.

Rohit sharma
ರೋಹಿತ್​ ಶರ್ಮಾ

ಪ್ರಪಂಚದಾದ್ಯಂತ ಟಿ-20 ಲೀಗ್​ಗಳು ದೇಶೀಯ ಆಟಗಾರರನ್ನು ತಂಡದಲ್ಲಿ ಹೊಂದಲು ಒತ್ತು ನೀಡುತ್ತವೆ. ಇಂದು ಮುಂದಿನ ಪೀಳಿಗೆ ಕ್ರಿಕೆಟ್​ನಲ್ಲಿ ವಿವಿಧ ದೇಶಗಳಿಗೆ ಬೋನಸ್ ಆಗಿರುತ್ತದೆ ಎಂದಿದ್ದಾರೆ.ಎಲ್​ಪಿಎಲ್​ ಮತ್ತು ಇತರೆ ಟಿ-20 ಲೀಗ್​ಗಳಲ್ಲಿ ಸಾಕಷ್ಟು ಯುವ ದೇಶೀಯ ಆಟಗಾರರಿಗೆ ಅವಕಾಶ ನೀಡುವುದು ಕಡ್ಡಾಯಗೊಳಿಸಲಾಗಿದೆ. ಡ್ರೆಸ್ಸಿಂಗ್​ ರೂಂನಲ್ಲಿ, ತಂಡದ ಸಭೆಗಳಲ್ಲಿ ಹಾಗೂ ಕಠಿಣ ಸಂದರ್ಭಗಳಲ್ಲಿ ಹಿರಿಯರ ಸಲಹೆ ಪಡೆದುಕೊಳ್ಳಲು ಇಲ್ಲಿ ಸಿಕ್ಕ ಅವಕಾಶ ಬೇರೆ ಎಲ್ಲಿ ಕೂಡ ಸಿಗಲ್ಲ ಎಂದು ತಿಳಿಸಿದ್ದಾರೆ.

ನಾನು ಇ ಹಿಂದೆ ಕೆಲ ಕೋಚಿಂಗ್​ ಕಾರ್ಯಯೋಜನೆಗಳಲ್ಲಿ ಭಾಗಿಯಾಗಿದ್ದೇನೆ. ಇದೀಗ ಶ್ರೀಲಂಕಾ ಪ್ರೀಮಿಯರ್​ ಲೀಗ್​ನಲ್ಲಿ ಉತ್ತಮ ಕ್ರಿಕೆಟ್ ಆಡಲು ನಾನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

Virat
ವಿರಾಟ್​ ಕೊಹ್ಲಿ

ಹರ್ಭಜನ್ ಸಿಂಗ್ ನಂತರ ಭಾರತದ ಟೆಸ್ಟ್​ನಲ್ಲಿ ಹ್ಯಾಟ್ರಿಕ್​ ವಿಕೆಟ್​ ಪಡೆದ ಎರಡನೇ ಆಟಗಾರ ಪಠಾಣ್​ ಆಗಿದ್ದು, ಸದ್ಯ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ಅವರಿಗೆ ಯಾವ ರೀತಿಯಲ್ಲಿ ಬೌಲಿಂಗ್​ ಮಾಡ್ತೀರಿ ಎಂಬುದಕ್ಕೆ ಉತ್ತರಿಸಿದ್ದಾರೆ. ವಿರಾಟ್​ಗೆ 4-5ನೇ ಸ್ಟಂಪ್​ ಲೈನ್​ ಬೌಲ್​ ಮಾಡ್ತಿದ್ದೆ. ಕಾರಣ ಅವರು ಮುಂದೆ ಬಂದು ಆಡಲು ಇಷ್ಟಪಡುತ್ತಿದ್ದರು. ಅದೇ ರೀತಿ ರೋಹಿತ್​​ ಫುಲ್​ ಬೌಲ್ ಮಾಡಲು ಮುಂದಾಗುತ್ತಿದ್ದೇನು ಎಂದಿದ್ದಾರೆ. ಪಠಾಣ್​​ ಸದ್ಯ ಲಂಕಾ ಪ್ರೀಮಿಯರ್ ಲೀಗ್​ನಲ್ಲಿ ಕ್ಯಾಂಡಿ ಟಸ್ಕರ್ಸ್​ ಪರ ಆಡಲು ಮುಂದಾಗಿದ್ದು, ಇದರಲ್ಲಿ ವೆಸ್ಟ್​ ಇಂಡೀಸ್​ನ ಕ್ರಿಸ್ ಗೇಲ್, ಕುಶಾಲ್​ ಪೆರೆರಾ, ಕುಶಾಲ್ ಮೆಂಡಿಸ್, ನುವಾನ್​ ಪ್ರದೀಪ್​ ಸೇರಿ ಅನೇಕರು ಇದ್ದಾರೆ. ಪಠಾಣ್​ ಟೀಂ ಇಂಡಿಯಾ ಪರ 29 ಟೆಸ್ಟ್​, 120 ಏಕದಿನ ಹಾಗೂ 24 ಟಿ-20 ಪಂದ್ಯಗಳನ್ನಾಡಿದ್ದು, ಈಗಾಗಲೇ ನಿವೃತ್ತಿ ಘೋಷಣೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.