ETV Bharat / sports

ಫ್ಲಾಟ್​ ಪಿಚ್​ನಲ್ಲೂ ಭಾರತೀಯ ಬೌಲರ್​ಗಳ ದಾಳಿ ತುಂಬಾ ಕಠಿಣವಾಗಿತ್ತು: ವೇಡ್​

ಪಿಚ್​ ಕಠಿತೆಯಿಂದ ಕೂಡಿರಲಿಲ್ಲ, ಬದಲಾಗಿ ಫ್ಲಾಟ್​ ಆಗಿತ್ತು. ಆದರೆ ನನ್ನನ್ನು ಸೇರಿದಂತೆ ಬ್ಯಾಟ್ಸ್​ಮನ್​ಗಳು ತುಂಬಾ ನಿರಾಶೆ ಮೂಡಿಸಿದರು. ಅದರಲ್ಲೂ ಸ್ಪಿನ್ನರ್​ಗಳಿಗೆ ವಿಕೆಟ್ ಒಪ್ಪಿಸುವುದು ಕೆಲವೊಮ್ಮೆ ನಿರಾಶೆ ತರುತ್ತದೆ. ಆದರೆ ಇದೆಲ್ಲಾ ಕ್ರಿಕೆಟ್​ನಲ್ಲಿ ನಡೆಯುತ್ತದೆ ಎಂದು ವೇಡ್​ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

author img

By

Published : Dec 28, 2020, 9:12 PM IST

ಬಾಕ್ಸಿಂಗ್ ಡೇ ಟೆಸ್ಟ್​
ಮ್ಯಾಥ್ಯೂ ವೇಡ್​

ಮೆಲ್ಬೋರ್ನ್​: ಭಾರತೀಯ ಬೌಲರ್​ಗಳು ತುಂಬಾ ನೇರವಾಗಿ ಬೌಲಿಂಗ್​ ಮಾಡಿದ್ದರಿಂದ ರನ್ ​ಗಳಿಸಲು ತುಂಬಾ ಕಷ್ಟವಾಯಿತು ಎಂದು ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಮ್ಯಾಥ್ಯೂ ವೇಡ್,​ ಟೀಮ್ ಇಂಡಿಯಾ ಬೌಲಿಂಗ್ ದಾಳಿಯನ್ನು ಶ್ಲಾಘಿಸಿದ್ದಾರೆ.

ಅವರು ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದರು, ಅವರು ವಿಕೆಟ್​ಗೆ ನೇರವಾಗಿ ಬೌಲಿಂಗ್ ಮಾಡಿದ್ದರಿಂದ ನಮಗೆ ರನ್​​​ ಗಳಿಸಲು ವೈಯಕ್ತಿಕವಾಗಿ ಮತ್ತು ಇತರ ಬ್ಯಾಟ್ಸ್​ಮನ್​ಗಳಿಗೂ ಕಷ್ಟವಾಯಿತು. ಆ ಸಮಯದಲ್ಲಿ ಅವರು ನಮಗೆ ತುಂಬಾ ಸವಾಲಾಗುತ್ತಿದ್ದರು" ಎಂದು 137 ಎಸೆತಗಳಲ್ಲಿ 40 ರನ್​ ಗಳಿಸಿ ತಂಡವನ್ನು 100ರ ಗಡಿ ದಾಟಿಸಿದ ವೇಡ್​ ತಿಳಿಸಿದ್ದಾರೆ.

ಮ್ಯಾಥ್ಯೂ ವೇಡ್​

ಅಲ್ಲದೆ ತುಂಬಾ ಆಳವಾಗಿ ಬ್ಯಾಟಿಂಗ್ ಮಾಡಲು ವಿಫಲವಾದ ತಮ್ಮ ತಂಡದ ಬ್ಯಾಟ್ಸ್​ಮನ್​ಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. 'ನಾವು ಬೌಲರ್​ಗಳನ್ನು ದಣಿಸುವಷ್ಟು ಆಳವಾಗಿ ಬ್ಯಾಟಿಂಗ್ ಮಾಡಲಿಲ್ಲ. ನಾವು ಆಪಾದನೆಯನ್ನು ತೆಗೆದುಕೊಳ್ಳಬೇಕು. ಏಕೆಂದರೆ ಅವರು ನಮ್ಮನ್ನು ಆರಂಭದಿಂದಲೇ ಒತ್ತಡದಲ್ಲಿದ್ದದ್ದನ್ನು ಗುರುತಿಸಿಕೊಂಡಿದ್ದರು ಎಂದು ವೇಡ್​ ಹೇಳಿದ್ದಾರೆ.

ಪಿಚ್​ ಕಠಿತೆಯಿಂದ ಕೂಡಿರಲಿಲ್ಲ. ಬದಲಾಗಿ ಫ್ಲಾಟ್​ ಆಗಿತ್ತು. ಆದರೆ ನನ್ನನ್ನು ಸೇರಿದಂತೆ ಬ್ಯಾಟ್ಸ್​ಮನ್​ಗಳು ತುಂಬಾ ನಿರಾಶೆ ಮೂಡಿಸಿದರು. ಅದರಲ್ಲೂ ಸ್ಪಿನ್ನರ್​ಗಳಿಗೆ ವಿಕೆಟ್ ಒಪ್ಪಿಸುವುದು ಕೆಲವೊಮ್ಮೆ ನಿರಾಶೆ ತರುತ್ತದೆ. ಆದರೆ ಇದೆಲ್ಲಾ ಕ್ರಿಕೆಟ್​ನಲ್ಲಿ ನಡೆಯುತ್ತದೆ ಎಂದು ವೇಡ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.