ಮುಂಬೈ: ವಿಶ್ವಕಪ್ ವೇಳೆ ಗಾಯಗೊಂಡಿದ್ದ ಶಿಖರ್ ಧವನ್ ಹಾಗೂ ವಿಜಯ್ ಶಂಕರ್ ಮುಂಬರುವ ವಿಂಡೀಸ್ ಪ್ರವಾಸಕ್ಕೂ ಮುನ್ನ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ದೈಹಿಕ ಪರೀಕ್ಷೆಗೆ ಒಳಗಾಗಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಅಬ್ಬರದ ಶತಕ ಸಿಡಿಸಿದ್ದ ಧವನ್ ಪಂದ್ಯದ ವೇಳೆ ಎಡಗೈ ಹೆಬ್ಬೆರಳು ಮುರಿತಕ್ಕೆೊಳಗಾಗಿ ಟೂರ್ನಿಯಿಂದ ಹೊರಬಿದ್ದಿದ್ದರು. ಆಲ್ರೌಂಡರ್ ವಿಜಯ್ ಶಂಕರ್ ಕೂಡ ಅಭ್ಯಾಸದ ವೇಳೆ ಬುಮ್ರಾ ಬೌಲಿಂಗ್ನಲ್ಲಿ ಗಾಯಗೊಂಡಿದ್ದರು. ಇವರಿಬ್ಬರ ಜಾಗಕ್ಕೆ ವಿಕೆಟ್ ಕೀಪರ್ ಪಂತ್ ಹಾಗೂ ಮಯಾಂಕ್ ಅಗರ್ವಾಲ್ ಸೇರ್ಪಡೆಯಾಗಿದ್ದರು.
ಇದೀಗ ಸೆಪ್ಟೆಂಬರ್ 3 ರಿಂದ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಹಾಗೂ ಏಕದಿನ ಸರಣಿಗೆ ಜುಲೈ 19 ರಂದು ತಂಡದ ಆಯ್ಕೆ ಇರುವುದರಿಂದ ಗಾಯಾಳುಗಳಾಗಿರುವ ಧವನ್ ಹಾಗೂ ವಿಜಯ್ ಶಂಕರ್ ಬೆಂಗಳೂರಿನಲ್ಲಿ ಫಿಟ್ಲೆಸ್ ಟೆಸ್ಟ್‌ಗೆ ಒಳಗಾಗಲಿದ್ದಾರೆ.
ವಿಕೆಟ್ ಕೀಪರ್ ಧೋನಿ ಆಯ್ಕೆಯ ಬಗ್ಗೆ ಇನ್ನೂ ಗೊಂದಲಗಳು ಹಾಗೆಯೇ ಮುಂದುವರಿದಿದ್ದು ಆಯ್ಕೆ ಸಮಿತಿಯಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ವಿಂಡೀಸ್ ಪ್ರವಾಸದಲ್ಲಿ ಭಾರತ ತಂಡ 3 ಏಕದಿನ ಪಂದ್ಯ, 3 ಟಿ-20 ಹಾಗೂ 2 ಟೆಸ್ಟ್ ಪಂದ್ಯಗಳನ್ನಾಡಲಿದೆ. ಸೀಮಿತ ಓವರ್ಗಳ ಪಂದ್ಯಗಳಿಗೆ ಕೊಹ್ಲಿ ಹಾಗೂ ಬುಮ್ರಾಗೆ ವಿಶ್ರಾಂತಿ ನೀಡಲಾಗಿದ್ದು, ರೋಹಿತ್ ಶರ್ಮಾ ತಂಡದ ನೇತೃತ್ವವಹಿಸಲಿದ್ದಾರೆ. ಟೆಸ್ಟ್ ಸರಣಿಗೆ ಕೊಹ್ಲಿ ತಂಡ ಸೇರಿಕೊಳ್ಳಲಿದ್ದು, ಅವರೇ ತಂಡ ಮುಂದುವರಿಸಲಿದ್ದಾರೆ.