ದುಬೈ: ಚೆನ್ನೈ ವಿರುದ್ಧ ನಡೆಯುತ್ತಿರುವ ಮತ್ತೊಂದು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ಗಳಲ್ಲಿ 3ವಿಕೆಟ್ ಕಳೆದುಕೊಂಡು 175ರನ್ಗಳಿಕೆ ಮಾಡಿದ್ದು, ಧೋನಿ ಪಡೆಗೆ 176ರನ್ ಟಾರ್ಗೆಟ್ ನೀಡಿದೆ.
ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಡೆಲ್ಲಿ ತಂಡ ಉತ್ತಮ ಆರಂಭ ಪಡೆದುಕೊಳ್ತು. ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ(64), ಶಿಖರ್ ಧವನ್(35) ಮೊದಲ ವಿಕೆಟ್ನಷ್ಟಕ್ಕೆ 94ರನ್ಗಳಿಕೆ ಮಾಡಿದರು. 64ರನ್ಗಳಿಸಿದ್ದ ಪೃಥ್ವಿ ಚಾವ್ಲಾ ಓವರ್ನಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಸ್ಟಂಪ್ ಔಟ್ ಆದರು. ಇದರ ಬೆನ್ನಲ್ಲೇ ಧವನ್ ಕೂಡ ಎಲ್ಬಿ ಬಲೆಗೆ ಬಿದ್ದರು.
-
The big partnership between Shaw and Dhawan comes to an end.#DC lose their first wicket with 94 runs on the board.
— IndianPremierLeague (@IPL) September 25, 2020 " class="align-text-top noRightClick twitterSection" data="
Live - https://t.co/Ju3tim4Ffx #Dream11IPL #CSKvDC pic.twitter.com/qe0sXoNzb7
">The big partnership between Shaw and Dhawan comes to an end.#DC lose their first wicket with 94 runs on the board.
— IndianPremierLeague (@IPL) September 25, 2020
Live - https://t.co/Ju3tim4Ffx #Dream11IPL #CSKvDC pic.twitter.com/qe0sXoNzb7The big partnership between Shaw and Dhawan comes to an end.#DC lose their first wicket with 94 runs on the board.
— IndianPremierLeague (@IPL) September 25, 2020
Live - https://t.co/Ju3tim4Ffx #Dream11IPL #CSKvDC pic.twitter.com/qe0sXoNzb7
ಇದರ ಬಳಿಕ ಒಂದಾದ ನಾಯಕ ಶ್ರೇಯಸ್ ಅಯ್ಯರ್(37), ವಿಕೆಟ್ ಕೀಪರ್ ರಿಷಭ್ ಪಂತ್ ಅಜೇಯ (37) ರನ್ಗಳಿಕೆ ಮಾಡಿ ತಂಡದ ಮೊತ್ತ 150ರ ಗಡಿ ದಾಟುವಂತೆ ಮಾಡಿದರು. ಚೆನ್ನೈ ಪರ ಚಾವ್ಲಾ 2ವಿಕೆಟ್ ಪಡೆದುಕೊಂಡರೆ, ಕರ್ರನ್ 1ವಿಕೆಟ್ ಪಡೆದುಕೊಂಡರು. ಉಳಿದಂತೆ ಯಾವುದೇ ಬೌಲರ್ ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ.