ETV Bharat / sports

ಭಾರತ -ವಿಂಡೀಸ್​ ತಂಡದ ಈ ಇಬ್ಬರೂ ಸಿಕ್ಸರ್​ ಸರದಾರರ ಜರ್ಸಿ ನಂಬರ್ 45! - ಜರ್ಸಿ ನಂಬರ್​ 45

ಭಾರತದ ಆರಂಭಿಕ ಬ್ಯಾಟ್ಸ್​ಮನ್​ ರೋಹಿತ್​ ಶರ್ಮಾ ಹಾಗೂ ವಿಂಡೀಸ್​ ಸ್ಫೋಟಕ ಬ್ಯಾಟ್ಸ್​ಮನ್​ ಜರ್ಸಿ ನಂಬರ್​ 45ರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

India-west indies
author img

By

Published : Aug 8, 2019, 5:49 PM IST

ಗಯಾನ: ಭಾರತ ತಂಡದ ಸ್ಫೋಟಕ ದಾಂಡಿಗ ರೋಹಿತ್​ ಶರ್ಮಾ ಇಂದು ತಮ್ಮ ಇನ್ಸ್​ಸ್ಟಾಗ್ರಾಂ​ನಲ್ಲಿ ಕ್ರಿಸ್​ ಗೇಲ್​ ಜೊತೆಗಿರುವ ಫೋಟೋ ಶೇರ್​ ಮಾಡಿಕೊಂಡಿದ್ದು, ಸಾಮಾಜಿಕ ಜಾಲಾತಾಣದಲ್ಲಿ ವೈರಲ್​ ಆಗುತ್ತಿದೆ.

ಹೌದು, ಹಿಟ್​ಮ್ಯಾನ್​ ಎರಡನೇ ಟಿ-20 ವೇಳೆ ಕ್ರಿಸ್​ಗೇಲ್​ ದಾಖಲೆ ಬ್ರೇಕ್​ ಮಾಡಿ ಟಿ-20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಸಿಡಿಸಿದ ದಾಖಲೆಗೆ ಪಾತ್ರರಾಗಿದ್ದರು. ಇದೀಗ ವಿದಾಯದಂಚಿನಲ್ಲಿರುವ ಕ್ರಿಸ್​ ಗೇಲ್​ ಜೊತೆಯಿರುವ ಫೋಟೋ ಶೇರ್​ ಮಾಡಿಕೊಂಡಿದ್ದು, ಅದರಲ್ಲಿ ಇಬ್ಬರು ಸ್ಫೋಟಕ ಬ್ಯಾಟ್ಸ್​ಮನ್​ಗಳು 45 ನಂಬರ್​ ಇರುವ ಜರ್ಸಿ ತೊಟ್ಟಿರುವುದು ವಿಶೇಷ.

India-west indies
ರೋಹಿತ್​ ಶರ್ಮಾ- ಕ್ರಿಸ್​ ಗೇಲ್​

ಕ್ರಿಸ್​ ಗೇಲ್​ ಬಹುತೇಕ ಟಿ-20 ಲೀಗ್​ಗಳಲ್ಲಿ 333 ನಂಬರ್​ ಇರುವ ಜರ್ಸಿಯನ್ನು ತೊಡುತ್ತಾರೆ. ಆದರೆ, ತವರು ದೇಶವನ್ನು ಪ್ರತಿನಿಧಿಸುವ ವೇಳೆ ಮಾತ್ರ 45 ನಂಬರ್​ ಇರುವ ಜರ್ಸಿ ತೊಡುತ್ತಾರೆ. ಆದ್ದರಿಂದ ಇಂದಿನ ಪಂದ್ಯದಲ್ಲಿ ಈ ಇಬ್ಬರು ಸ್ಪೋಟಕ ದಾಂಡಿಗರು ಒಂದೇ ನಂಬರ್​ ಇರುವ ಜರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಇದೇ ಫೋಟೋವನ್ನು ವೆಸ್ಟ್​ ಇಂಡೀಸ್​ ಕ್ರಿಕೆಟ್​ ಮಂಡಳಿಯೂ ಶೇರ್​ ಮಾಡಿಕೊಂಡಿದ್ದು, ಈ ಇಬ್ಬರಲ್ಲಿ ನಿಮ್ಮ ನೆಚ್ಚಿನ 45 ಯಾರು ಎಂದು ಟ್ಯಾಗ್​ಲೈನ್​ ಹಾಕಿ ಪೋಸ್ಟ್​ ಮಾಡಿಕೊಂಡಿದೆ.

ರೋಹಿತ್​ ಹಾಗೂ ಗೇಲ್​ ಸ್ಫೋಟಕ ಆಟಕ್ಕೆ ಹೆಸರುವಾಸಿಯಾಗಿದ್ದು, ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ ಇಬ್ಬರು ಧ್ವಿಶತಕ ಸಾಧನೆ ಮಾಡಿದ್ದಾರೆ. ಇನ್ನು ಸಿಕ್ಸರ್​ಗಳ ದಾಖಲೆಯಲ್ಲೂ ಇಬ್ಬರೂ ಟಾಪ್​ 5ರಲ್ಲಿದ್ದಾರೆ. 529 ಸಿಕ್ಸರ್​ ಸಿಡಿಸಿರುವ ಗೇಲ್​ ಮೊದಲ ಸ್ಥಾನದಲ್ಲಿದ್ದರೆ, ರೋಹಿತ್​ ಶರ್ಮಾ 378 ಸಿಕ್ಸರ್​ ಸಿಡಿಸಿ 4 ನೇ ಸ್ಥಾನದಲ್ಲಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.