ETV Bharat / sports

ಅವರು 73 ಸಾವಿರ ಮರ ಬೆಳೆಸಿದ್ದಾರೆ... ನಾವು ಒಂದಾದರು ಬೆಳೆಸೋಣ: ಸಾಲುಮರದ ತಿಮ್ಮಕ್ಕ ಬಗ್ಗೆ ಭಜ್ಜಿ ಗುಣಗಾನ - ಸಾಲುಮರದ ತಿಮ್ಮಕ್ಕರ ಬಗ್ಗೆ ಹರ್ಭಜನ್​ ಸಿಂಗ್​ಮೆಚ್ಚುಗೆ

ಓದು ಬರಹವಿಲ್ಲ, ಮಕ್ಕಳಿಲ್ಲ. ಆದರೆ ಸಮಾಜಕ್ಕೆ ಒಳಿತು ಮಾಡುವ ದೃಷ್ಟಿಯಿಂದ ಸಾವಿರಾರು ಮರಗಳನ್ನು ನೆಟ್ಟು ಪೋಷಣೆ ಮಾಡುತ್ತಿರುವ ಕರ್ನಾಟಕದ ಹೆಮ್ಮೆಯ ತಿಮ್ಮಕ್ಕ ‘ಸಾಲು ಮರದ ತಿಮ್ಮಕ್ಕ‘ಎಂದೇ ಖ್ಯಾತಿ ಪಡೆದಿದ್ದಾರೆ. ಅವರ ಕಾರ್ಯವನ್ನು ಕ್ರಿಕೆಟರ್​ ಹರ್ಭಜನ್​ ಸಿಂಗ್​ ಗುಣಗಾನ ಮಾಡಿದ್ದಾರೆ.

ಹರ್ಭಜನ್​ ಸಿಂಗ್​
ಹರ್ಭಜನ್​ ಸಿಂಗ್​
author img

By

Published : Jul 19, 2020, 12:50 PM IST

ನವದೆಹಲಿ: ಭಾರತ ತಂಡದ ಹಿರಿಯ ಸ್ಪಿನ್ನರ್​ ಹರ್ಭಜನ್​ ಸಿಂಗ್​ ಕನ್ನಡತಿ ಸಾಲುಮರದ ತಿಮ್ಮಕ್ಕ ಅವರ ಸಾಧನೆಯನ್ನು ತಮ್ಮ ಟ್ವಿಟ್ಟರ್​ನಲ್ಲಿ ಪೋಸ್ಟ್​ ಮಾಡುವ ಮೂಲಕ ಯುವ ಪೀಳಿಗೆಗೆ ಸಂದೇಶವೊಂದನ್ನು ರವಾನೆ ಮಾಡಿದ್ದಾರೆ.

ಓದು ಬರಹವಿಲ್ಲ, ಮಕ್ಕಳಿಲ್ಲ ಆದರೆ ಸಮಾಜಕ್ಕೆ ಒಳಿತು ಮಾಡುವ ದೃಷ್ಟಿಯಿಂದ ಸಾವಿರಾರು ಮರಗಳನ್ನು ನೆಟ್ಟು ಪೋಷಣೆ ಮಾಡುತ್ತಿರುವ ಕರ್ನಾಟಕದ ಹೆಮ್ಮೆಯ ತಿಮ್ಮಕ್ಕ ‘ಸಾಲು ಮರದ ತಿಮ್ಮಕ್ಕ‘ಎಂದೇ ಖ್ಯಾತಿ ಪಡೆದಿದ್ದಾರೆ.

  • She planted more than 73000 tress, but very few know about her, at least Ek tree ham sab ko lagana chahiye 🙏 thank u grandmaa 🙏 pic.twitter.com/6ssDSfYzHO

    — Harbhajan Turbanator (@harbhajan_singh) July 18, 2020 " class="align-text-top noRightClick twitterSection" data=" ">

ಸಾಲು ಮರದ ತಿಮ್ಮಕ್ಕ ಅವರ ಕಾರ್ಯಕ್ಕೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಸೇರಿದಂತೆ ಹಲವಾರು ಪ್ರಶಸ್ತಿಗಳು ಬಂದು ಸೇರಿವೆ. ಇದೀಗ ಇವರ ಬಗ್ಗೆ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ವಿಶೇಷ ಟ್ವೀಟ್ ಮಾಡಿದ್ದು ಯುವ ಪೀಳಿಗೆಗೆ ತಾವೂ ಅವರಷ್ಟು ಸಾಧನೆ ಮಾಡದಿದ್ದರು ಪರವಾಗಿಲ್ಲ ಒಂದೊಂದು ಮರ ಬೆಳೆಸೋಣ ಎಂದು ಬರೆದುಕೊಂಡಿದ್ದಾರೆ.

'ಇವರು 73 ಸಾವಿರಕ್ಕೂ ಹೆಚ್ಚು ಮರಗಳನ್ನು ನೆಟ್ಟಿದ್ದಾರೆ. ಆದರೆ ಕೆಲವೇ ಜನರಿಗೆ ಮಾತ್ರ ಇವರ ಬಗ್ಗೆ ಗೊತ್ತಿದೆ. ನಾವೆಲ್ಲರೂ ಕಡಿಮೆ ಎಂದರೂ ಒಂದು ಮರವನ್ನು ಬೆಳೆಸಬೇಕಿದೆ. ಅಜ್ಜಿ ನಿಮಗೆ ಅಭಿನಂದನೆಗಳು' ಎಂದು ಹರ್ಭಜನ್ ಸಿಂಗ್ ಸಾಲು ಮರದ ತಿಮ್ಮಕ್ಕರ ಫೋಟೋದ ಜೊತೆಗೆ ಬರೆದು ಪೋಸ್ಟ್​ ಮಾಡಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು ಸಾಲು ಮರದ ತಿಮ್ಮಕ್ಕ ಕೇವಲ ಒಂದು ರಾಜ್ಯಕ್ಕೆ ಹೆಮ್ಮೆ ತಂದಿಲ್ಲ. ಅವರ ಸಾಧನೆಯನ್ನು ಇಡೀ ವಿಶ್ವವೇ ಗೌರವಿಸಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.