ETV Bharat / sports

ವಿಶ್ವಕಪ್​ ವೇಳೆ ನಿಯಮ ಮೀರಿದ ಟೀಂ ಇಂಡಿಯಾ.... ಹಿರಿಯ ಪ್ಲೇಯರ್ಸ್​ ವಿರುದ್ಧ ಬಿಸಿಸಿಐ ಕ್ರಮ!? - ಬಿಸಿಸಿಐ

ಟೀಂ ಇಂಡಿಯಾದ ಕೆಲ ಹಿರಿಯ ಆಟಗಾರರು ವಿಶ್ವಕಪ್​ ವೇಳೆ ತಮ್ಮೊಂದಿಗೆ ಪತ್ನಿಯರು ಹಾಗೂ ಗೆಳತಿಯರನ್ನು ಇಟ್ಟುಕೊಂಡಿರುವ ವಿಚಾರ ಬೆಳಕಿಗೆ ಬಂದಿದ್ದು, ಇದರ ವಿರುದ್ಧ ಬಿಸಿಸಿಐ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಕೊಹ್ಲಿ,ರೋಹಿತ್​
author img

By

Published : Jul 20, 2019, 11:36 PM IST

ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್​ ವೇಳೆ ಟೀಂ ಇಂಡಿಯಾದ ಕೆಲ ಹಿರಿಯ ಪ್ಲೇಯರ್ಸ್​ ಬಿಸಿಸಿಐ ಹಾಕಿದ್ದ ಕೆಲ ಷರತ್ತು ಮುರಿದಿದ್ದು, ಇದೀಗ ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಕಂಡು ಬರುತ್ತಿದೆ.

ವಿಶ್ವಕಪ್​ಗೂ ಮುನ್ನ ಕೇವಲ 15 ದಿನಗಳ ಕಾಲ ತಮ್ಮೊಂದಿಗೆ ಗೆಳತಿಯರು ಅಥವಾ ಪತ್ನಿಯರನ್ನಿಟ್ಟುಕೊಳ್ಳಬಹುದು ಎಂದು ಬಿಸಿಸಿಐ ಹೇಳಿತ್ತು. ಆದರೆ ಕ್ಯಾಪ್ಟನ್​ ಕೊಹ್ಲಿ ಮನವಿ ಸಲ್ಲಿಕೆ ಮಾಡಿದ್ದರಿಂದ ಅದನ್ನ ಆರಂಭದ 21 ದಿನಗಳವರೆಗೆ ಇರಲು ಬಿಸಿಸಿಐ ಅವಕಾಶ ಕಲ್ಪಿಸಿತ್ತು. ಆದರೆ ಈ ನಿಯಮವನ್ನ ಕೆಲ ಹಿರಿಯ ಆಟಗಾರರು ಮುರಿದಿದ್ದಾರೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ, ಕೆಲ ಪ್ಲೇಯರ್ಸ್​ ವಿಶ್ವಕಪ್​ ಮುಕ್ತಾಯವಾಗುವರೆಗೂ ತಮ್ಮೊಂದಿಗೆ ಪತ್ನಿ ಹಾಗೂ ಗೆಳತಿಯರನ್ನ ಇಟ್ಟುಕೊಂಡಿದ್ದು ಕಂಡು ಬಂದಿದ್ದು, ಇದೀಗ ಅವರ ವಿರುದ್ಧ ಕ್ರಮ ಕೈಗೊಳ್ಳಲು ಬಿಸಿಸಿಐ ಮುಂದಾಗಿದೆ.

ವಿಶ್ವಕಪ್​ ಸೆಮಿಫೈನಲ್​​ನಲ್ಲಿ ಭಾರತ ಸೋಲು ಕಾಣುತ್ತಿದ್ದಂತೆ ರೋಹಿತ್​ ಶರ್ಮಾ ತಮ್ಮ ಪತ್ನಿ-ಮಗಳೊಂದಿಗೆ ಹಾಗೂ ವಿರಾಟ್​ ತಮ್ಮ ಪತ್ನಿ ಜತೆ ಭಾರತಕ್ಕೆ ವಾಪಸ್​ ಆಗಿದ್ದರು. ಇದರ ಬಗ್ಗೆ ಬಿಸಿಸಿಐ, ಆಡಳಿತ ಮಂಡಳಿ ಹಾಗೂ ಕೋಚ್​ಗೆ ಯಾವುದೇ ಮಾಹಿತಿ ಸಹ ನೀಡಿರಲಿಲ್ಲ ಎಂಬುದು ಇದೀಗ ತಿಳಿದು ಬಂದಿದೆ. ಇದರಿಂದ ಆಡಳಿತ ಮಂಡಳಿ ಗರಂ ಆಗಿದ್ದು, ಸೋಲಿನ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಭಾರಿ ಟೀಕೆಗಳನ್ನ ಎದುರಿಸಿತ್ತು. ಇದೀಗ ಬಿಸಿಸಿಐ ಕ್ರಮ ಕೈಗೊಳ್ಳುವ ಮಾತನಾಡಿರುವುದು ಹಿರಿಯ ಆಟಗಾರರಿಗೆ ಬಿಸಿ ಮುಟ್ಟಿಸುವ ಸಾಧ್ಯತೆ ಇದೆ.

Intro:Body:

ವಿಶ್ವಕಪ್​ ವೇಳೆ ಷರತ್ತು ಮೀರಿದ ಟೀಂ ಇಂಡಿಯಾ.... ಹಿರಿಯ ಪ್ಲೇಯರ್ಸ್​ ವಿರುದ್ಧ ಬಿಸಿಸಿಐ ಕ್ರಮ!? 

ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್​ ವೇಳೆ ಟೀಂ ಇಂಡಿಯಾದ ಕೆಲ ಹಿರಿಯ ಪ್ಲೇಯರ್ಸ್​ ಬಿಸಿಸಿಐ ಹಾಕಿದ್ದ ಕೆಲ ಷರತ್ತು ಮುರಿದಿದ್ದು, ಇದೀಗ ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಕಂಡು ಬರುತ್ತಿದೆ. 

ವಿಶ್ವಕಪ್​ಗೂ ಮುನ್ನ ಕೇವಲ 15 ದಿನಗಳ ಕಾಲ ತಮ್ಮೊಂದಿಗೆ ಗೆಳತಿಯರು ಅಥವಾ ಪತ್ನಿಯರನ್ನಿಟ್ಟುಕೊಳ್ಳಬಹುದು ಎಂದು ಬಿಸಿಸಿಐ ಹೇಳಿತ್ತು. ಆದರೆ ಕ್ಯಾಪ್ಟನ್​ ಕೊಹ್ಲಿ ಮನವಿ ಸಲ್ಲಿಕೆ ಮಾಡಿದ್ದರಿಂದ ಅದನ್ನ ಆರಂಭದ 21 ದಿನಗಳವರೆಗೆ ಇರಲು ಬಿಸಿಸಿಐ ಅವಕಾಶ ಕಲ್ಪಿಸಿತ್ತು. ಆದರೆ ಈ ನಿಯಮವನ್ನ ಕೆಲ ಹಿರಿಯ ಆಟಗಾರರು ಮುರಿದಿದ್ದಾರೆ. 

ಲಭ್ಯವಾಗಿರುವ ಮಾಹಿತಿ ಪ್ರಕಾರ, ಕೆಲ ಪ್ಲೇಯರ್ಸ್​ ವಿಶ್ವಕಪ್​ ಮುಕ್ತಾಯವಾಗುವರೆಗೂ ತಮ್ಮೊಂದಿಗೆ ಪತ್ನಿ ಹಾಗೂ ಗೆಳತಿಯರನ್ನ ಇಟ್ಟುಕೊಂಡಿದ್ದು ಕಂಡು ಬಂದಿದ್ದು, ಇದೀಗ ಅವರ ವಿರುದ್ಧ ಕ್ರಮ ಕೈಗೊಳ್ಳಲು ಬಿಸಿಸಿಐ ಮುಂದಾಗಿದೆ. 

ವಿಶ್ವಕಪ್​ ಸೆಮಿಫೈನಲ್​​ನಲ್ಲಿ ಭಾರತ ಸೋಲು ಕಾಣುತ್ತಿದ್ದಂತೆ ರೋಹಿತ್​ ಶರ್ಮಾ ತಮ್ಮ ಪತ್ನಿ-ಮಗಳೊಂದಿಗೆ ಹಾಗೂ ವಿರಾಟ್​ ತಮ್ಮ ಪತ್ನಿ ಜತೆ ಭಾರತಕ್ಕೆ ವಾಪಸ್​ ಆಗಿದ್ದರು. ಇದರ ಬಗ್ಗೆ ಬಿಸಿಸಿಐ, ಆಡಳಿತ ಮಂಡಳಿ ಹಾಗೂ ಕೋಚ್​ಗೆ ಯಾವುದೇ ಮಾಹಿತಿ ಸಹ ನೀಡಿರಲಿಲ್ಲ ಎಂಬುದು ಇದೀಗ ತಿಳಿದು ಬಂದಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.