ETV Bharat / sports

4ನೇ ಸ್ಥಾನ ತುಂಬಲು ಅನಿಲ್‌ ಕುಂಬ್ಳೆ ಬೆರಳು ಮಾಡಿ ತೋರಿಸಿದ ಆಟಗಾರ ಇವರು

ವಿಂಡೀಸ್‌​ ವಿರುದ್ಧ ಆರಂಭಗೊಳ್ಳಲಿರುವ ಏಕದಿನ ಸರಣಿಗಾಗಿ ಟೀಂ ಇಂಡಿಯಾ ಭರ್ಜರಿ ತಾಲೀಮು ನಡೆಸುತ್ತಿದೆ. ಆದ್ರೆ ತಂಡದ 4ನೇ ಕ್ರಮಾಂಕದಲ್ಲಿ ಈ ಆಟಗಾರ​ ಅದ್ಭುತವಾಗಿ ಆಡಬಲ್ಲರು ಎಂದು ಟೀಂ ಇಂಡಿಯಾ ಮಾಜಿ ಕೋಚ್​ ಅನಿಲ್​ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.

India vs West Indies
ಟೀಂ ಇಂಡಿಯಾ
author img

By

Published : Dec 13, 2019, 2:45 PM IST

ಚೆನ್ನೈ: ವೆಸ್ಟ್​​ ಇಂಡೀಸ್​​ ವಿರುದ್ಧ ನಡೆದ ಮೂರು ಟಿ-20 ಪಂದ್ಯಗಳ ಸರಣಿ ಗೆದ್ದಿರುವ ಟೀಂ ಇಂಡಿಯಾ, ಭಾನುವಾರದಿಂದ ಆರಂಭಗೊಳ್ಳಲಿರುವ ಏಕದಿನ ಸರಣಿ ಮೇಲೆ ಕಣ್ಣಿಟ್ಟಿದೆ.

ಏಕದಿನ ಕ್ರಿಕೆಟ್​ ಸರಣಿಯಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಯಾರು ಬ್ಯಾಟ್​ ಬೀಸಬೇಕು? ಎಂಬ ಪ್ರಶ್ನೆಗೆ ಇಲ್ಲಿಯವರೆಗೆ ಉತ್ತರ ಸಿಕ್ಕಿಲ್ಲ. ಕುಂಬ್ಳೆ ಪ್ರಕಾರ, ಯುವ ಆಟಗಾರ​ ಶ್ರೇಯಸ್​ ಅಯ್ಯರ್​ಗೆ ಆ ಸ್ಥಾನ ತುಂಬುವ ಯೋಗ್ಯತೆ ಹೊಂದಿದ್ದಾರೆ.

India vs West Indies
ಶ್ರೇಯಸ್​ ಅಯ್ಯರ್​​

ಈಗಾಗಲೇ ಕೆಲ ಪಂದ್ಯಗಳಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿರುವ ಅವರು ಆಯ್ಕೆ ಸಮಿತಿ ಮುಂದೆ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಹಾಗಾಗಿ ಈ ಆಟಗಾರನಿಗೆ ವಿಂಡೀಸ್​ ವಿರುದ್ಧದ ಸರಣಿಯಲ್ಲೂ ಚಾನ್ಸ್​ ನೀಡಬೇಕು ಅನ್ನೋದು ಕುಂಬ್ಳೆ ಅಭಿಮತ.

India vs West Indies
ಕೊಹ್ಲಿ ಜೊತೆ ಮಾಜಿ ಕೋಚ್​ ಅನಿಲ್​ ಕುಂಬ್ಳೆ (ಸಂಗ್ರಹ ಚಿತ್ರ)

ಇನ್ನು, ರೋಹಿತ್​ ಶರ್ಮಾ ಜೊತೆ ಕೆ.ಎಲ್.​ ರಾಹುಲ್​ಗೆ ಇನ್ನಿಂಗ್ಸ್​ ಆರಂಭಿಸಲು ಅವಕಾಶ​ ನೀಡಬೇಕು ಎಂದು ಹೇಳಿರುವ ಕುಂಬ್ಳೆ, ನಾಲ್ಕನೇ ಕ್ರಮಾಂಕವನ್ನು ಅಯ್ಯರ್​​ ತುಂಬಬಲ್ಲರು ಎಂದಿದ್ದಾರೆ.

ಭಾನುವಾರ ಚೆನ್ನೈನ ಎಂ.ಎ. ಚಿಂದಬರಂ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಟೀಂ ಇಂಡಿಯಾ ಗೆಲ್ಲುವ ನೆಚ್ಚಿನ ತಂಡವಾಗಿದೆ.

Intro:Body:

4ನೇ ಸ್ಥಾನಕ್ಕೆ ಈ ಪ್ಲೇಯರ್​​ ಸೂಕ್ತ... ಮಾಜಿ ಕೋಚ್​ ಕುಂಬ್ಳೆ ಬೆರಳು ಮಾಡಿದ್ದ ಈ ಯಂಗ್​ ಪ್ಲೇಯರ್​​ನತ್ತ! 

ಚೆನ್ನೈ: ವೆಸ್ಟ್​​ ಇಂಡೀಸ್​​ ವಿರುದ್ಧ ನಡೆದ ಮೂರು ಟಿ-20 ಪಂದ್ಯಗಳ ಸರಣಿಯನ್ನ ಟೀಂ ಇಂಡಿಯಾ 2-1 ಅಂತರದಿಂದ ಕೈವಶ ಮಾಡಿಕೊಂಡಿದ್ದು, ಇದೀಗ ಭಾನುವಾರದಿಂದ ಆರಂಭಗೊಳ್ಳಲಿರುವ ಏಕದಿನ ಸರಣಿ ಮೇಲೆ ಕೊಹ್ಲಿ ಪಡೆ ಕಣ್ಣು ನೆಟ್ಟಿದೆ. 

ಏಕದಿನ ಕ್ರಿಕೆಟ್​ ಸರಣಿಯಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಯಾರು ಬ್ಯಾಟ್​ ಬೀಸಬೇಕು ಎಂಬ ಪ್ರಶ್ನೆಗೆ ಇಲ್ಲಿಯವರೆಗೆ ಉತ್ತರ ಸಿಕ್ಕಿಲ್ಲವಾದ್ದರಿಂದ ಟೀಂ ಇಂಡಿಯಾ ಮಾಜಿ ಕೋಚ್​​ ಅನಿಲ್​ ಕುಂಬ್ಳೆ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಅವರ ಪ್ರಕಾರ ಮುಂಬೈ​​​ ಯಂಗ್​ ಪ್ಲೇಯರ್​ ಶ್ರೇಯಸ್​ ಅಯ್ಯರ್​ಗೆ ಆ ಸ್ಥಾನದಲ್ಲಿ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. 

ಈಗಾಗಲೇ ಕೆಲವೊಂದು ಪಂದ್ಯಗಳಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿ ಆಯ್ಕೆ ಸಮಿತಿ ಮುಂದೆ ತಮ್ಮ ಸಾಮರ್ಥ್ಯ ಸಾಭೀತು ಪಡಿಸಿರುವ ಈ ಪ್ಲೇಯರ್​ಗೆ ವೆಸ್ಟ್​​ ಇಂಡೀಸ್​ ವಿರುದ್ಧದ ಸರಣಿಯಲ್ಲೂ ಚಾನ್ಸ್​ ನೀಡಬೇಕು ಎಂದು ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ. 

ಇದೇ ವೇಳೆ ರೋಹಿತ್​ ಶರ್ಮಾ ಜತೆ ಕೆಎಲ್​ ರಾಹುಲ್​ಗೆ ಇನ್ನಿಂಗ್ಸ್​ ಆರಂಭ ಮಾಡಲು ಚಾನ್ಸ್​ ನೀಡಬೇಕು ಎಂದು ಹೇಳಿರುವ ಕುಂಬ್ಳೆ, ನಾಲ್ಕನೇ ಕ್ರಮಾಂಕ ಶ್ರೇಯಸ್​​ ಅಯ್ಯರ್​​ ತುಂಬಬಲ್ಲರು ಎಂದು ಹೇಳಿಕೊಂಡಿದ್ದಾರೆ. ಭಾನುವಾರ ಚೆನ್ನೈನ ಎಂಎ ಚಿಂದಬರಂ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಟೀಂ ಇಂಡಿಯಾ ಗೆಲ್ಲುನ ನೆಚ್ಚಿನ ತಂಡವಾಗಿದೆ.   

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.