ಹೈದರಾಬಾದ್: ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ 13ನೇ ಐಪಿಎಲ್ ಆವೃತ್ತಿಯಲ್ಲಿ ಕಾರ್ಯ ನಿರ್ವಹಿಸುವ ಪಂದ್ಯದ 20 ಅಧಿಕಾರಿಗಳ ಕೋವಿಡ್ 19 ಪರೀಕ್ಷೆ ನೆಗೆಟಿವ್ ಬಂದಿದೆ.
ಭಾರತದ 12, ವಿದೇಶದ 3 ಅಂಪೈರ್‌ಗಳು ಹಾಗೂ ಭಾರತದ ರೆಫ್ರಿಗಳು ಬಿಸಿಸಿಐನ ಕ್ವಾರಂಟೈನ್ ಪ್ರೋಟೋಕಾಲ್ಗಳನ್ನು ಪೂರೈಸುವುದರ ಜೊತೆಗೆ ಕೋವಿಡ್ ಸಂಬಂಧ 19 ಟೆಸ್ಟ್ಗಳಲ್ಲಿ ನೆಗೆಟಿವ್ ಬಂದಿದೆ. ಪ್ರತಿಯೊಬ್ಬ ಅಧಿಕಾರಿ ಕ್ವಾರಂಟೈನ್ನ ಮೊದಲ ದಿನ ಹಾಗೂ 3 ಮತ್ತು 5ನೇ ದಿನ ಕೋವಿಡ್ ಟೆಸ್ಟ್ಗೆ ಒಳಾಗಾಗಿದ್ದರು.
ಕ್ವಾರಂಟೈನ್ ಅವಧಿ ಯಶಸ್ವಿಯಾಗಿ ಪೂರೈಸಿರುವ ಅವರು ಬಹು ನಿರೀಕ್ಷಿತ ಐಪಿಎಲ್ 2020ಯಲ್ಲಿ ಕಾರ್ಯ ನಿರ್ವಹಿಸುವುದಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. ಇವರೆಲ್ಲರಿಗೂ ಯುಎಇನಲ್ಲಿ 5 ಸ್ಟಾರ್ ಹೋಟೆಲ್ಗಳಲ್ಲಿ ಆತಿಥ್ಯ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಟೂರ್ನಿಯಲ್ಲಿ ಕಾರ್ಯ ನಿರ್ವಹಿಸುವ ಅಂಪೈರ್ ಹಾಗೂ ರೆಫ್ರಿಗಳು:
ಭಾರತದ 12 ಅಂಪೈರ್‌ಗಳು: ಅನಿಲ್ ಚೌಧರಿ, ಸಿ.ಶಂಶುದ್ದೀನ್, ವೀರೇಂದ್ರ ಶರ್ಮಾ, ಕೆ.ಎನ್. ಅನಂತ ಪದ್ಮನಾಭನ್, ನಿತಿನ್ ಮೆನನ್, ಎಸ್.ರವಿ, ವಿನೀತ್ ಕುಲಕರ್ಣಿ, ಯಶವಂತ್ ಬಾರ್ಡೆ, ಉಲ್ಹಾಸ್ ಗಾಂಧೆ, ಅನಿಲ್ ದಾಂಡೇಕರ್, ಕೆ ಶ್ರೀನಿವಾಸನ್, ಮತ್ತು ಪಾಶ್ಚಿಮ್ ಪಾಠಕ್.
ವಿದೇಶಿ ಅಂಪೈರ್‌ಗಳು: ಇಂಗ್ಲೆಂಡ್‌ನ ರಿಚರ್ಡ್ ಇಲ್ಲಿಂಗ್ವರ್ತ್, ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಪಾಲ್ ರೀಫೆಲ್ ಮತ್ತು ನ್ಯೂಜಿಲೆಂಡ್‌ನ ಕ್ರಿಸ್ಟೋಫರ್ ಗಫಾನೆ.
ಪಂದ್ಯದ ರೆಫ್ರಿಗಳು: ಜಾವಗಲ್ ಶ್ರೀನಾಥ್, ಮನು ನಾಯರ್, ವಿ.ನಾರಾಯಣ್ ಕುಟ್ಟಿ, ಶಕ್ತಿ ಸಿಂಗ್ ಮತ್ತು ಪ್ರಕಾಶ್ ಭಟ್.