ಬ್ರಿಸ್ಬೇನ್: ಭಾರತ -ಪಾಕಿಸ್ತಾನ ಎಲ್ಲ ಕ್ಷೇತ್ರದಲ್ಲೂ ಬದ್ಧ ಎದುರಾಳಿಗಳು. ಪಾಕಿಸ್ತಾನವು ಭಾರತದ ವಿರುದ್ಧ ಸದಾ ಹಗೆಯ ಹೊಗೆಯಾಡುತ್ತಲೇ ಇರುತ್ತದೆ. ಆದರೆ ಇದೇ ಪಾಕಿಸ್ತಾನ ಕ್ರಿಕೆಟ್ ತಂಡದ ಕೆಲ ಆಟಗಾರರು ಭಾರತೀಯನನ್ನು ನಡೆಸಿಕೊಂಡ ರೀತಿ ಸದ್ಯ ಭಾರಿ ಪ್ರಶಂಸೆಗೆ ಕಾರಣವಾಗುವಂತೆ ಮಾಡಿದೆ.
ಶಹೀನ್ ಶಾ ಅಫ್ರಿದಿ, ಯಾಸಿರ್ ಶಾ ಹಾಗೂ ನಸೀಮ್ ಶಾ ಸೇರಿದಂತೆ ಒಟ್ಟಾರೆ ಐವರು ಪಾಕ್ ಕ್ರಿಕೆಟಿಗರು ಬ್ರಿಸ್ಬೇನ್ನಲ್ಲಿ ತಾವು ತಂಗಿದ್ದ ಹೋಟೆಲ್ನಿಂದ ರಾತ್ರಿ ಊಟಕ್ಕೆ ಭಾರತೀಯ ರೆಸ್ಟೋರೆಂಟ್ಗೆ ಕ್ಯಾಬ್ ಬುಕ್ ಮಾಡಿದ್ದಾರೆ.
ಪಾಕಿಸ್ತಾನಕ್ಕೆ ಇನ್ನಿಂಗ್ಸ್ ಸೋಲಿನ ಮುಖಭಂಗ..!
ಭಾರತೀಯ ಕ್ಯಾಬ್ ಚಾಲಕ ಈ ಎಲ್ಲ ಆಟಗಾರರನ್ನು ನಿಗದಿತ ಜಾಗಕ್ಕೆ ಕರೆದುಕೊಂಡು ಹೋಗಿದ್ದಾನೆ. ರೆಸ್ಟೋರೆಂಟ್ ಬಳಿ ಇಳಿಸಿದ ಬಳಿಕ ಆಟಗಾರರಿಂದ ದುಡ್ಡನ್ನು ಗೌರವಪೂರ್ವಕವಾಗಿ ತಿರಸ್ಕರಿಸಿದ್ದಾನೆ. ಡ್ರೈವರ್ ದುಡ್ಡನ್ನು ತೆಗೆದುಕೊಳ್ಳದ ಕಾರಣ ಪಾಕ್ ಅಟಗಾರರು ಕ್ಯಾಬ್ ಚಾಲಕನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿ ಜೊತೆಯಲ್ಲೇ ಊಟ ಮಾಡಿಸಿದ್ದಾರೆ. ಪಾಕ್ ಕ್ರಿಕೆಟಿಗರ ಈ ನಡೆ ಭಾರತೀಯ ಕ್ಯಾಬ್ ಚಾಲಕನಿಗೆ ಮಾತ್ರವಲ್ಲದೇ ಉಭಯ ದೇಶದ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದೆ.
-
🚕🏏️🚖 The heartwearming story of the Indian taxi driver and five @TheRealPCB players.❤️
— ABC Grandstand (@abcgrandstand) November 24, 2019 " class="align-text-top noRightClick twitterSection" data="
🎥📺@AlisonMitchell tells Mitchell Johnson about it on Commentator Cam. 🔊🎙️ #AUSvPAK
Listen live 📻📱 ABC Radio / Grandstand digital / ABC Listen app — https://t.co/dhH8gmo5FZ pic.twitter.com/qdwsK83F7X
">🚕🏏️🚖 The heartwearming story of the Indian taxi driver and five @TheRealPCB players.❤️
— ABC Grandstand (@abcgrandstand) November 24, 2019
🎥📺@AlisonMitchell tells Mitchell Johnson about it on Commentator Cam. 🔊🎙️ #AUSvPAK
Listen live 📻📱 ABC Radio / Grandstand digital / ABC Listen app — https://t.co/dhH8gmo5FZ pic.twitter.com/qdwsK83F7X🚕🏏️🚖 The heartwearming story of the Indian taxi driver and five @TheRealPCB players.❤️
— ABC Grandstand (@abcgrandstand) November 24, 2019
🎥📺@AlisonMitchell tells Mitchell Johnson about it on Commentator Cam. 🔊🎙️ #AUSvPAK
Listen live 📻📱 ABC Radio / Grandstand digital / ABC Listen app — https://t.co/dhH8gmo5FZ pic.twitter.com/qdwsK83F7X
ಸದ್ಯ ಈ ಮಾಹಿತಿಯನ್ನು ಎಬಿಸಿ ರೇಡಿಯೋ ಜಾಕಿ ಅಲಿಸನ್ ಮಿಷೆಲ್ ತಮ್ಮ ಕಾರ್ಯಕ್ರಮದಲ್ಲಿ ಆಸೀಸ್ ಮಾಜಿ ವೇಗಿ ಮಿಷೆಲ್ ಜಾನ್ಸನ್ ಜೊತೆ ಹಂಚಿಕೊಂಡಿದ್ದಾರೆ.