ಪ್ಲೋರಿಡಾ: ಪದಾರ್ಪಣೆ ಪಂದ್ಯವಾಡಿದ ನವ್ದೀಪ್ ಸೈನಿ (3 ವಿಕೆಟ್) ಮಾರಕ ಬೌಲಿಂಗ್ ದಾಳಿ ಹಾಗೂ ಸಂಘಟಿತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ವಿಂಡೀಸ್ ಮಣಿಸಿ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ ನಡೆಸಿದ್ದ ವಿಂಡೀಸ್ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 95 ರನ್ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಉತ್ತಮ ಬೌಲಿಂಗ್ ದಾಳಿ ನಡೆಸಿದ ಸೈನಿ 3 ವಿಕೆಟ್, ಭುವನೇಶ್ವರ್ 2 , ಜಡೇಜಾ, ವಾಷಿಂಗ್ಟನ್ ಸುಂದರ್,ಕೃನಾಲ್ ಹಾಗೂ ಖಲೀಲ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದು ವಿಂಡೀಸ್ ತಂಡವನ್ನು 100 ಗಡಿಯೊಳಗೆ ಬಂಧಿಸಿದರು.
-
A six from Sundar to finish the proceedings. We win the 1st T20I by 4 wickets in 17.2 overs 😎😎#WIvIND pic.twitter.com/y3SKQ82Qmj
— BCCI (@BCCI) August 3, 2019 " class="align-text-top noRightClick twitterSection" data="
">A six from Sundar to finish the proceedings. We win the 1st T20I by 4 wickets in 17.2 overs 😎😎#WIvIND pic.twitter.com/y3SKQ82Qmj
— BCCI (@BCCI) August 3, 2019A six from Sundar to finish the proceedings. We win the 1st T20I by 4 wickets in 17.2 overs 😎😎#WIvIND pic.twitter.com/y3SKQ82Qmj
— BCCI (@BCCI) August 3, 2019
ಇನ್ನು 96 ರನ್ಗಳ ಗುರಿ ಪಡೆದ ಭಾರತ 17.2 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ತಲುಪಿತು. ಸುಲಭದ ಗುರಿ ಬೆನ್ನತ್ತಿದ್ದ ಭಾರತ ತಂಡ 4 ರನ್ಗಳಾಗುವಷ್ಟರಲ್ಲಿ ಧವನ್(1) ವಿಕೆಟ್ ಕಳೆದುಕೊಂಡಿತು. ನಂತರ ರೋಹಿತ್ ಹಾಗೂ ಕೊಹ್ಲಿ ಜೊತೆಗೂಡಿ 28 ರನ್ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ ದಾಳಿಗಿಳಿದ ನರೈನ್ 24 ರನ್ಗಳಿಸಿದ್ದ ರೋಹಿತ್ ಹಾಗೂ ಶೂನ್ಯಕ್ಕೆ ಪಂತ್ರನ್ನು ಸತತ ಎರಡು ಎಸೆತಗಳಲ್ಲಿ ಪೆವಿಲಿಯನ್ಗಟ್ಟಿದರು.
ನಂತರ ಕೊಹ್ಲಿ ಜೊತೆಗೂಡಿದ ಮನೀಷ್ ಪಾಂಡೆ(19) 4ನೇ ವಿಕೆಟ್ ಜೊತೆಯಾಟದಲ್ಲಿ 32 ರನ್ ಸೇರಿಸಿದರು. ಉತ್ತಮವಾಗಿ ಆಡುತ್ತಿದ್ದ ಪಾಂಡೆ ಕೀಮೋ ಪಾಲ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ನಂತರದ ಓವರ್ನಲ್ಲಿ 29 ಎಸೆತಗಳಲ್ಲಿ 19 ರನ್ಗಳಿಸಿದ್ದ ಕೊಹ್ಲಿ ಸೆಲ್ಯೂಟ್ ಸ್ಟಾರ್ ಕಾಟ್ರೆಲ್ಗೆ ವಿಕೆಟ್ ಒಪ್ಪಿಸಿದರು. ಕೃನಾಲ್ ಪಾಂಡ್ಯ 12 ರನ್ಗಳಿಸಿದ ಕೀಮೋ ಪಾಲ್ ಬೌಲಿಂಗ್ನಲ್ಲಿ ಬೌಲ್ಡ್ ಆದರು.
ಕೊನೆಯಲ್ಲಿ ಜಡೇಜಾ ಔಟಾಗದೆ 10 ಹಾಗೂ ವಾಷಿಂಗ್ಟನ್ ಸುಂದರ್ ಔಟಾಗದೆ 8 ರನ್ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು,. ಸುಂದರ್ ಕೀಮೋ ಪಾಲ್ ಎಸೆತವನ್ನು ಸಿಕ್ಸರ್ಗಟ್ಟಿ ಭಾರತಕ್ಕೆ ಸರಣಿಯನ್ನು1-0ಯಲ್ಲಿ ಮುನ್ನಡೆ ದೊರಕಿಸಿಕೊಟ್ಟರು. ವಿಂಡೀಸ್ ಪರ ಕಡಿಮೆ ಸ್ಕೋರ್ ಹೊರತಾಗಿಯೂ ಶೆಲ್ಡಾನ್ ಕಾಟ್ರೆಲ್ 2, ಸುನಿಲ್ ನರೈನ್ 14 ರನ್ ನೀಡಿ 2, ಕೀಮೋ ಪಾಲ್ 2 ವಿಕೆಟ್ ಪಡೆದರು.
17 ರನ್ ನೀಡಿ 3 ವಿಕೆಟ್ ಪಡೆದ ನವ್ದೀಪ್ ಸೈನಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.