ದುಬೈ : ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಭಾರತದಲ್ಲೇ ಆಯೋಜಿಸುವ ಆಲೋಚನೆಯಲ್ಲಿರುವ ಬಿಸಿಸಿಐ ದೇಶದಲ್ಲಿ ಕ್ರಿಕೆಟ್ ಲಾಕ್ಡೌನ್ಗೆ ಅಂತ್ಯವಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಕೋವಿಡ್-19 ಭೀತಿಯಿಂದ ಭಾರತದಲ್ಲಿ ನಡೆಯಬೇಕಿದ್ದ ಐಪಿಎಲ್ ಈಗಾಗಲೇ ಯುಎಇಗೆ ವರ್ಗಾವಣೆಗೊಂಡಿದೆ. ಟಿ20 ಲೀಗ್ ಮುಗಿಯುತ್ತಿದ್ದಂತೆ ಕೊಹ್ಲಿ ಬಳಗ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ನಂತರ ಭಾರತಕ್ಕೆ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ.
ಆದರೆ, ಇದು ಆ ವೇಳೆಗೆ ದೇಶದಲ್ಲಿನ ಕೋವಿಡ್ ಸ್ಥಿತಿಯ ಆಧಾರದ ಮೇಲೆ ನಿಂತಿದೆ ಎಂದು ತಿಳಿದು ಬಂದಿತ್ತು. ಪ್ರಸ್ತುತ ಬೆಳವಣಿಗೆ ಪ್ರಕಾರ ಭಾರತದಲ್ಲೇ ಟೂರ್ನಿ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.
-
I along with Vice Chairman of Emirates Cricket Board, Mr Khalid Al Zarooni signed an MoU & Hosting agreement between @BCCI and @EmiratesCricket to boost the cricketing ties between our countries.
— Jay Shah (@JayShah) September 19, 2020 " class="align-text-top noRightClick twitterSection" data="
BCCI President, @SGanguly99 & Treasurer, @ThakurArunS were present on the occasion. pic.twitter.com/snYq2AUELZ
">I along with Vice Chairman of Emirates Cricket Board, Mr Khalid Al Zarooni signed an MoU & Hosting agreement between @BCCI and @EmiratesCricket to boost the cricketing ties between our countries.
— Jay Shah (@JayShah) September 19, 2020
BCCI President, @SGanguly99 & Treasurer, @ThakurArunS were present on the occasion. pic.twitter.com/snYq2AUELZI along with Vice Chairman of Emirates Cricket Board, Mr Khalid Al Zarooni signed an MoU & Hosting agreement between @BCCI and @EmiratesCricket to boost the cricketing ties between our countries.
— Jay Shah (@JayShah) September 19, 2020
BCCI President, @SGanguly99 & Treasurer, @ThakurArunS were present on the occasion. pic.twitter.com/snYq2AUELZ
ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡಿದ ಬಿಸಿಸಿಐ ಅಧಿಕಾರಿಯೊಬ್ಬರು, "ಭಾರತ ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರನ್ನು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ತಮ್ಮದೇ ಕ್ರೀಡಾಂಗಣಗಳಲ್ಲಿ ನೋಡಲು ನಿರೀಕ್ಷಿಸಬಹುದು" ಎಂದು ಹೇಳಿದ್ದಾರೆ.
ಪ್ರಸ್ತುತ ಪರಿಸ್ಥಿತಿ ಐಪಿಎಲ್ನ ಭಾರತ ಸರ್ಕಾರ ಅನುಮತಿ ನೀಡಿದ ಮೇಲೆ ಯುಎಇನಲ್ಲಿ ಆಯೋಜನೆ ಮಾಡುವಂತಾಯಿತು. ನಾವು ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವುದಕ್ಕಾಗಿ ನಿಯಮಗಳು ಮತ್ತು ವಿವಿಧ ಸಲಹೆಗಳನ್ನು ಪಾಲಿಸುತ್ತಿದ್ದೇವೆ.
ಐಪಿಎಲ್ ಸಂದರ್ಭದಲ್ಲಿ ಕಠಿಣ ನಿರ್ಭಂಧಗಳಿದ್ದವು. ಆದರೆ, ಇದೀಗ ನಿರ್ಬಂಧಗಳಲ್ಲಿ ಸಡಿಲವಾಗಿರುವುದರಿಂದ ನಾವು ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಭಾರತದಲ್ಲೇ ನಡೆಸುವ ಭರವಸೆಯನ್ನು ಹೊಂದಿದ್ದೇವೆ ಮತ್ತು ಜೈವಿಕ ಸುರಕ್ಷಿತ ವಲಯಕ್ಕಾಗಿ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದ್ದೇವೆ.
ಆದ್ದರಿಂದ ನಮ್ಮ ದೇಶದಲ್ಲಿ ಕ್ರಿಕೆಟ್ ಚುಟುವಟಿಕೆಗಳ ಪುನಾರಂಭ ಎದುರು ನೋಡಬಹುದಾಗಿದೆ. ಆದರೆ, ಪ್ರೇಕ್ಷಕರು ಲೈವ್ ನೋಡುವುದಕ್ಕೆ ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಬಹುದು ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.